Karnataka Dams: ಕೆಆರ್‌ಎಸ್ ಜಲಾಶಯದಲ್ಲಿ ಈಗ ಎಷ್ಟಿದೆ ನೀರಿನ ಮಟ್ಟ? ರಾಜ್ಯ ಜಲಾಶಯಗಳ ನೀರಿನ ಮಾಹಿತಿ ಇಲ್ಲಿದೆ!

ಮುಂಗಾರು ಮಳೆ ಕಣ್ಣಾಮುಚ್ಚಾಲೆ ಮುಂದುವರಿಸಿದ್ದು, ರಾಜ್ಯದಲ್ಲಿ ಈ ಬಾರಿ ಬರ ಸ್ಥಿತಿ ಪಕ್ಕಾ ಆಗಿದೆ. ಹೀಗಾಗಿ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಕೂಡ ಭಾರಿ ಕುಸಿತ ಕಂಡಿದೆ. ಅದರಲ್ಲೂ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳ ನೀರು ಖಾಲಿಯಾಗುವ ಹಂತಕ್ಕೆ ತಲುಪಿದೆ. ಈ ಪೈಕಿ ಕೆಆರ್‌ಎಸ್ ಡ್ಯಾಂನ ಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕ ಎಂಬಂತಾಗಿದೆ.

ಕಳೆದ ಕೆಲವು ದಿನಗಳಿಂದ ಮಳೆ ಸುರಿದರೂ ಕಾವೇರಿ ನದಿಯ ಒಡಲು ತುಂಬಿ ಹರಿದಿಲ್ಲ. ಹೀಗಾಗಿ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುವ ನೀರು ಕೂಡ ಹೆಚ್ಚಾಗಿಲ್ಲ. ಇಷ್ಟೆಲ್ಲಾ ಸಂಕಷ್ಟದ ನಡುವೆ ಕೆಆರ್‌ಎಸ್ ಜಲಾಶಯದಲ್ಲಿ ನೀರು ಕಡಿಮೆ ಆಗಿದ್ದು, ತಮಿಳುನಾಡು ಬೇರೆ ನೀರಿಗಾಗಿ ಕಿರಿಕ್ ತೆಗೆದಿದೆ. ಹೀಗಾಗಿ ಕರ್ನಾಟಕ ಕೂಡ ತಮಿಳುನಾಡು ಸರ್ಕಾರದ ವಿರುದ್ಧ ತಿರುಗಿಬಿದ್ದು, ಕಾವೇರಿ ನೀರು ಬಿಡುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದ ನಡುವೆಯೂ ಕೆಆರ್‌ಎಸ್ ಜಲಾಶಯದಲ್ಲಿ ಭಯಾನಕ ಪರಿಸ್ಥಿತಿ ಎದುರಾಗಿದೆ.

Karnataka Dams Water Level: KRS, Harangi, Bhadra Dams Water Level on September 13, 2023

ರಾಜ್ಯದ ಜಲಾಶಯಗಳ ಪರಿಸ್ಥಿತಿ ಏನು?

ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜ ಸಾಗರ (KRS) ನೀರಿನ ಮಟ್ಟ ಕುಸಿದಿದ್ದರೆ. ಇದೇ ಪರಿಸ್ಥಿತಿ ಇತರ ಜಲಾಶಯಗಳಿಗೂ ಕಾಡುತ್ತಿದೆ. ಹೀಗಾಗಿ ರಾಜ್ಯ ಬರ ಪರಿಸ್ಥಿತಿ ಎದುರಿಸುವುದು ಬಹುತೇಕ ಪಕ್ಕಾ ಆಗಿದ್ದು ಕುಡಿಯುವ ನೀರಿಗೂ ಈ ಬಾರಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹಾಗಾದ್ರೆ ರಾಜ್ಯದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಕರ್ನಾಟಕ ಜಲಾಶಯಗಳ ನೀರಿನ ಮಟ್ಟ

1) ಹಾರಂಗಿ ಡ್ಯಾಂ: ಹಾರಂಗಿ ಗರಿಷ್ಠ 8.50 ಟಿಎಂಸಿ ಸಾಮರ್ಥ್ಯ ಹೊಂದಿದ್ದು, 8.32 TMC ನೀರು ಸಂಗ್ರಹವಾಗಿದೆ. ಕಳೆದ ವರ್ಷ 8.02 ಟಿಎಂಸಿ ನೀರು ಇತ್ತು. ಹಾರಂಗಿ ಜಲಾಶಯದ ಒಳಹರಿವು 1582 ಕ್ಯುಸೆಕ್, 100 ಕ್ಯುಸೆಕ್ ಹೊರಹರಿವು ಇದೆ.

