Srirangapatna Constituency: ರವೀಂದ್ರ ಶ್ರೀಕಂಠಯ್ಯ-ರಮೇಶ್ ಬಾಬು- ಸಚ್ಚಿದಾನಂದ ಮಧ್ಯೆ ತ್ರಿಕೋನ ಸ್ಪರ್ಧೆ
ಬೆಂಗಳೂರು, ಏಪ್ರಿಲ್ 28: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲೂ ಪ್ರಚಾರದ ಕಾವು ಹೆಚ್ಚಾಗಿದೆ. ಹಾಲಿ ಶಾಸಕು ಮತ್ತು ಮಾಜಿ ಶಾಸಕರ ಮಧ್ಯೆ ಕಣ್ಣೀರ ಕದನವು ಜೋರಾಗಿದೆ. 2018ರಂತೆ ಈ ಭಾರಿಯು ಇಲ್ಲಿ ಪ್ರಬಲ ಪೈಪೋಟಿ ಕಂಡು ಬರಲಿದೆ.
ಶ್ರೀರಂಗಪಟ್ಟಣ ಅಖಾಡದಲ್ಲಿ ಜೆಡಿಎಸ್ ನಿಂದ ಹಾಲಿ ಶಾಸಕ ಡಾ.ರವೀಂದ್ರ ಶ್ರೀಕಂಠಯ್ಯ, ಕಾಂಗ್ರೆಸ್‌ನಿಂದ ಮಾಜಿ ಸಿಎಂ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡ ಮತ್ತು ಬಿಜೆಪಿಯಿಂದ ಇಂಡುವಾಳು ಸಚ್ಚಿದಾನಂದ ಅವರು ಸ್ಪರ್ಧೆಗೆ ಇಳಿದಿದ್ದಾರೆ. ಇಲ್ಲಿ ಒಟ್ಟು ಮೂವರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯುವ ಮೂಲಕ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ. ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಕಳೆದ ಬಾರಿ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದವರು. ಮಾಜಿ ಶಾಸಕ ರಮೇಶ್ ಬಾಬು ಸಹ ಜನಮನ್ನಣೆ ಗಳಿಸಿದ್ದು, ಕ್ಷೇತ್ರದಲ್ಲಿ ಅನುಭವಿಸಿದ್ದ ಹಿನ್ನಡೆಗೆ ಪ್ರತಿಕಾರ ತೀರಿಸಿಕೊಳ್ಳಲು ಕ್ಷೇತ್ರದ ತುಂಬೆಲ್ಲ ಓಡಾಟ ಆರಂಭಿಸಿದ್ದಾರೆ. ಇನ್ನೂ ಹಳೇ ಮೈಸೂರು ಭಾಗದಲ್ಲಿ ಭಾವುಟ ನೆಡಲು ಕಾಯುತ್ತಿರುವ ಬಿಜೆಪಿ ಇತ್ತೀಚೆಗಷ್ಟೇ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ ಇಂಡುವಾಳು ಸಚ್ಚಿದಾನಂದ ಅವರು ಬಿಜೆಪಿ ಸೇರಿದ್ದಾರೆ.
ತ್ರಿಕೋನ ಸ್ಪರ್ಧೆ ಹೇಗೆ
ಕ್ಷೇತ್ರದಲ್ಲಿ ಹಲವು ಕಾರಣಗಳಿಂದ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಆ ಕಾರಣಗಳು ಏನೆಂದು ನೋಡುವುದಾದರೆ, ಹಾಲಿ ಶಾಸಕರು ತಾವು ಮಾಡಿದ ಅಭಿವೃದ್ಧಿ, ಐದು ವರ್ಷಗಳ ವರ್ಚಸ್ಸು ಮುಂದಿಟ್ಟುಕೊಂಡ ಮತ ಯಾಚಿಸಲಿದ್ದಾರೆ. ಇತ್ತ ಬಿಜೆಪಿ ಇಂಡುವಾಳು ಸಚ್ಚಿದಾನಂದ ಅವರಿಗೆ ಇತ್ತೀಚೆಗೆ ಪ್ರಚಾರ ನಡೆಸಿದ್ದ ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಬೆಂಬಲ ಸಿಕ್ಕಿದೆ. ಅಲ್ಲದೇ ಬಿಜೆಪಿ ಆಡಳಿತಾರೂಢ ಪಕ್ಷವಾಗಿದೆ. ಜೊತೆಗೆ ಮಂಡ್ಯದಲ್ಲಿ ಗೆದ್ದು ಬೀಗಿದ ಸಂಸದೆ ಸುಮಲತಾ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸಚ್ಚಿದಾನಂದ ಸಹ ಬಹುಮತ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ಕಾಂಗ್ರೆಸ್‌ನ ರಮೇಶ್ ಬಾಬು ಅವರು ಮೊದಲು ಜೆಡಿಎಸ್‌ನಲ್ಲಿದ್ದವು. ಆಗ ಪಕ್ಷೇತರ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯನನ್ನು ಸೋಲಿಸಿದ್ದರು. ಬಳಿಕ ಕಾಂಗ್ರೆಸ್ ಸೇರಿದರು. ಪಕ್ಷೇತರ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಸೇರ್ಪಡೆಗೊಂಡರು. ಶಾಸಕರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ರಮೇಶ್ ಬಾಬು ಕಾಂಗ್ರೆಸ್ ಗ್ಯಾರಂಟಿ ಭರವಸೆಗಳನ್ನು ಅಸ್ತ್ರವಾಗಿ ಬಳಸಲಿದ್ದಾರೆ.

