ಜೈಲಲಿತಾ, ವಾಜಪೇಯಿ, ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ವಿಫಲ ವ್ಯಕ್ತಿ: 234ನೇ ಚುನಾವಣೆಯಲ್ಲಿ ಸಿಎಂ ಬೊಮ್ಮಾಯಿಗೆ ಎದುರಾಳಿ
ಬೆಂಗಳೂರು, ಏಪ್ರಿಲ್ 14: ಕೇಂದ್ರ ಚುನಾವಣಾ ಆಯೋಗ ಘೋಷಿಸಿದಂತೆ ಮುಂದಿನ ತಿಂಗಳು ಮೇ 10ರಂದು ಕರ್ನಾಟಕದ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದೆ. ಮೆ 13ರಂದು ಮತ ಎಣಿಕೆ ನಡೆಯಲಿದೆ. ಇದುವರೆಗೂ 233 ಚುನಾವಣೆಗಳಲ್ಲಿ ದೇಶದ ಘಟಾನುಗಟಿ ಮುಖ್ಯಮಂತ್ರಿ, ಪ್ರಧಾನಿಮಂತ್ರಿಗಳ ವಿರುದ್ಧ ಸೋಲು ಕಂಡಿದ್ದ ವ್ಯಕ್ತಿ ಈ ಬಾರಿ ಕರ್ನಾಟಕದ ಸಿಎಂಗೆ ಬಸವರಾಜ ಬೊಮ್ಮಾಯಿಗೆ ಎದುರಾಳಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಮುಂದಿನ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಿಜೆಪಿಯ ಬಸವರಾಜ ಬೊಮ್ಮಾಯಿ ವಿರುದ್ಧ ಈ ವ್ಯಕ್ತಿ ಸೆಣಸಲಿದ್ದಾರೆ. ಪ್ರತಿಭಾರಿಯು ಇವರು ಇದೇ ರೀತಿ ವಿವಿಧ ಪಕ್ಷಗಳ ಪ್ರಮುಖ ನಾಯಕರ ವಿರುದ್ಧವೇ ಸ್ಪರ್ಧಿಸಿದ್ದಾರೆ. 2018ರಲ್ಲಿ ಅವರು ಈಗಿನ ಮಾಜಿ ಮುಖ್ಯಮಂತ್ರಿ ಸಿದ್ದರಮಯ್ಯ ವಿರುದ್ಧ ಚಾಮುಂಡೇಶ್ವರಿಯಿಂದ ಕಣಕ್ಕಿಳಿದಿದ್ದರು.

ಅವರ ಹೆಸರು ಕೆ ಪದ್ಮರಾಜನ್. 2023ನೇ ಚುನಾವಣೆ ಅವರ ಜೀವನದಲ್ಲಿನ 234ನೇ ಚುನಾವಣೆ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಬಾರಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
1988ರಿಂದ ಉಮೇದುವಾರಿಕೆ ಸಲ್ಲಿಸುತ್ತಿರುವ ಪದ್ಮರಾಜನ್ ಅವರು ಸೇಲಂನ ಮೆಟ್ಟೂರು ಮೂಲದ ನಿವಾಸಿಯಾಗಿದ್ದಾರೆ. ಅವರು ಅಧಿಸೂಚನೆ ಪ್ರಕಟಗೊಂಡ ಮೊದಲ ದಿನವೇ ಗುರುವಾರ ಅವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಕಣಕ್ಕಿಳಿಯಲು ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದರು.
ಸಿಎಂ-ಪಿಎಂ ಮುಂದೆಯು ಸ್ಪರ್ಧೆ
ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳ ಸಾರ್ವತ್ರಿಕ ಚುನಾವಣೆಗಳಲ್ಲಿ, ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳಲ್ಲೂ ಅವರ ಸ್ಪರ್ಧೆಗೆ ಇಳಿದಿದ್ದಾರೆ.ಆಗ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿಗಳಾದ ಕರುಣಾನಿಧಿ ಮತ್ತು ಜೆ ಜಯಲಲಿತಾ ಸೇರಿದಂತೆ ಹೀಗೆ ಪ್ರಬಲ ನಾಯಕರ ವಿರುದ್ಧ ಸ್ಪರ್ಧಿಸಿದ್ದಾರೆ.

ಹೀಗಾಗಿಯೇ ಕೆ,ಪದ್ಮನಾಭ ಅವರನ್ನು ಯಶಸ್ವಿಯಾಗದ (Unsuccessful) ಅಭ್ಯರ್ಥಿಗ ಅಂತಲೂ ಕರೆಯಲಾಗುತ್ತದೆ. ಅವರು ಮೆಟ್ಟೂರಿನಲ್ಲಿ ವಾಹನಗಳ ಫ್ಲಾಟ್ ಟೈರ್‌ಗಳನ್ನು ಸರಿಪಡಿಸುವ ಸ್ವಂತ ವ್ಯವಹಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪದ್ಮರಾಜನ್ ತಾವು ಹೋಮಿಯೋಪತಿ ವೈದ್ಯ ಎಂದು ಸಹ ಹೇಳಿಕೊಂಡಿದ್ದಾರೆ.
