Karnataka Election Results: ಅತಿ ಕಡಿಮೆ, ಹೆಚ್ಚು ಮತಗಳ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಶನಿವಾರ, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷ ಅಂತಿಮವಾಗಿ 135 ಸ್ಥಾನಗಳನ್ನು ಜಯಿಸುವ ಮೂಲಕ ಅಧಿಕಾರದ ಗದ್ದುಗೆ ಪಡೆಯಲು ಸಜ್ಜಾಗಿದೆ.
ರಾಜ್ಯದ ಮತದಾರರು ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ, ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡಿದ್ದಾರೆ. ಇನ್ನು ಬಿಜೆಪಿ ಪಕ್ಷ 66 ಸ್ಥಾನಗಳಿಗೆ ಕುಸಿದಿದ್ದು, ಅಧಿಕೃತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಇನ್ನು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೇ ವೇಳೆ 4 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕರ್ನಾಟಕದಾದ್ಯಂತ ಎದ್ದಿದ್ದ ಆಡಳಿತ ವಿರೋಧಿ ಅಲೆ ಮತ್ತು ಕೈ ಪಡೆ ಘೋಷಿಸಿದ್ದ ಉಚಿತ ಭರವಸೆಗಳು ಕಾಂಗ್ರೆಸ್‌ಗೆ ಬಹುಮತ ಪಡೆಯಲು ಸಾಧ್ಯವಾಗಿದೆ. ಈ ಬಾರಿ ಬಿಜೆಪಿಯ ಘಟನಾನುಘಟಿ ಹಾಲಿ ಸಚಿವರು ಸೇರಿದಂತೆ 59 ಶಾಸಕರು ಸೋಲಿನ ರುಚಿ ಕಂಡಿದ್ದಾರೆ.

| ಗೆದ್ದ ಅಭ್ಯರ್ಥಿ | ಪರಾಜಿತ ಅಭ್ಯರ್ಥಿ | ಗೆಲುವಿನ ಅಂತರ | ಕ್ಷೇತ್ರ |
| ಡಿಕೆ ಶಿವಕುಮಾರ್ | ಬಿ. ನಾಗರಾಜ್ (ಜೆಡಿಎಸ್) | 1,22,392 ಮತ | ಕನಕಪುರ |
| ಗಣೇಶ್ ಹುಕ್ಕೇರಿ | ರಮೇಶ್ ಕತ್ತಿ (ಬಿಜೆಪಿ) | 77,749 ಮತ | ಚಿಕ್ಕೋಡಿ-ಸದಲಗಾ |
| ಲಕ್ಷ್ಮಣ ಸವದಿ | ಮಹೇಶ್ ಕುಮಟಳ್ಳಿ (ಬಿಜೆಪಿ) | 75,673 ಮತ | ಅಥಣಿ |
| ಎಸಿ ಶ್ರೀನಿವಾಸ್ | ಅಖಂಡ ಶ್ರೀನಿವಾಸಮೂರ್ತಿ (ಬಿಎಸ್‌ಪಿ) | 62,062 ಮತ | ಪುಲಕೇಶಿನಗರ |
| ಎಆರ್ ಕೃಷ್ಣಮೂರ್ತಿ | ಎನ್ ಮಹೇಶ್ (ಬಿಜೆಪಿ) | 59519 ಮತ | ಕೊಳ್ಳೇಗಾಲ |
| ಸತೀಶ್ ಜಾರಕಿಹೊಳಿ | ಬಸವರಾಜ್ ಹುಂದ್ರಿ (ಬಿಜೆಪಿ) | 57,046 ಮತ | ಯಮಕನಮರಡಿ |
| ಕೆಜೆ ಜಾರ್ಜ್ | ಪದ್ಮನಾಭರೆಡ್ಡಿ (ಬಿಜೆಪಿ) | 55,768 ಮತ | ಸರ್ವಜ್ಞ ನಗರ |
| ಲಕ್ಷ್ಮೀ ಹೆಬ್ಬಾಳ್ಕರ್ | ನಾಗೇಶ್ ಮನೋಳ್ಕರ್ (ಬಿಜೆಪಿ) | 55,546 ಮತ | ಬೆಳಗಾವಿ ಗ್ರಾಮೀಣ |
| ಆರ್. ಅಶೋಕ್ | ರಘುನಾಥನಾಯ್ಡು (ಕಾಂಗ್ರೆಸ್) | 55,175 ಮತ | ಪದ್ಮನಾಭನಗರ |
| ರವಿ ಸುಬ್ರಹ್ಮಣ್ಯ | ಯುಬಿ ವೆಂಕಟೇಶ್ (ಕಾಂಗ್ರೆಸ್) | 54,978 ಮತ | ಬಸವನಗುಡಿ |
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದಾಖಲೆಯ ಅಂತರದ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಜೆಡಿಎಸ್‌ನ ಬಿ ನಾಗರಾಜ್ ವಿರುದ್ಧ 1,22,392 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಅತಿ ಹೆಚ್ಚು ಮತಗಳಿಂದ ಜಯ ಸಾಧಿಸಿದ ಅಭ್ಯರ್ಥಿಯಾಗಿದ್ದಾರೆ.