ಇಲ್ಲಿ ಮೂರು ಅಭ್ಯರ್ಥಿಗಳು ಪ್ರಬಲರಿದ್ದಾರೆ. ಮುಖ್ಯಮಂತ್ರಿ ಪ್ರಮುಖರ ನಾಯಕರ ಜೊತೆಗೆ ಕ್ಷೇತ್ರದ ವರ್ಚಸ್ಸನ್ನು ಹೆಚ್ಚಿಸಿದವರು, ವರ್ಷಪೂರ್ತಿ ಸಕ್ರಿಯವಾಗಿದ್ದರಂತೂ ಅಂತಹ ಅಭ್ಯರ್ಥಿಗಳು ಮಣಿಸುವುದು ಸುಲಭವಲ್ಲ. ಶ್ರೀರಂಗಪಟ್ಟದಲ್ಲಿ ಅಂತದ್ದೆ ವಾತಾವರಣ ಇದೆ. ಹೀಗಾಗಿ ಕ್ಷೇತ್ರದಲ್ಲಿ ಭಾರಿ ಜಿದ್ದಾ ಜಿದ್ದಿ ನಡೆಯಲಿದ್ದು, ತ್ರೀಕೋನ ಸ್ಪರ್ಧೆ ಏರ್ಪಡಲಿದೆ ಎಂದು ವಿಶ್ಲೇಷಿಸಲಾಗಿದೆ.
ಸಂಸದೆ ಸುಮಲತಾ ಬೆಂಬಲ ಬಿಜೆಪಿಗೆ ಶಕ್ತಿ
ಮಂಡ್ಯ ಭಾಗದಲ್ಲಿ ಗೆಲುವಿನ ನಗೆ ಬೀರಲು ತಂತ್ರ ರೂಪಿಸಿರುವ ಬಿಜೆಪಿ ಈ ಭಾಗದ ಏಳು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದೆ. ಬಿಜೆಪಿ ಕಾರ್ಯತಂತ್ರಕ್ಕೆ ಸುಮಲತಾ ಅವರು ಬೆಂಬಲಿಸಲಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ತಮಗೆ ಸಾಥ್ ನೀಡಿದ್ದ ಆಪ್ತ ಇಂಡುವಾಳ ಸಚ್ಚಿದಾನಂದ ಪರ ಸಂಸದೇ ಸುಮಲತಾ ಮತಯಾಚಿಸಲಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಗೆ ಕಣದಲ್ಲಿ ಅಗಾಧ ಶಕ್ತಿ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.
ಹಾಲಿ ಮಾಜಿ ಶಾಸಕ ಕಣ್ಣೀರ ಕದನ
ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಗೆಲುವಿಗಾಗಿ ಎಚ್ಚರಿಕೆ ಹೆಜ್ಜೆ ಇಡುತ್ತಿವೆ. ಪ್ರಚಾರದ ವೇಳೆ ಮಾಜಿ ಶಾಸಕ ರಮೇಶ್ ಬಾಬು ಅವರು ಕಣ್ಣೀರು ಹಾಕುತ್ತಾರೆ ಎಂದು ಹಾಲಿ ಶಾಸಕ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರು ವ್ಯಂಗ್ಯವಾಡಿದ್ದಾರೆ.
ನಾನು ಜನರ ಮುಂದೆ ಅಳುತ್ತೇನೆ. ಅವರು ಯಾರ ಮುಂದೆ ಅಳುತ್ತಾರೆ ಎಂದು ನಾನು ವಿಡಿಯೋ ತೋರಿಸಲಾ. ನಾನು ಕಣ್ಣೀರು ಹಾಕುವ ನನ್ನ ಬಗ್ಗೆ ಜಾತಕದಲ್ಲೇ ಇಲ್ಲ. ನಾನು ಮಂಡ್ಯ ಮಗ, ಬೇರೆಯವರನ್ನೇ ಅಳಿಸುವವನೆ ಹೊರತು ಅಳುವವನಲ್ಲ ಎಂದು ರಮೇಶ್ ಬಾಬು ತಿರುಗೇಟು ನೀಡಿದ್ದಾರೆ.
-
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್‌ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ












Click it and Unblock the Notifications