Karnataka Dam Water Level: ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಇಂದು ಪ್ರದೇಶವಾರು ಏರಿಳಿತ ಕಂಡುಬಂದಿದೆ. ಕೃಷ್ಣಾ ಜಲಾನಯನ ಪ್ರದೇಶದ ಆಲಮಟ್ಟಿ ಸೇರಿದಂತೆ ಕೆಲವು ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಒಳಹರಿವು ಕಡಿಮೆಯಾಗಿರುವುದು ಗಮನ ಸೆಳೆದಿದೆ. ಆಲಮಟ್ಟಿ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು ಭಾರಿ ಹೊರಹರಿವು ದಾಖಲಾಗಿದೆ. ಕೆಆರ್‌ಎಸ್‌ನಲ್ಲಿ ಒಳಹರಿವು ತಗ್ಗಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಮಳೆಯಾಗಿದೆ. ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯಾದರೆ, ಇನ್ನೂ ಕೆಲ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ಇತ್ತ ಮಳೆಯಿಂದಾಗಿ ಕೆಲ ಜಲಾಯಶಗಳು ಕೂಡ ಭರ್ತಿಯಾಗಿವೆ. ಹಾಗಾದರೆ ಮಳೆಯಿಂದಾಗಿ ಆಗಸ್ಟ್‌ 19 ರಂದು ಭದ್ರಾ, ಹಾರಂಗಿ, ಕಬಿನಿ, ಕೆಆರ್​ಎಸ್, ಹೇಮಾವತಿ, ಲಿಂಗನಮಕ್ಕಿ ಅಣೆಕಟ್ಟುಗಳ ನೀರಿನ ಮಟ್ಟ ಎಷ್ಟು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Karnataka Dams Water level KRS Kabini Bhadra dam water level as on August 19

KRSಗೆ ಒಳಹರಿವು ಇಳಿಕೆ

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. KRSನ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಪ್ರಸ್ತುತ ನೀರಿನ ಮಟ್ಟ 109.22 ಅಡಿಯಾಗಿದೆ. ಜಲಾಶಯದಲ್ಲಿ ಸುಮಾರು 30.944 TMC ನೀರಿನ ಸಂಗ್ರಹವಿದೆ. ಆದರೆ ಒಳಹರಿವು ಕೇವಲ 1,752 ಕ್ಯೂಸೆಕ್‌ಗೆ ಇಳಿಕೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ KRS ಒಳಹರಿವು ಇಳಿಕೆಯಾಗಿರುವುದು ಮಂಡ್ಯ ಭಾಗದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ರೈತರ ಬೆಳೆಗಳಿಗೆ ನೀರಿನ ಅಗತ್ಯವಿರುವ ಸಂದರ್ಭದಲ್ಲಿ ಕಾವೇರಿ ನದಿಗೆ ನೀರು ಹರಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಆಲಮಟ್ಟಿ ಬಹುತೇಕ ಭರ್ತಿ

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಪ್ರಸ್ತುತ 519.56 ಮೀಟರ್ ನೀರಿದೆ. ಒಳಹರಿವು 48,348 ಕ್ಯೂಸೆಕ್ ಇದ್ದರೆ, ಹೊರಹರಿವು 52,410 ಕ್ಯೂಸೆಕ್ ಇದೆ. ಹೀಗಾಗಿ ಜಲಾಶಯಕ್ಕೆ ಬರುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

ಕಬಿನಿಯಲ್ಲೂ ಹೊರಹರಿವು ಹೆಚ್ಚಳ

ಮೈಸೂರಿನ ಕಬಿನಿ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಪ್ರಸ್ತುತ 77.93 ಅಡಿ ನೀರಿದೆ. ಜಲಾಶಯದಲ್ಲಿ 15.87 TMC ಸಂಗ್ರಹವಿದೆ. ಒಳಹರಿವು 7,326 ಕ್ಯೂಸೆಕ್ ಇದ್ದರೆ, ಒಟ್ಟು ಹೊರಹರಿವು 13,600 ಕ್ಯೂಸೆಕ್ ಇದೆ. ಇದರಲ್ಲಿ 11,940 ಕ್ಯೂಸೆಕ್ ನದಿಗೆ ಹಾಗೂ 1,660 ಕ್ಯೂಸೆಕ್ ಕಾಲುವೆಗಳಿಗೆ ಹರಿಸಲಾಗುತ್ತಿದೆ.