ಕರ್ನಾಟಕದಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಗೆದ್ದವರ ಪಟ್ಟಿ
| ಗೆದ್ದ ಅಭ್ಯರ್ಥಿ | ಪರಾಜಿತ ಅಭ್ಯರ್ಥಿ | ಗೆಲುವಿನ ಅಂತರ | ಕ್ಷೇತ್ರ |
| ಸಿ.ಕೆ. ರಾಮಮೂರ್ತಿ | ಸೌಮ್ಯ ರೆಡ್ಡಿ (ಕಾಂಗ್ರೆಸ್) | 16 ಮತ | ಜಯನಗರ |
| ದಿನೇಶ್ ಗುಂಡೂರಾವ್ | ಸಪ್ತಗಿರಿಗೌಡ (ಬಿಜೆಪಿ) | 105 ಮತ | ಗಾಂಧಿನಗರ |
| ಟಿ.ಡಿ. ರಾಜೇಗೌಡ | ಡಿ.ಎನ್. ಜೀವರಾಜ್ (ಬಿಜೆಪಿ) | 201 ಮತ | ಶೃಂಗೇರಿ |
| ಕೆವೈ ನಂಜೇಗೌಡ | ಕೆಎಸ್ ಮಂಜುನಾಥ್ (ಬಿಜೆಪಿ) | 218 ಮತ | ಮಾಲೂರು |
| ದಿನಕರ ಶೆಟ್ಟಿ | ಸೂರಜ್ ಸೋನಿ (ಜೆಡಿಎಸ್) | 673 ಮತ | ಕುಮಟಾ |
| ನಯನ ಮೋಟಮ್ಮ | ದೀಪಕ್ ದೊಡ್ಡಯ್ಯ (ಬಿಜೆಪಿ) | 772 ಮತ | ಮೂಡಿಗೆರೆ |
| ದೇವೇಂದ್ರಪ್ಪ | ಎಸ್‌ವಿ ರಾಮಚಂದ್ರಪ್ಪ (ಬಿಜೆಪಿ) | 874 ಮತ | ಜಗಳೂರು |
ಇನ್ನು ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಅವರು ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಅತಿ ಕಡಿಮೆ ಅಂತರದ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಎದುರು ಕೇವಲ 16 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಜಯನಗರದ ಆರ್‌ವಿ ಕಾಲೇಜಿನಲ್ಲಿ ಶನಿವಾರ ಮಧ್ಯರಾತ್ರಿಯವರೆಗೂ ಮರು ಮತ ಎಣಿಕೆ ಮಾಡಲಾಯಿತು.












Click it and Unblock the Notifications