Karnataka Dams Water Level: ನವೆಂಬರ್‌ 5ರಂದು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು?, ಇಲ್ಲಿದೆ ಮಾಹಿತಿ

ಕರ್ನಾಟಕ, ನವೆಂಬರ್‌, 05: ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಳೆದ ಎರಡು ದಿನಗಳಿಂದ ಹಿಂಗಾರು ಮಳೆ ಚುರುಕು ಪಡೆದಿದ್ದು, ಇನ್ನು ಬಹುತೇಕ ಕಡೆಗಳಲ್ಲಿ ಮಳೆಯಿಲ್ಲದೆ ಬಿಸಿಲಿನ ವಾತಾವರಣವೇ ಮುಂದುವರೆದಿದೆ. ಪರಿಣಾಮ ಹಲವೆಡೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಕುಸಿತ್ತಲೇ ಇದೆ. ಹಾಗಾದರೆ ಇಂದು (ನವೆಂಬರ್‌ 05) ಜಲಾಶಯಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಇದೀಗ 22.36 ಟಿಎಂಸಿ ಇದೆ. ಈ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದ್ದು, ಇಂದಿನ ನೀರಿನ ಮಟ್ಟ 22.36 ಟಿಎಂಸಿ, ಒಳಹರಿವು 863 ಕ್ಯೂಸೆಕ್‌ ಇದ್ದರೆ, ಹೊರಹರಿವು - 567 ಕ್ಯೂಸೆಕ್‌ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇನ್ನುಳಿದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ ಗಮನಿಸಿ.

Karnataka Dams Water Level: KRS, Harangi, Bhadra Dams Water Level on november 05, 2023

1. ಹಾರಂಗಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 871.38 ಮೀಟರ್‌

* ಇಂದಿನ ನೀರಿನ ಮಟ್ಟ - 5.55 ಟಿಎಂಸಿ

* ಒಳಹರಿವು - 155 ಕ್ಯೂಸೆಕ್‌

* ಹೊರಹರಿವು - 250 ಕ್ಯೂಸೆಕ್‌

2. ಕೆಆರ್​ಎಸ್ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 124.80 ಅಡಿ

* ಇಂದಿನ ನೀರಿನ ಮಟ್ಟ- 22.36 ಟಿಎಂಸಿ

* ಒಳಹರಿವು - 863 ಕ್ಯೂಸೆಕ್‌

* ಹೊರಹರಿವು - 567 ಕ್ಯೂಸೆಕ್‌

3. ಆಲಮಟ್ಟಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಇಂದಿನ ನೀರಿನ ಮಟ್ಟ - 86.21 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 13,286 ಕ್ಯೂಸೆಕ್‌

4. ತುಂಗಭದ್ರಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್‌

* ಇಂದಿನ ನೀರಿನ ಮಟ್ಟ- 29.76 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 9,152 ಕ್ಯೂಸೆಕ್‌

5. ಮಲಪ್ರಭಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 633.80 ಮೀಟರ್‌

* ಇಂದಿನ ನೀರಿನ ಮಟ್ಟ - 18.17 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 554.44 ಮೀಟರ್‌

* ಇಂದಿನ ನೀರಿನ ಮಟ್ಟ - 63.90 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 2708 ಕ್ಯೂಸೆಕ್‌

7. ಕಬಿನಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 696.13 ಮೀಟರ್‌

* ಇಂದಿನ ನೀರಿನ ಮಟ್ಟ - 13.21 ಟಿಎಂಸಿ

* ಒಳಹರಿವು - 258 ಕ್ಯೂಸೆಕ್‌

* ಹೊರಹರಿವು - 500 ಕ್ಯೂಸೆಕ್‌

8. ಭದ್ರಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌

* ಇಂದಿನ ನೀರಿನ ಮಟ್ಟ - 36.86 ಟಿಎಂಸಿ

* ಒಳಹರಿವು - 427 ಕ್ಯೂಸೆಕ್‌

* ಹೊರಹರಿವು - 2,857 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 662.91 ಮೀಟರ್‌

* ಇಂದಿನ ನೀರಿನ ಮಟ್ಟ - 40.70 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 141 ಕ್ಯೂಸೆಕ್‌

10. ಹೇಮಾವತಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 890.58 ಮೀಟರ್‌

* ಇಂದಿನ ನೀರಿನ ಮಟ್ಟ - 15.21 ಟಿಎಂಸಿ

* ಒಳಹರಿವು - 559 ಕ್ಯೂಸೆಕ್‌

* ಹೊರಹರಿವು - 5,370 ಕ್ಯೂಸೆಕ್‌

ಇನ್ನು ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಬಾಗಲಕೊಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳಲಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಅಬ್ಬರಿಸಲಿದೆ ಎನ್ನುವ ಮುನ್ಸೂಚನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+