ಚುನಾವಣೆ: ಮತದಾನ ಮಾಡಿದ ಸಿದ್ದಗಂಗಾ ಶ್ರೀ, ವಚನನಾಂದ ಶ್ರೀ

ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದ್ದು, ಜನರು ಮತದಾನ ಮಾಡಲು ಮತಗಟ್ಟೆಗಳತ್ತ ಬರುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯೇ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿತ್ತು.

ಬುಧವಾರ ಮೇ 10ರಂದು ಮೊದಲ ಮತದಾನಿಗಳಾಗಿ ತುಮಕೂರಿನಲ್ಲಿ ಮತಗಟ್ಟೆಗೆ ಬಂದ ಸಿದ್ದಗಂಗಾ ಶ್ರೀಗಳು ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು ಮತದಾನ ರಕ್ತದಾನದಂತೆ ಶ್ರೇಷ್ಠ. ಒಂದು ಮತವು ಒಂದೊಂದು ರಕ್ತದ ಹನಿಗೂ ಸಮವಾಗಿದೆ. ಹಾಗಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.

voting

ಅದರಂತೆ ಬೆಂಗಳೂರಿನ ಭೂಪಸಂದ್ರದಲ್ಲಿ ಮತಗಟ್ಟೆಗೆ ತೆರಳಿ ಶ್ರೀ ವಚನಾನಂದ ಸ್ವಾಮೀಜಿ ಮತದಾನ ಮಾಡಿದರು. ಬಳಿಕ ಮಾತನಾಡಿ ಒಂದು ಮತ ನಿಮ್ಮ ಕ್ಷೇತ್ರದ, ರಾಜ್ಯದ ದಿಕ್ಕನ್ನೇ ಬದಲಿಸಬಹುದು. ಹೀಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.

ಇದಲ್ಲದೆ ಬೆಂಗಳೂರು ಬ್ಯಾಟರಾಯನಪುರ ವಿಧಾಸಭಾ ಕ್ಷೇತ್ರದ ಥಣಿಸಂದ್ರ ಮತಗಟ್ಟೆ 377 ರಲ್ಲಿ ಮೊದಲಿಗರಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಬಂದು ಮತ ಚಲಾವಣೆ ಮಾಡಿದರು. ಅಲ್ಲದೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರು ಕೂಡ ಮತದಾನ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+