Farmer: ಬರ ಪರಿಹಾರದ ₹2,500 ಪಡೆಯಲು ರೈತರಿಗೆ 17 ಷರತ್ತು? ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ತರಾಟೆ

ಬೆಂಗಳೂರು: ರಾಜ್ಯದಲ್ಲಿ ಒಟ್ಟು ತಾಲೂಕುಗಳ ಪೈಕಿ ಸುಮಾರು 226 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿರುವ ರಾಜ್ಯ ಸರ್ಕಾರ ಕೇಂದ್ರದ ಅನುದಾನಕ್ಕಾಗಿ ಕಾಯದೇ ನೆರವು ನೀಡಲು ಮುಂದಾಗಿದೆ. ಈಗಾಗಲೇ ಮೊದಲ ಕಂತಿನಲ್ಲಿ ಅರ್ಹರಿಗೆ 2,500 ರೂಪಾಯಿ ಪಾವತಿಗೆ ಆದೇಶಿಸಿದೆ. ಆದರೆ ಈ ಹಣ ಪಡೆಯಲು ರೈತರಿಗೆ ಸುಮಾರು 17 ಷರತ್ತುಗಳನ್ನು ವಿಧಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಬಿಜೆಪಿ ಕಣ್ಣು ಕೆಂಪಾಗುವಂತೆ ಮಾಡಿದೆ.

ರಾಜ್ಯದ ರೈತರು ಮಳೆ ಆಗದೇ, ಬಿತ್ತಿದ ಬೆಳೆ ಕೈಗೆ ಬಾರದೇ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ಎನ್‌ಡಿಆರ್ ಎಫ್ ಅನುದಾನ ಬಿಡುಗಡೆ ಕಾಯದೇ ಅರ್ಹರಿಗೆ ಮೊದಲ ಕಂತಿನಲ್ಲಿ 2,500 ರೂ. ಪರಿಹಾರ ಬಿಡುಗಡೆಗೆ ಆದೇಶಿಸಿದೆ. ಆದರೆ ಈ ಬರ ಪರಿಹಾರ ಪಡೆಯಲು ಫಲಾನುಭವಿಗಿಗೆ ವಿವಿಧ ಷರತ್ತುಗಳನ್ನು ವಿಧಿಸುವ ಮೂಲಕ ಆದಷ್ಟು ರೈತರನ್ನು ಹೊರ ಗಿಡಲು ಮುಂದಾಗಿದೆ ಎನ್ನಲಾಗುತ್ತಿದೆ. ಆ ಷರತ್ತುಗಳು ಯಾವುವು?, ಬಿಜೆಪಿ ಹೇಳಿದ್ದೇನು?

Karnataka Drought Relief

ಖಜಾನೆ ಖಾಲಿ, ರೈತರ ಪರಿಹಾರ ಹಣಕ್ಕೆ ನೆಪ: ವಿಜಯೇಂದ್ರ

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಧೋರಣೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, 'ಭೀಕರ ಬರಗಾಲದಿಂದ ಬೆಳೆ ಕಳೆದುಕೊಂಡು ಆತಂಕ ಎದುರಿಸುತ್ತಿರುವ ರಾಜ್ಯದ ಅನ್ನದಾತರಿಗೆ ಪರಿಹಾರ ನೀಡುವ ವಿಷಯದಲ್ಲಿ ಈ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಖೇದಕರ.

ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರೆ, ರಾಜ್ಯ ಸರ್ಕಾರ ಮಾತ್ರ ರೈತರಿಗೆ ತುರ್ತು ನೆರವು ನೀಡಿ ಸಂಕಷ್ಟ ಪರಿಹರಿಸುವ ಬದಲು ಪ್ರತಿಯೊಂದಕ್ಕೂ ನೆಪಗಳನ್ನು ಹುಡುಕುತ್ತಿದೆ. ಉಚಿತ ಗ್ಯಾರಂಟಿ ಹಾಗೂ ದುರಾಡಳಿತದಿಂದಾಗಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ರೈತರ ಮುಂದೆ ಒಪ್ಪಿಕೊಂಡಿದಂತೆ, ರಾಜ್ಯದ ಖಜಾನೆ ಖಾಲಿಯಾಗಿದೆ. ಹತಾಶ ಸ್ಥಿತಿಯಲ್ಲಿರುವ ಈ ಕಾಂಗ್ರೆಸ್ ಸರ್ಕಾರ ರೈತರಿಗೆ ಎಕರೆಗೆ ಕೇವಲ 2,500 ರೂಪಾಯಿಗಳ ಸಾಂಕೇತಿಕ ನೆರವು ನೀಡಲೂ ಕೂಡ 17 ಕಠಿಣ ಷರತ್ತುಗಳನ್ನು ವಿಧಿಸಿ, ಆದಷ್ಟು ರೈತರನ್ನು ಹೊರಗಿಡಲು ಮುಂದಾಗಿರುವುದು ದೊಡ್ಡ ದುರಂತ! ಎಂದು ಅವರು ಕಿಡಿ ಕಾರಿದ್ದಾರೆ.

ಸಂವೇದನೆಯಿಲ್ಲದ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ದಾರಿದ್ರ್ಯ ಹಾಗೂ ರೈತರ ವಿಷಯದಲ್ಲಿ ಅದಕ್ಕಿರುವ ಅಸಡ್ಡೆಗೆ ಇದು ಸುಸ್ಪಷ್ಟ ನಿದರ್ಶನವಾಗಿದೆ. ಪ್ರಜಾಸತ್ತಾತ್ಮಕ ಸರ್ಕಾರವೊಂದರ ಮೂಲಭೂತ ಹೊಣೆಗಾರಿಕೆ ಎಂದರೆ ಬಿಕ್ಕಟ್ಟಿನ ಸಮಯದಲ್ಲಿ ಪ್ರಜೆಗಳ ಕೈ ಹಿಡಿಯುವುದು. ಕಾಗದಗಳ ಮೇಲಿನ ಕಠಿಣ ನಿಯಮಗಳು ಹಾಗೂ ತಾಂತ್ರಿಕ ಅಡೆತಡೆಗಳು ಸಂಕಷ್ಟದಲ್ಲಿರುವ ಅನ್ನದಾತನ ಹೊಟ್ಟೆ ತುಂಬಿಸುವುದಿಲ್ಲ.

ಅನ್ನ ಕೊಡುವ ರೈತನ ಕಣ್ಣೀರು ಒರೆಸುವುದು ಸರ್ಕಾರದ ಶಾಸನಬದ್ಧ ಕರ್ತವ್ಯವೇ ಹೊರತು, ಆತನ ಮೇಲೆ ಯಾವ ದಯೆಯನ್ನೂ ತೋರುತ್ತಿಲ್ಲ, ತಾಂತ್ರಿಕ ನೆಪವೊಡ್ಡಿ ರೈತರನ್ನು ವಂಚಿಸುವುದು ಸರಿಯಲ್ಲ. ರಾಜ್ಯದ ಪ್ರತಿಯೊಬ್ಬ ರೈತನ ಹಕ್ಕಿಗಾಗಿ ಬೀದಿಗಿಳಿದು ಹೋರಾಡಲು ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಕೂಡ ಸಿದ್ಧವಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ತನ್ನ ಪ್ರಚಾರದ ಗೀಳನ್ನು ಕೈಬಿಟ್ಟು, ಈ ಷರತ್ತುಗಳನ್ನೆಲ್ಲಾ ಸಡಿಲಗೊಳಿಸಿ, ಸಂಕಷ್ಟಕ್ಕೊಳಗಾದ ಪ್ರತಿಯೊಬ್ಬ ರೈತನಿಗೂ ತಕ್ಷಣವೇ ಯೋಗ್ಯವಾದ ಬರ ಪರಿಹಾರ ತಲುಪಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತರಿಗೆ 'ಪಿಎಂ ಕಿಸಾನ್ ಸಮ್ಮಾನ್' ಹಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶದ ಕೋಟ್ಯಂತರ ರೈತರ ಖಾತೆಗೆ 'ಪಿಎಂ ಕಿಸಾನ್ ಸಮ್ಮಾನ್ ನಿಧಿ'ಯ ಹಣವನ್ನು ನೇರವಾಗಿ ತಲುಪಿಸುವ ಮೂಲಕ ಕೃಷಿಕರ ಬದುಕಿಗೆ ಸದಾ ಆಸರೆಯಾಗಿ ನಿಲ್ಲುವ ತಮ್ಮ ಬದ್ಧತೆ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಕೇಂದ್ರ ಸರ್ಕಾರ ರೈತರ ಗೌರವ ಮತ್ತು ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ನೆರವು ನೀಡುತ್ತಿದ್ದರೆ, ರಾಜ್ಯ ಸರ್ಕಾರ ಮಾತ್ರ ಬರದಿಂದ ತತ್ತರಿಸಿರುವ ರೈತರಿಗೆ ಕನಿಷ್ಠ ನೆರವು ನೀಡಲು ಮೀನಮೇಷ ಎಣಿಸುತ್ತಿದ್ದು, ನೂರಾರು ನೆಪ ಮತ್ತು ಕಠಿಣ ಷರತ್ತುಗಳ ಗೋಡೆ ಕಟ್ಟುತ್ತಿದೆ. ಇನ್ನಾದರೂ ಈ ಕಾಂಗ್ರೆಸ್ ಸರ್ಕಾರ ಆದ್ಯತೆಯ ಮೇರೆಗೆ ನಮ್ಮ ರೈತರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ತುರ್ತಾಗಿ ಸ್ಪಂದಿಸಲಿ ಎನ್ನುವುದೇ ನಮ್ಮ ಹಕ್ಕೊತ್ತಾಯವಾಗಿದೆ' ಎಂದು ಹೇಳಿದರು.

ರೈತರಿಗೆ ವಿಧಿಸಿದ 17 ಷರತ್ತುಗಳು ಯಾವುವು?

* ಫೂಟ್ಸ್‌ನಲ್ಲಿ ನೋಂದಣಿ ಮಾಡೋದು ಕಡ್ಡಾಯ

* ಗರಿಷ್ಠ ಎರಡು ಹೆಕ್ಟೇರ್ ಭೂಮಿಗೆ ಪರಿಹಾರ

* ಪರಿಹಾರ ತಂತ್ರಾಂಶದ ದತ್ತಾಂಶ ಪರಿಗಣನೆ-ಬೆಳೆ ಸಮೀಕ್ಷೆಯ ದಾಖಲೆ ಆಧಾರದಲ್ಲಿ ಅರ್ಹರ ಆಯ್ಕೆ.

* ಆಧಾರ್ ಜೋಡಿತ ಬ್ಯಾಂಕ್ ಖಾತೆಗೆ ಡಿಬಿಟ ಮೂಲಕ ಹಣವನ್ನು ಜಮೆ ಮಾಡುವುದು

* ಪರಿಹಾರಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಕೆ ಅಗತ್ಯವಿಲ್ಲ

* ಪರಿಹಾರ ನೀಡಲು ಸಣ್ಣ ರೈತರಿಗೆ ಮೊದಲ ಆದ್ಯತೆ

* ಜಂಟಿ ಖಾತೆದಾರರಿಗೆ ಭೂಮಿಯ ವಿಸ್ತೀರ್ಣದ ಆಧಾರದಲ್ಲಿ ಪರಿಹಾರ ಹಂಚಿಕೆ ಮಾಡುವುದು

* ವಿಸ್ತೀರ್ಣದ ಆರೋಹಣ ಕ್ರಮದಲ್ಲಿ ಪಾವತಿ

* ಮಳೆಯಾಶ್ರಿತ ಬೆಳೆಗಳಿಗೆ ಮೊದಲ ಆದ್ಯತೆ

* ನಂತರ ನೀರಾವರಿ ಬೆಳೆಗಳಿಗೆ ಪರಿಹಾರ

* ಬಹುವಾರ್ಷಿಕ ಬೆಳೆಗಳಿಗೆ ಕೊನೆಯ ಆದ್ಯತೆ

* ಒಂದೇ ಜಮೀನಿಗೆ ಎರಡು ಬಾರಿ ಪರಿಹಾರ ಇಲ್ಲ

* ಭೂಪರಿವರ್ತನೆಗೊಂಡ ಜಮೀನಿಗೆ ಪರಿಹಾರ ನೀಡುವುದಿಲ್ಲ

* ದಾಖಲೆಗಳ ಪರಿಶೀಲನೆ, ಅನುಮೋದನೆ ಕಡ್ಡಾಯ.

* ಸರ್ಕಾರಿ ಹಾಗೂ ಪರಿಹಾರವನ್ನು ಪಡೆದಿರುವ ಭೂಮಿ, ಜಮೀನಿಗೆ ಇದು ಅನ್ವಯ ಆಗುವುದಿಲ್ಲ.

ಹೀಗೆ ಹಲವು ಷರತ್ತು ವಿಧಿಸಿದ್ದರಿಂದ ಅನೇಕ ರೈತರಲ್ಲಿ ಆತಂಕ ಶುರುವಾಗಿದೆ. ಸರ್ಕಾರ ಹಣ ಉಳಿಸಲು, ಇಂಥಹ ಷರತ್ತು ವಿಧಿಸಿದೆ ಎಂಬ ಆರೋಪ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+