Karnataka Poll 2023: ಮೇ 10 ಮತದಾನ ದಿನ ಪ್ರವಾಸಿ ತಾಣಗಳಿಗೆ ನಿರ್ಬಂಧ, ಕಾರಣ ತಿಳಿಯಿರಿ

ಬೆಂಗಳೂರು, ಮೇ 09: ಕರ್ನಾಟಕ ರಾಜ್ಯ ಸಾರ್ವತ್ರಿಕ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 10ರಂದು ಅರ್ಹರು ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು. ರಜೆ ಸಿಕ್ಕಿದೆ ಎಂದು ಮತದಾನ ಮಾಡದೇ ತಾವು ಪ್ರವಾಸಿ ಸ್ಥಳ ತಾಣಗಳಿಗೆ ಹೋದರೆ ನಿಮಗೆ ಪ್ರವೇಶ ನಿರ್ಬಂಧವಿರಲಿದೆ.

ಮೇ 10ರಂದು ನಡೆಯಲಿರುವ ಮತದಾನ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ತಪ್ಪದೇ ಮತ ಚಲಾಯಿಸವು ಉದ್ದೇಶದಿಂದ ಸರ್ಕಾರ ರಜೆ ಘೋಷಿಸಿದೆ. ಇದರ ದುರ್ಬಳಕೆ ಆಗದಂತೆ ತಡೆಯಲು ಕೆಲ ಪ್ರಮುಖ ಪ್ರವಾಸಿ ತಾಣಗಳಿಗೆ ಮತದಾನದ ದಿನ ಬುಧವಾರ ಪ್ರವೇಶ ನಿರ್ಬಂಧವಿದೆ. ಆದರೆ ಮೈಸೂರು ಜಿಲ್ಲೆಯ ಟ್ರ್ಯಾವೆಲ್ಸ್ ಮಾಲೀಕರು ಮತದಾನ ಮಾಡಿ ಬಂದವರಿಗೆ ಪ್ರವಾಸಿ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

Karnataka Election Commission Prohibited tourist places

ಪ್ರವಾಸಿಗರ ನೆಚ್ಚಿನ ತಾಣ ಸಾಂಸ್ಕೃತಿಕ ನಗರಿ ಮೈಸೂರು. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಮೈಸೂರು ಟ್ರ್ಯಾವಲ್ಸ್ ಮಾಲೀಕರು ಕಡ್ಡಾಯ ಮತದಾನಕ್ಕೆ ಸಾಥ್ ನೀಡಿದ್ದಾರೆ. ಬುಧವಾರ ಮತ ಚಲಾಯಿಸಿದವರಿಗೆ ಮಾತ್ರ ಪ್ರವಾಸಿ ವಾಹನದಲ್ಲಿ ಪ್ರಯಾಣಿಸಲು ಇಲ್ಲವೇ ಬಳಸಲು ಅವಕಾಶ ನೀಡಲು ಮುಂದಾಗಿದ್ದಾರೆ. ಇದು ನಾಳೆ ಮೈಸೂರು ಪ್ರವಾಸಿ ತಾಣಗಳಿಗೆ ಬರುವ ನಮ್ಮ ರಾಜ್ಯದ ಪ್ರವಾಸಿಗರಿಗೆ ಅನ್ವಯವಾಗುತ್ತದೆ ಎಂದು ಟಿವಿ ನೈನ್ ಕನ್ನಡ ವರದಿ ಮಾಡಿದೆ.

ಮೈಸೂರು ವ್ಯಾಪ್ತಿಯಲ್ಲಿ ಮತದಾನ ಮಾಡಿದ ಗುರುತು ತೋರಿಸಿದವರಿಗೆ ಪ್ರವಾಸದ ವಾಹನ ನೀಡಲಾಗುವುದು ಎಂದು ಮೈಸೂರು ಟ್ರ್ಯಾವಲ್ಸ್ ಹೇಳಿದೆ. ಈ ಮೂಲಕ ಎಲ್ಲರೂ ನೀಡಿದ ರಜೆಯ ಅವಕಾಶ ಬಳಸಿಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಉತ್ತೇಜಿಸುತ್ತಿದೆ.

Karnataka Election Commission Prohibited tourist places

ಜೋಗ ಜಲಪಾತಕ್ಕೆ ಪ್ರವೇಶ ಇಲ್ಲ

ನಾಳೆ ಮೇ 10 ಬುಧವಾರದಂದು ಮತದಾನ ನಡೆಯಲಿದ್ದು, ಈ ಸಂಬಂಧ ವಿಶ್ವ ಪ್ರಸಿದ್ಧ ಜೋಗ ಜಲಪಾತದಲ್ಲಿ (Jog Falls) ಪ್ರವಾಸಿಗರಿಗೆ ಪ್ರವೇಶವನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ. ಮತದಾನಕ್ಕೆಂದು ನೀಡಿರುವ ರಜೆಯನ್ನು ಮತದಾನಕ್ಕೆ ಬಳಕೆಯಾಗಬೇಕು. ಕೆಲವು ರಜೆ ಸಿಕ್ಕಿತೆಂದು ಮೋಜು ಮಸ್ತಿ ಮಾಡಲು ಸಜ್ಜಾಗುತ್ತಾರೆ. ಅಂತವರಿಗೆ ಜೋಗ ಜಲಪಾತ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ನಿಷೇಧಿಸಲಾಗಿದೆ.

ಬೆಂಗಳೂರಿನ ನಂದಿ ಬೆಟ್ಟಕ್ಕೆ ನಿರ್ಬಂಧ

ಬೆಂಗಳೂರು ಹಾಗೂ ಸುತ್ತಮುತ್ತಲಿನವರನ್ನು ತನ್ನತ್ತ ಸೆಳೆಯುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮಕ್ಕೆ (Nandi Hill) ಬುಧವಾರ (ಮೇ 10) ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ.

ಬನ್ನೇರುಘಟ್ಟ ಪಾರ್ಕ್ ನಾಳೆ ನಿರ್ಬಂಧ

ಕರ್ನಾಟಕ ರಾಜ್ಯದಲ್ಲಿ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಬುಧವಾರ ಮತದಾನ ಪ್ರಯುಕ್ತ ಬಂದ್ ಮಾಡಲಾಗಿದೆ.

ಒಂದು ವೇಳೆ ಹೀಗೆ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರದೇ ಹೋದಲ್ಲಿ ಆಯಾ ತಾಣಗಳಲ್ಲಿನ ಛಾಯಾಚಿತ್ರಗಾರರು, ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳು, ಗೈಡ್, ಸಾರಿಗೆ, ಭದ್ರತಾ ಸಿಬ್ಬಂದಿ ಅವರೆಲ್ಲ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಿಂದ ಅವರೆಲ್ಲ ಮತದಾನದಿಂದ ಹೊರ ಗುಳಿಯಬೇಕಾಗುತ್ತದೆ. ಆದ್ದರಿಂದ ಮತದಾನ ದಿನ ಮೇಲಿನ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+