ಭದ್ರಾ ಜಲಾಶಯದಲ್ಲಿ ಉತ್ತಮ ಸಂಗ್ರಹ

ಚಿಕ್ಕಮಗಳೂರು-ಶಿವಮೊಗ್ಗ ಗಡಿಭಾಗದ ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಯಾಗಿದ್ದು, ಪ್ರಸ್ತುತ 174 ಅಡಿ ನೀರಿದೆ. ಜಲಾಶಯದಲ್ಲಿ 57.257 TMC ನೀರಿನ ಸಂಗ್ರಹವಿದ್ದು, ಒಳಹರಿವು 4,486 ಕ್ಯೂಸೆಕ್ ಹಾಗೂ ಹೊರಹರಿವು 204 ಕ್ಯೂಸೆಕ್ ಇದೆ.

ಲಿಂಗನಮಕ್ಕಿಯಲ್ಲಿ ನೀರಿನ ಮಟ್ಟ ಏರಿಕೆ

ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲಿ ಇಂದು 0.20 ಅಡಿ ಏರಿಕೆಯಾಗಿದೆ. ಗರಿಷ್ಠ ಮಟ್ಟ 1,819 ಅಡಿಯಾಗಿದ್ದು, ಪ್ರಸ್ತುತ 1,795.35 ಅಡಿ ನೀರಿದೆ. ಜಲಾಶಯದ ಭರ್ತಿ ಪ್ರಮಾಣ ಶೇ.55.90ರಷ್ಟಿದ್ದು, ಒಳಹರಿವು 9,544 ಕ್ಯೂಸೆಕ್ ಇದೆ.

ಇತರೆ ಡ್ಯಾಂಗಳ ಮೇಲೂ ನಿಗಾ

ರಾಜ್ಯದ ಪ್ರಮುಖ ಜಲಾಶಯಗಳ ಪೈಕಿ ತುಂಗಭದ್ರಾ, ಹೇಮಾವತಿ, ಹಾರಂಗಿ, ಸೂಪಾ, ವರಾಹಿ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ ಹಾಗೂ ಹಿಡ್ಕಲ್ ಜಲಾಶಯಗಳ ನೀರಿನ ಮಟ್ಟದ ಮೇಲೂ ಜಲಸಂಪನ್ಮೂಲ ಇಲಾಖೆ ನಿರಂತರ ನಿಗಾ ವಹಿಸಿದೆ.

ಒಟ್ಟಾರೆ ರಾಜ್ಯದ ಜಲಾಶಯಗಳ ಸ್ಥಿತಿಯನ್ನು ಗಮನಿಸಿದರೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ ಉತ್ತಮವಾಗಿದ್ದು, ಆಲಮಟ್ಟಿ ಭರ್ತಿ ಹಂತ ತಲುಪಿರುವುದು ಪ್ರಮುಖ ಬೆಳವಣಿಗೆ . ಮತ್ತೊಂದೆಡೆ, ಕಾವೇರಿ ಜಲಾನಯನ ಪ್ರದೇಶದಲ್ಲಿ KRS ಸೇರಿದಂತೆ ಕೆಲವು ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಮುಂದಿನ ದಿನಗಳಲ್ಲಿ ಮಲೆನಾಡು ಹಾಗೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ KRS, ಕಬಿನಿ, ಹೇಮಾವತಿ ಮತ್ತು ಹಾರಂಗಿ ಸೇರಿದಂತೆ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಮಳೆ ದುರ್ಬಲವಾಗಿಯೇ ಮುಂದುವರಿದರೆ ನೀರಿನ ಹಂಚಿಕೆ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+