Karnataka Dam Levels: ಕೆಆರ್‌ಎಸ್, ಕಬಿನಿ, ಹೇಮಾವತಿ ಸೇರಿ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?

ಬೆಂಗಳೂರು: ಕರ್ನಾಟಕದಾದ್ಯಂತ ಚುರುಕಾಗಿದ್ದ ಮಳೆರಾಯ ಮತ್ತೆ ಮುನಿಸಿಕೊಂಡಿದ್ದಾನೆ. ಈಗಾಗಲೇ ಬರಗಾಲ ಎದುರಾಗಿದ್ದು, ಅದನ್ನು ನೀಗಿಸಲು ನದಿ, ಜಲಾಶಯಗಳಲ್ಲಿ ನೀರಿನ ಅಗತ್ಯತೆ ಇದೆ. ಕಳೆದ ಒಂದೆರಡು ದಿನಗಳಿಂದ ಹಿಂಗಾರು ಮಳೆ ಅಲ್ಲಲ್ಲಿ ಸುರಿಯುತ್ತಿದೆ. ಸದ್ಯ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಇಂದು ಬುಧವಾರ (ಅ.21) ರಾಜ್ಯದ ಕೆಆರ್.ಎಸ್, ಹೇಮಾವತಿ, ಕಬಿನಿ, ಹಾರಂಗಿ ಹಾಗೂ ಪ್ರಮುಖ ಜಲಾಶಯಗಳ ಮಟ್ಟ ಎಷ್ಟಿದೆ? ಎಂಬ ಅಪ್ಡೇಟ್ ಇಲ್ಲಿದೆ.

ಮೊದಲಿಗೆ ಕಳೆದ ಒಂದು ದಿನದಲ್ಲಿ ಉಡುಪಿಯ ಬ್ರಹ್ಮಾವರದಲ್ಲಿ ಅಧಿಕ 8 ಸೆಂಟಿ ಮೀಟರ್ ಮಳೆ ಆಗಿದೆ. ಉಳಿದಂತೆ ಬಂಟ್ವಾಳ (ಜಿಲ್ಲೆ ದಕ್ಷಿಣ ಕನ್ನಡ) 5, ಅಮ್ಮತ್ತಿ (ಜಿಲ್ಲೆ ಕೊಡಗು) 3, ಕೋಟಾ (ಜಿಲ್ಲೆ ಉಡುಪಿ) 3, ಮಂಕಿ (ಜಿಲ್ಲೆ ಉತ್ತರ ಕನ್ನಡ) 3, ಅಂಕೋಲಾ (ಜಿಲ್ಲೆ ಉತ್ತರ ಕನ್ನಡ) 2, ಮಣಿ (ಜಿಲ್ಲೆ ದಕ್ಷಿಣ ಕನ್ನಡ) 2, ನಾಪೋಕ್ಲು (ಜಿಲ್ಲೆ ಕೊಡಗು) 2, ಸಿದ್ದಾಪುರ (ಜಿಲ್ಲೆ ಉಡುಪಿ) 2, ಧರ್ಮಸ್ಥಳ (ಜಿಲ್ಲೆ ದಕ್ಷಿಣ ಕನ್ನಡ) 1 ಸೆಂಟಿ ಮೀಟರ್ ಮಳೆ ಆಗಿದೆ. ಮುಂದಿನ ಮೂರು ದಿನ ಕರಾವಳಿ, ಮಲೆನಾಡಿನಲ್ಲಿ ಮಳೆ ನಿರೀಕ್ಷೆ ಇದೆ. ಜೋರು ಮಳೆ ಆದಲ್ಲಿ, ಕಾವೇರಿ ಮತ್ತು ಉಪನದಿಗಳಲ್ಲಿ ಒಳಹರಿವು ಏರಿಕೆ ಆಗಲಿದೆ.

Karnataka Dam Water Levels

ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ

KRS ಅಣೆಕಟ್ಟಿನ ಇಂದಿನ ಮಟ್ಟ

ಡ್ಯಾಂ ಗರಿಷ್ಠ ಮಟ್ಟ: 49.45 ಟಿಎಂಸಿ
ಇಂದಿನ ಮಟ್ಟ: 24.172 ಟಿಎಂಸಿ
ಒಳಹರಿವು: 1366 ಕ್ಯೂಸೆಕ್ಸ್
ಹೊರ ಹರಿವು: 1416 ಕ್ಯೂಸೆಕ್ಸ್

ತುಂಗಭದ್ರಾ ಅಣೆಕಟ್ಟು

ಡ್ಯಾಂ ಗರಿಷ್ಠ ಮಟ್ಟ: 105.79 ಟಿಎಂಸಿ
ಇಂದಿನ ಮಟ್ಟ: 53.40 ಟಿಎಂಸಿ
ಒಳಹರಿವು: 00 ಕ್ಯೂಸೆಕ್ಸ್
ಹೊರ ಹರಿವು: 13088 ಕ್ಯೂಸೆಕ್ಸ್

ಕಬಿನಿ ಜಲಾಶಯ

ಡ್ಯಾಂ ಗರಿಷ್ಠ ಮಟ್ಟ: 19.52 ಟಿಎಂಸಿ
ಇಂದಿನ ಮಟ್ಟ: 11.19 ಟಿಎಂಸಿ
ಒಳಹರಿವು: 1248 ಕ್ಯೂಸೆಕ್ಸ್
ಹೊರ ಹರಿವು: 500 ಕ್ಯೂಸೆಕ್ಸ್

ಲಿಂಗನಮಕ್ಕಿ ಡ್ಯಾಂ ಮಟ್ಟ

ಡ್ಯಾಂ ಗರಿಷ್ಠ ಮಟ್ಟ: 151.75 ಟಿಎಂಸಿ
ಇಂದಿನ ಮಟ್ಟ: 77.00 ಟಿಎಂಸಿ
ಒಳಹರಿವು: 480 ಕ್ಯೂಸೆಕ್ಸ್
ಹೊರ ಹರಿವು: 2800 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ

ಡ್ಯಾಂ ಗರಿಷ್ಠ ಮಟ್ಟ: 123.08 ಟಿಎಂಸಿ
ಇಂದಿನ ಮಟ್ಟ: 89 ಟಿಎಂಸಿ
ಒಳಹರಿವು: 00 ಕ್ಯೂಸೆಕ್ಸ್
ಹೊರ ಹರಿವು: 1860 ಕ್ಯೂಸೆಕ್ಸ್

ಹಾರಂಗಿ ಜಲಾಶಯ

ಡ್ಯಾಂ ಗರಿಷ್ಠ ಮಟ್ಟ: 8.50 ಟಿಎಂಸಿ
ಇಂದಿನ ಮಟ್ಟ: 4.77 ಟಿಎಂಸಿ
ಒಳಹರಿವು: 381 ಕ್ಯೂಸೆಕ್ಸ್
ಹೊರ ಹರಿವು: 500 ಕ್ಯೂಸೆಕ್ಸ್

ಹೇಮಾವತಿ ಅಣೆಕಟ್ಟು

ಡ್ಯಾಂ ಗರಿಷ್ಠ ಮಟ್ಟ: 37.10 ಟಿಎಂಸಿ
ಇಂದಿನ ಮಟ್ಟ: 16.084 ಟಿಎಂಸಿ
ಒಳಹರಿವು: 1451 ಕ್ಯೂಸೆಕ್ಸ್
ಹೊರ ಹರಿವು: 300 ಕ್ಯೂಸೆಕ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+