2) ಹೇಮಾವತಿ ಡ್ಯಾಂ: 37.10 ಟಿಎಂಸಿ ಸಾಮರ್ಥ್ಯದ ಹೇಮಾವತಿ ಡ್ಯಾಂನಲ್ಲಿ ಈಗ 19.46 ಟಿಎಂಸಿ ನೀರು ಇದ್ದು ಕಳೆದ ವರ್ಷ 37.01 ಟಿಎಂಸಿ ನೀರು ಇತ್ತು. 1061 ಕ್ಯುಸೆಕ್ ಒಳಹರಿವು ಇದ್ದು, 6000 ಕ್ಯುಸೆಕ್ ಹೊರಹರಿವು ದಾಖಲಾಗಿದೆ.

Karnataka Dams Water Level: KRS, Harangi, Bhadra Dams Water Level on September 13, 2023

3) ಕಬಿನಿ ಜಲಾಶಯ: ಕಬಿನಿ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಈಗ 14.77 ಟಿಎಂಸಿ ಸಂಗ್ರಹವಾಗಿದೆ. ಕಳೆದ ವರ್ಷ ಕಬಿನಿ ಜಲಾಶಯದಲ್ಲಿ 19.45 ನೀರು ಸಂಗ್ರಹವಾಗಿತ್ತು.

4) ಕೆಆರ್‌ಎಸ್ ​ ಜಲಾಶಯ: 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಜಲಾಶಯದಲ್ಲಿ 21.25 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಕೆಆರ್‌ಎಸ್ ​ ಜಲಾಶಯದಲ್ಲಿ 49.15 ಟಿಎಂಸಿ ನೀರು ಸಂಗ್ರಹವಾಗಿತ್ತು. ಕೆಆರ್‌ಎಸ್‌ಗೆ 3,502 ಕ್ಯುಸೆಕ್ ನೀರು ಬರುತ್ತಿದೆ. 4,253 ಹೊರಹರಿವು ದಾಖಲಾಗಿದೆ.

5) ಭದ್ರಾ ಡ್ಯಾಂ: ಭದ್ರಾ ಡ್ಯಾಂ 71 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದೆ. ಈಗ 44.38 ಟಿಎಂಸಿ ಇದ್ದು ಕಳೆದ ವರ್ಷ ಈ ವೇಳೆಗೆ ಭದ್ರಾ ಜಲಾಶಯದಲ್ಲಿ 70 ಟಿಎಂಸಿ ಸಂಗ್ರಹ ಇತ್ತು. ಭದ್ರಾ ಡ್ಯಾಂಗೆ 431 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ವೇಳೆ ಕೃಷಿಗೆ ನೀರು ಹರಿಸುತ್ತಿರುವ ಕಾರಣ 2,492 ಹೊರಹರಿವು ಇದೆ.

6) ತುಂಗಭದ್ರಾ ಡ್ಯಾಂ: ಗರಿಷ್ಠ 105 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ 68.50 ಟಿಎಂಸಿ ಸಂಗ್ರಹವಾಗಿದೆ. ಕಳೆದ ವರ್ಷ 104.66 ಟಿಎಂಸಿ ನೀರು ಇತ್ತು. ತುಂಗಭದ್ರಾ ಒಳಹರಿವು ಕೇವಲ 2,554 ಕ್ಯುಸೆಕ್ ಮತ್ತು ಹೊರ ಹರಿವು 10,272ಕ್ಕೆ ಏರಿಕೆ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಭೀತಿ ಕಾಡುತ್ತಿದೆ.

7) ಆಲಮಟ್ಟಿ ಡ್ಯಾಂ: ಆಲಮಟ್ಟಿ ಬಹುತೇಕ ತುಂಬಿದ್ದು, ಒಟ್ಟು ಸಾಮರ್ಥ್ಯ 123.08 ಟಿಎಂಸಿ. ಈಗ 113.11 ಟಿಎಂಸಿ ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಈ ಸಮಯಕ್ಕೆ 122.66 ಟಿಎಂಸಿ ನೀರು ಇತ್ತು. ಆಲಮಟ್ಟಿ ಡ್ಯಾಂ ಒಳ ಹರಿವು 00 ಕ್ಯುಸೆಕ್ ಇದ್ದು, 11,296 ಕ್ಯುಸೆಕ್ ಹೊರಹರಿವು ದಾಖಲಾಗಿದೆ.

8) ಘಟಪ್ರಭಾ ಡ್ಯಾಂ: ಇಲ್ಲಿ 51 ಟಿಎಂಸಿ ಗರಿಷ್ಠ ಸಾಮರ್ಥ್ಯ, ಈಗ 41.79 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ಘಟಪ್ರಭಾ ​ಜಲಾಶಯದಲ್ಲಿ 51.00 ಟಿಎಂಸಿ ನೀರು ಇತ್ತು. ಘಟಪ್ರಭಾಗೆ 1177 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 186 ಕ್ಯುಸೆಕ್ ಹೊರಹರಿವು ಇದೆ.

