ಮೋದಿಯವರೇ, ನಿಮಗ್ ಓಟು ಹಾಕೋದು ನಾಯಿಯಲ್ರೀ, ಮನುಷ್ಯರು: ಪ್ರಕಾಶ್ ರೈ!
Recommended Video

"ಪ್ರಧಾನಿ ಮೋದಿಯವರೇ, ನಿಮಗೆ ಮತ ಹಾಕುವುದು ನಾಯಿಗಳಲ್ಲ. ಮನುಷ್ಯರು" ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ ನಟ ಪ್ರಕಾಶ್ ರೈ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಟ್ವಿಟ್ಟರ್ ವಿಡಿಯೋ ಮೂಲಕ ಸಮರ ಸಾರಿದ್ದಾರೆ ಪ್ರಕಾಶ್ ರೈ.
ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಪ್ರಕಾಶ್ ರೈ, ಮೋದಿಯವರನ್ನು ನಂಬಬೇಡಿ, ಅವರು ಹೇಳುವುದೆಲ್ಲ ಸುಳ್ಳೇ ಎಂದು ಜನರಲ್ಲಿ ಮನವಿಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಬಾಗಲಕೋಟೆಯಲ್ಲಿ ಪ್ರಚಾರ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಮುಧೋಳದ ನಾಯಿಯನ್ನು ನೋಡಿ ಕಾಂಗ್ರೆಸ್ಸಿಗರು ದೇಶಪ್ರೇಮ ಕಲಿಯಬೇಕು ಎಂದಿದ್ದರು. ಮೋದಿಯವರ ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ, 'ನಿಮಗೆ ಮತ ನೀಡುವುದು ಮನುಷ್ಯರು. ನಾಯಿಗಳಲ್ಲ' ಎಂದಿದ್ದಾರೆ.
| Array |
ಯಾವ ಕಾಡಿನ ನ್ಯಾಯ ನಡೆಯುತ್ತಿದೆ ಇಲ್ಲಿ?
ಪ್ರಧಾನಿಗಳೇ, ನೀವು ದಲಿತರಿಗೆ ನೀವೇ ಆಶಾಕಿರಣ ಎನ್ನುತ್ತೀರಿ. ಜಿಗ್ನಾಶ್ ಮೇವಾನಿ ಅವರು ಹಿಂದು ವಿರೋಧಿ ಎನ್ನುತ್ತೀರಿ. ಅವರ್ಯಾಕೆ ಹಿಂದು ವಿರೋಧಿಯಾಗುತ್ತಾರೆ? ಅವರು ದಲಿತ ನಾಯಕ. ನೀವು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಹೋಗಿ ದಲಿತರ ಮನೆಯಲ್ಲಿ ಊಟ ಮಾಡಿಬಿಟ್ಟರೆ ದಲಿತ ನಾಯಕರಾಗೋಲ್ಲ. ನೀವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಫೆಬ್ರವರಿ 14 ರಂದು ಹುಡುಗ ಹುಡುಗಿ ಜೊತೆಯಲ್ಲಿದ್ದರೆ ಅವರನ್ನು ಹೊಡೆಯುವ ಕೆಲಸ ನಡೆಯುತ್ತಿದೆ. ಅವರು ಅಣ್ಣ-ತಂಗಿಯಾ? ಗಂಡ-ಹೆಂಡತಿಯಾ ಎಂಬುದನ್ನೂ ನೋಡೋಲ್ಲ. ಹೊಡೆದವರ ಮೇಲೆ ಕೇಸೂ ದಾಖಲಾಗೋಲ್ಲ. ದಲಿತ ಕುದುರೆ ಮೇಲೆ ಹೋದರೆ ಅವನನ್ನು ಹೊಡೆಯುತ್ತೀರಿ. ಯಾವ ಕಾಡಿನ ನ್ಯಾಯ ನಡೆಯುತ್ತಿದೆ ಇಲ್ಲಿ?
-ಪ್ರಕಾಶ್ ರೈ

ಜನರಿಗೆ ಅರ್ಥವಾಗೋದು ಇಷ್ಟೇ!
"ನಿಮ್ಮ ಬಗ್ಗೆ ನಂಗೆ ಅನುಮಾನ ಇದೆ. ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವುದ್ನು ಬಿಟ್ಟು ಮತ್ತೆ ಮತ್ತೆ ಬಂದು ಸುಳ್ಳು ಹೇಳುತ್ತಿದ್ದೀರಿ. ಪಾಪ ಮುಗ್ಧ ಜನರಿಗೆ ನಿಮ್ಮ ಮಾತುಗಳು ಅರ್ಥವಾಗೋಲ್ಲ. ಸಾಮಾನ್ಯ ಜನಕ್ಕೆ ನಿಮ್ಮ ಜಿಡಿಪಿ-ಪಿಡಿಪಿಗಳೆಲ್ಲ ಅರ್ಥವಾಗೋಲ್ಲ. ಅವರಿಗೆ ಅರ್ಥವಾಗೋದು ನಮ್ಮ ಮನೆಯ ಮಗನಿಗೆ ಯಾಕೆ ಕೆಲಸ ಬಂದಿಲ್ಲ ಅನ್ನೋದು ಮಾತ್ರ. "
-ಪ್ರಕಾಶ್ ರೈ

ಇವರನ್ನು ನಂಬಬೇಡಿ!
ಬ್ಯಾಂಕಿಗೆ ಹೋದರೆ ನಾನು ನನ್ನದೇ ಹಣವನ್ನು ಡ್ರಾ ಮಾಡೋಕೆ ಯಾಕೆ ಆಗ್ತಿಲ್ಲ? ನಾನು ತಿನ್ನೋ ಅನ್ನಕ್ಕೆ 18 ಪ್ರತಿಶತ ತೆರಿಗೆ ಯಾಕೆ ಕೊಡಬೇಕು? ಸಾಮಾನ್ಯ ಜನಕ್ಕೆ ಇಷ್ಟೇ ಅರ್ಥವಾಗೋದು. ನನಗೆ ಯಾರ ಬಗ್ಗೆಯೂ ದ್ವೇಷವಿಲ್ಲ, ನಾನು ಯಾವುದೇ ಧರ್ಮ ವಿರೋಧಿಯೂ ಅಲ್ಲ. ನೀವು ಮಾಡುತ್ತಿರುವುದು ಸರಿಯಿಲ್ಲ, ಅದಕ್ಕೇಂದೇ ನನ್ನ ಚುನಾಯಿತ ಪ್ರತಿನಿಧಿಯನ್ನ ಪ್ರಶ್ನೆ ಮಾಡ್ತಿದ್ದೀನಿ. ಆ ಕಾರಣಕ್ಕೆ ಜನರ ಬಳಿ ಹೇಳ್ತಾ ಇದ್ದೀನಿ. ಇವರನ್ನ ನಂಬಬೇಡಿ ಅಂತ."
-ಪ್ರಕಾಶ್ ರೈ
|
ನಮ್ಮ ಪಾಡು ನಾಯಿಪಾಡಾಗೋಕೆ ಬಿಡೋಲ್ಲ ನಾವು!
"ಮುಧೋಳದ ನಾಯಿ ನೋಡಿ ಕಲೀಬೇಕಂತೆ ನಾವು. ಮುಧೋಳದ ನಾಯಿಗೆ ಸೈನಿಕರ ತುಕಡಿಯಲ್ಲಿ ಕೆಲಸ ಕೊಡ್ತಾರಂತೆ ಇವರು. ನೀವು ಕರ್ನಾಟಕದಲ್ಲಿ ಎಲೆಕ್ಷನ್ ಗೆಲ್ಲೋಕೆ ನಾಯಿಗಳು ಓಟು ಹಾಕೋಲ್ಲ. ಇಲ್ಲಿಯ ನಾಯಿಗಳು ಕರ್ನಾಟಕದ ವಾತಾವರಣಕ್ಕೆ, ಇಲ್ಲಿನ ಜನರು ಹಾಕುವ ಊಟಕ್ಕೆ ನಮ್ಮ ಮನೆ ಕಾಯುತ್ತವೆ. ನಿಮಗೆ ಓಟು ಹಾಕೋದು ಯುವಕರು, ರೈತರು. ನಮ್ಮ ಪಾಡು ನಾಯಿ ಪಾಡಾಗೋಕೆ ಬಿಡೋಲ್ಲ ನಾವು. ನಿಮ್ಮ ವಯಸ್ಸು, ಮಾತಿಗೆ, ಪ್ರಧಾನಿ ಅನ್ನೋ ಸ್ಥಾನಕ್ಕೆ ಒಂಡು ಗೌರವ ಉಳಿಸಿಕೊಳ್ಳಿ"
-ಪ್ರಕಾಶ್ ರೈ












Click it and Unblock the Notifications