ಉಮಾಶ್ರೀ 'ಕೈ' ಹಿಡಿಯಲಿಲ್ಲ ತೇರದಾಳ: ಸಿದ್ದು ಸವದಿಗೆ ಅದೃಷ್ಟ ಖುಲಾಯಿಸಿತು.!
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿದ್ದ ಉಮಾಶ್ರೀ ಹೀನಾಯ ಸೋಲು ಕಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭೆ ಕ್ಷೇತ್ರದಲ್ಲಿ ನಟಿ ಹಾಗೂ ಸಚಿವೆ ಉಮಾಶ್ರೀ ಸೋಲು ಅನುಭವಿಸಿದ್ದಾರೆ.
ತೇರದಾಳ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡಲು ಉಮಾಶ್ರೀ ಸಾಕಷ್ಟು ಪ್ರಯತ್ನ ಪಟ್ಟಿದ್ದರು ಎಂಬ ಅಭಿಪ್ರಾಯ ಜನರಲ್ಲಿತ್ತು. ಆದ್ರೆ, ಇದೀಗ ಹೊರಬಿದ್ದಿರುವ ಜನಾದೇಶ ಉಮಾಶ್ರೀ ವಿರುದ್ಧವಾಗಿದೆ.

2013 ರ ವಿಧಾನಸಭೆ ಚುನಾವಣೆಯಲ್ಲಿ ಉಮಾಶ್ರೀ ವಿರುದ್ಧ ಸೋಲು ಕಂಡಿದ್ದ ಸಿದ್ದು ಸವದಿ ಈ ಬಾರಿ ಭರ್ಜರಿ ಜಯ ಸಾಧಿಸಿದ್ದಾರೆ. ಕಳೆದ ಬಾರಿ ಬಿಜೆಪಿ-ಕೆಜೆಪಿ ಗೊಂದಲ ಕಾರಣದಿಂದಾಗಿ ಸಿದ್ದು ಸವದಿ ಸೋಲು ಕಂಡಿದ್ದರು. ಆದ್ರೀಗ, ತೇರದಾಳ ಕ್ಷೇತ್ರದಲ್ಲಿ ಸಿದ್ದು ಸವದಿ ಮತ್ತೆ ಕಿಂಗ್ ಆಗಿದ್ದಾರೆ.
ಬಿಜೆಪಿ ಪಕ್ಷದ ಅಭ್ಯರ್ಥಿ ಸಿದ್ದು ಸವದಿ ಪಡೆದಿರುವ ಒಟ್ಟು ಮತಗಳು - 87213. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಉಮಾಶ್ರೀ ಪಡೆದಿರುವ ಒಟ್ಟು ಮತಗಳು - 66324. 12435 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ ಜೆ.ಡಿ.ಎಸ್ ನ ಬಸಪ್ಪ.ಕೆ.ಕೊಣ್ಣೂರು.












Click it and Unblock the Notifications