9) ಮಲಪ್ರಭಾ ಡ್ಯಾಂ: 37.73 ಟಿಎಂಸಿ ಗರಿಷ್ಠ ಸಾಮರ್ಥ್ಯ ಮಲಪ್ರಭಾ ಜಲಾಶಯಕ್ಕೆ ಇದೆ. ಇದೀಗ 21.59 ಟಿಎಂಸಿ ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ಮಲಪ್ರಭ ​ಜಲಾಶಯದಲ್ಲಿ 37.73 ಟಿಎಂಸಿ ಸಂಗ್ರಹವಾಗಿತ್ತು. ಈಗ ಮಲಪ್ರಭಾ ಜಲಾಶಯಕ್ಕೆ 00 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹೊರಹರಿವು 194 ಕ್ಯುಸೆಕ್ ದಾಖಲಾಗಿದೆ.

10) ಸೂಫಾ ಡ್ಯಾಂ: ಸೂಫಾ ಡ್ಯಾಂಗೆ ಕೂಡ ನೀರಿನ ಕೊರತೆ ಕಾಡುತ್ತಿದೆ. ಡ್ಯಾಂ ಸಾಮರ್ಥ್ಯ 145 ಟಿಎಂಸಿ ಆಗಿದ್ದು, 77.72 ಈಗ ಸಂಗ್ರಹವಾಗಿದೆ. ಕಳೆದ ವರ್ಷ 97.14 ನೀರು ಇತ್ತು. ಒಳಹರಿವು 3,866 ಕ್ಯುಸೆಕ್ ಇದ್ದು, 2,483 ಕ್ಯುಸೆಕ್ ಹೊರಬಿಡಲಾಗುತ್ತಿದೆ.

11) ವರಾಹಿ ಜಲಾಶಯ: ಗರಿಷ್ಠ ಸಾಮರ್ಥ್ಯ 31 ಟಿಎಂಸಿ, ಈಗ 9.62 ಟಿಎಂಸಿ ನೀರು ಇದೆ. ಕಳೆದ ವರ್ಷ ವರಾಹಿ ​ ಡ್ಯಾಂನಲ್ಲಿ 22.39 ಟಿಎಂಸಿ ನೀರು ಇದೆ ಸಮಯಕ್ಕೆ ಸಂಗ್ರಹವಾಗಿತ್ತು. ವರಾಹಿ​ ಡ್ಯಾಂಗೆ 700 ಕ್ಯುಸೆಕ್ ಬರುತ್ತಿದೆ, ಹೊರಹರಿವು 00 ಕ್ಯುಸೆಕ್ ಆಗಿದೆ.

12) ಲಿಂಗನಮಕ್ಕಿ ಡ್ಯಾಂ: ಮಳೆ ಕೊರತೆ ಹಿನ್ನೆಲೆ ಲಿಂಗನಮಕ್ಕಿ ಸಾಮರ್ಥ್ಯ 151 ಟಿಎಂಸಿ ಇದ್ದರೂ ಕೇವಲ 67.13 ಟಿಎಂಸಿ ನೀರು ಸಂಗ್ರಹ ಇದೆ. ಆದರೆ ಕಳೆದ ವರ್ಷ ಈ ವೇಳೆಗೆ 139.75 ಟಿಎಂಸಿ ನೀರು ಇತ್ತು. ಒಳಹರಿವು 3,617 ಸಾವಿರ ಕ್ಯುಸೆಕ್‌ಗೆ ಕುಸಿದಿದ್ದು, 5,709 ಕ್ಯುಸೆಕ್ ಹೊರಹರಿವು ದಾಖಲಾಗಿದೆ.

ಒಟ್ನಲ್ಲಿ ಕರ್ನಾಟಕದ ಪರಿಸ್ಥಿತಿ ಚಿಂತಾಜನಕವಾಗಿದ್ದು, ನೀರಿನ ಕೊರತೆ ನಡುವೆ ಬರ ಸ್ಥಿತಿ ಎದುರಾಗಿದೆ. ಈಗಾಗಲೇ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸಲು ಸಿದ್ಧತೆ ಕೂಡ ನಡೆದಿದೆ. ಆದರೆ ಕುಡಿಯುವ ನೀರಿಗೂ ಮುಂದೆ ಸಂಕಷ್ಟ ಎದುರಾಗಬಹುದು ಎಂದು ತಜ್ಞರು ಹೇಳುತ್ತಿರುವುದು ಆತಂಕ ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+