ಹಸೆಮಣೆ ಏರುವ ಮುನ್ನ ಚಿಕ್ಕಮಗಳೂರಿನಲ್ಲಿ ಮತಚಲಾಯಿಸಿ ಮದುಮಗಳು
ಚಿಕ್ಕಮಗಳೂರು,ಮೇ10: ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಇಂದು(ಬುಧವಾರ) ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಹಸೆಮಣೆ ಏರುವ ಮುನ್ನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಮದುಮಗಳು ಮತಚಲಾಯಿಸಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮದುವೆ ಇರುವ ಹಿನ್ನೆಲೆ ಹಸೆಮಣೆ ಏರುವ ಮೊದಲೇ ಕುಟುಂಬದ ಸದಸ್ಯರ ಜೊತೆಗೆ ಮದುಮಗಳು ಮತಚಲಾಯಿಸಿದ್ದಾರೆ. ಹಸೆಮಣೆಗೂ ಮುನ್ನ ತಮ್ಮ ಜವಾಬ್ದಾರಿ ಮೆರೆದ ಮಧುಮಗಳು. ಮದುವೆ ಸಂದರ್ಭದಲ್ಲೂ ಮತದಾನ ಮಾಡಿ ಇತರರಿಗೂ ಸ್ಫೂರ್ತಿಯಾಗಿದ್ದಾರೆ.

ಇನ್ನೂ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಫಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ PS 187 ಮತಗಟ್ಟೆಯಲ್ಲಿ ನವ ವಧು ಕು.ಮೇಲಿಟಾ ಅವರು ಮತ ಚಲಾಯಿಸಿದರು.
ಚಿಕ್ಕಮಗಳೂರು: ಮತ ಹಾಕಿ ಹಸೆಮಣೆ ಏರಿದ ವಧು
— oneindiakannada (@OneindiaKannada) May 10, 2023
ಹೆಚ್ಚಿನ ಮಾಹಿತಿಗಾಗಿ...👇https://t.co/lGxeuzu4Nv
#KarnatakaAssemblyElection2023 #KarnatakaElections #KarnatakaElection2023 #Election2023 #KarnatakaElectionsWithOI pic.twitter.com/8ncui5lHnz
ಇನ್ನೂ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲಿ 5 ತಿಂಗಳ ಅವಳಿ ಮಕ್ಕಳೊಂದಿಗೆ ಮತಗಟ್ಟೆಗೆ ಬಂದ ದಂಪತಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.












Click it and Unblock the Notifications