ಅತ್ಯಂತ ವಿಫಲ ಅಭ್ಯರ್ಥಿ ಎಂಬ ಗುರುತು
ಇನ್ನೂ ಚುನಾವಣೆ ವಿಚಾರವಾಗಿ ಅವರನ್ನು ನೋಡುವುದಾದರೆ ಭಾರತೀಯ ಪ್ರಜಾಪ್ರಭುತ್ವದಲ್ಲಿ 'ಅತ್ಯಂತ ವಿಫಲ ಅಭ್ಯರ್ಥಿ' ಎಂದೇ ಖ್ಯಾತಿ ಪಡೆದಿದ್ದಾರೆ. ಅವರು ಅದೇ ರೀತಿ ತಮ್ಮನ್ನು ತಾವು ಗುರುತಿಸಿಕೊಂಡವರು. ಅವರ ಚುನಾವಣೆ ಸ್ಪರ್ಧೆ, ಸೋಲು, ಪ್ರಬಲ ಎದುರಾಳಿ ಕ್ಷೇತ್ರಕ್ಕೆ ತೆರಳಿ ಅಲ್ಲಿ ನಾಮಪತ್ರ ಸಲ್ಲಿಕೆ ಸಂಬಂಧ ಅವರು ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ನಮೂದಿಸುವ ಮೂಲಕ ಗುರುತಿಸಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆಯಲ್ಲಿ ಪ್ರಚಾರದ ವೇಳೆ ಜನರಿಂದ ಸಿಗುವ ಗಳಿಸುವುದು ನನ್ನ ಉದ್ದೇಶವಾಗಿದೆ. ನಾನು ರಾಜಕೀಯ ಮಹಾನ್ ನಾಯಕ ವಿರುದ್ಧ ಎಂದಿಗೂ ಗೆಲ್ಲಲಾಗದ ಸಣ್ಣ ಮನುಷ್ಯ. ಜನರ ಪ್ರೀತಿ ಹಿಂದಿನಿಂದಲೂ ನನಗೆ ಸಿಗುತ್ತಲೇ ಇದೆ ಎಂದು ಪದ್ಮರಾಜನ್ ಸೋಲು-ಗೆಲುವಿನ ವಾಸ್ತವವನ್ನು ಒಪ್ಪಿಕೊಂಡಿದ್ದಾರೆ.
ಮಲಯಾಳಿ ಭಾಷೆ ಮಾತನಾಡುವ ಮೆಟ್ಟೂರಿನಲ್ಲಿ ನೆಲೆಸಿರುವ ಪದ್ಮರಾಜನ್ ಅವರು ಈಗ ಅನರ್ಹಗೊಂಡಿರುವ ವೈನಾಡ್ ಸಂಸದ ಮತ್ತು ಮಾಜಿ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ವಿರುದ್ಧ 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಅದು ನನ್ನ ಹಕ್ಕು ಎಂದು ಅವರು ಹೇಳುತ್ತಾರೆ.
1,890 ಮತ ಜತೆ ಪ್ರೀತಿ ಪಡೆದಿದ್ದ ಪದ್ಮರಾಜನ್
'ಅತ್ಯಂತ ವಿಫಲ ಅಭ್ಯರ್ಥಿ' ಎಂಬ ಕಾರಣಕ್ಕಾಗಿ ನಾನು ಚುನಾವಣೆಯಲ್ಲಿ 1,890 ಮತಗಳನ್ನು ಪಡೆದುಕೊಂಡು ಯಶಸ್ವಿಯಾಗಿದ್ದೇನೆ. ಪ್ರತಿ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಸುವಾಗ ಸ್ಪರ್ಧೆಯ ಠೇವಣಿಗೆ 5,000 ರೂಪಾಯಿ ಹಾಗೂ ಪಾವತಿಗೆ 10,000 ರೂಪಾಯಿ ಯಂತೆ ಇದುವರೆಗೆ ನಾನು ಅಂದಾಜು ಒಂದು ಕೋಟಿ ರೂಪಾಯಿಯಷ್ಟು ಹಣ ವ್ಯಯಿಸಿದ್ದಾರೆ ಎನ್ನಲಾಗಿದೆ.
ಮೆಟ್ಟೂರಿನ ಪದ್ಮರಾಜನ್ ಅವರಿಗೆ ಓರ್ವ ಪತ್ನಿ ಮತ್ತು ಪುತ್ರ ಇದ್ದಾರೆ. MBA ಪದವೀಧರರಾಗಿದ್ದಾರೆ ಮತ್ತು ಮೆಟ್ಟೂರಿನಲ್ಲಿಯೇ ಡಿಜಿಟಲ್ ಸೇವಾ ಕೇಂದ್ರದ ಔಟ್ಲೆಟ್ ಅನ್ನು ಸ್ಥಾಪಿಸಿಕೊಂಡು ಬದುಕು ಸಾಗಿಸುತ್ತದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications