ಕರ್ನಾಟಕದ ಮೇಲೆ ವರುಣನ ಕೃಪೆ: ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
ಬೆಂಗಳೂರು, ಏಪ್ರಿಲ್ 19: ಕರ್ನಾಟಕದ ಜನತೆ ಬಿರು ಬಿಸಿಲಿನಿಂದ ತತ್ತರಿಸಿ ಹೋಗಿದ್ದು, ಕೊನೆಗೂ ವರುಣ ಕೃಪೆ ತೋರಿದ್ದಾನೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯುಗಾದಿ ಬಳಿಕ ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಜೋರು ಮಳೆಯಾಗುತ್ತಿದ್ದು, ರಾಜ್ಯದ ಜನತೆ ಸಂತಸದಲ್ಲಿದ್ದಾರೆ. ಇನ್ನೂ ಕಳೆದ ವರ್ಷ ಮಳೆ ಇಲ್ಲದೇ ರಾಜ್ಯದ ಜನತೆ ಕುಡಿಯುವ ನೀರಿಗಾಗಿಯೂ ಸಂಕಷ್ಟವನ್ನ ಎದುರಿಸಿದ್ದು, ಕರ್ನಾಟಕದ ಪ್ರಮುಖ ಜಲಾಶಯಗಳು ಸಹ ಖಾಲಿಯಾಗಿದ್ವು, ಹಾಗಾದ್ರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕ ಏಪ್ರಿಲ್ 19 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಕೆಆರ್ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ -38.04 ಮೀಟರ್
ಇಂದಿನ ನೀರಿನ ಮಟ್ಟ- 12.14 ಟಿಎಂಸಿ
ಒಳಹರಿವು - 86 ಕ್ಯೂಸೆಕ್
ಹೊರಹರಿವು - 765 ಕ್ಯೂಸೆಕ್
2. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 871.38 ಮೀಟರ್
ಇಂದಿನ ನೀರಿನ ಮಟ್ಟ - 3.13 ಟಿಎಂಸಿ
ಒಳಹರಿವು - 173 ಕ್ಯೂಸೆಕ್
ಹೊರಹರಿವು - 200 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ- 519.60 ಮೀಟರ್
ಇಂದಿನ ನೀರಿನ ಮಟ್ಟ - 33.18 ಟಿಎಂಸಿ
ಒಳಹರಿವು -0 ಕ್ಯೂಸೆಕ್
ಹೊರಹರಿವು - 1129 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 497.71 ಮೀಟರ್
ಇಂದಿನ ನೀರಿನ ಮಟ್ಟ-03.89 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 199 ಕ್ಯೂಸೆಕ್
5. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 633.80 ಮೀಟರ್
ಇಂದಿನ ನೀರಿನ ಮಟ್ಟ - 08.41 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 694 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 554.44 ಮೀಟರ್
ಇಂದಿನ ನೀರಿನ ಮಟ್ಟ - 23.99 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 3146 ಕ್ಯೂಸೆಕ್
7. ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 698.13 ಮೀಟರ್
ಇಂದಿನ ನೀರಿನ ಮಟ್ಟ - 8.17 ಟಿಎಂಸಿ
ಒಳಹರಿವು -15 ಕ್ಯೂಸೆಕ್
ಹೊರಹರಿವು - 800 ಕ್ಯೂಸೆಕ್
8. ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 657.73 ಮೀಟರ್
ಇಂದಿನ ನೀರಿನ ಮಟ್ಟ - 17.80 ಟಿಎಂಸಿ
ಒಳಹರಿವು - 170 ಕ್ಯೂಸೆಕ್
ಹೊರಹರಿವು - 413 ಕ್ಯೂಸೆಕ್
9. ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 662.91 ಮೀಟರ್
ಇಂದಿನ ನೀರಿನ ಮಟ್ಟ -20.18 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 4391 ಕ್ಯೂಸೆಕ್
10. ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ -890.58 ಮೀಟರ್
ಇಂದಿನ ನೀರಿನ ಮಟ್ಟ - 9.90 ಟಿಎಂಸಿ
ಒಳಹರಿವು -7 ಕ್ಯೂಸೆಕ್
ಹೊರಹರಿವು - 330 ಕ್ಯೂಸೆಕ್
11. ಸೂಫಾ ಜಲಾಶಯ
ಗರಿಷ್ಠ ನೀರಿನ ಮಟ್ಟ- 564.00 ಮೀಟರ್
ಇಂದಿನ ನೀರಿನ ಮಟ್ಟ- 43.78 ಟಿಎಂಸಿ
ಒಳಹರಿವು- 139 ಕ್ಯೂಸೆಕ್
ಹೊರಹರಿವು- 4268 ಕ್ಯೂಸೆಕ್












Click it and Unblock the Notifications