ವಿಶ್ವಾಸಮತ ಸುಪ್ರೀಂ ಕದ ತಟ್ಟಿದ್ದ ಇಬ್ಬರು ಶಾಸಕರಿಗೆ ಹಿನ್ನಡೆ

ನವದೆಹಲಿ, ಜುಲೈ 22: ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ(ಜುಲೈ 22) ರಂದೇ ವಿಶ್ವಾಸಮತ ಯಾಚನೆ ಮಾಡುವಂತೆ ಆದೇಶ ನೀಡುವಂತೆ ಕೋರಿದ್ದ ಇಬ್ಬರು ಪಕ್ಷೇತರ ಶಾಸಕರಿಗೆ ಸುಪ್ರೀಂಕೋರ್ಟಿನಲ್ಲಿ ಹಿನ್ನಡೆಯಾಗಿದೆ.

ಪಕ್ಷೇತರ ಶಾಸಕರಾದ ಮುಳುಬಾಗಿಲಿನ ಎಚ್.ನಾಗೇಶ್ ಮತ್ತು ರಾಣೇಬೆನ್ನೂರಿನ ಆರ್.ಶಂಕರ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿ, ವಿಶ್ವಾಸಮತ ಯಾಚನೆ ಕುರಿತು ತುರ್ತು ಅರ್ಜಿಯೊಂದನ್ನು ಹಾಕಿದ್ದರು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರಿದ್ದ ನ್ಯಾಯಪೀಠವು, ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲ, ಅರ್ಜಿಯನ್ನು ಕೋರಿರುವಂತೆ ತಕ್ಷಣಕ್ಕೆ ಆದೇಶ ನೀಡಲು ನಿರಾಕರಿಸಿದ್ದು, "ವಿಶ್ವಾಸಮತದ ಕುರಿತಾದ ಅರ್ಜಿಗಳನ್ನು ಈ ಹಿಂದೆಯೂ ತುರ್ತು ವಿಚಾರಣೆಗೆ ಎತ್ತಿಕೊಂಡಿರಲಿಲ್ಲ" ಎಂದಿದ್ದಾರೆ.

ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ

ಈ ನಡುವೆ ಪತ್ರಿಕೆ ವರದಿ ಆಧಾರದಲ್ಲಿ, ಕುದುರೆ ವ್ಯಾಪಾರ ಮತ್ತು ರಾಜಕಾರಣಿಗಳ ಪಕ್ಷಾಂತರಕ್ಕೆ ಸಂಬಂಧಿಸಿದಂತೆ ವಕೀಲರಾದ ಲಿಲಿ ಥಾಮಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

Karnataka Crisis: Setback for 2 independent MLAs, SC overturns plea on trurst vote

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು 7ನೇ ಬಾರಿ ಪ್ರಯತ್ನ ಮಾಡುತ್ತಿದ್ದು, ಸರ್ಕಾರ ರಚನೆ ಮಾಡುತ್ತೀರೋ ಅಥವಾ ರಾಷ್ಟ್ರಪತಿ ಆಳ್ವಿಕೆ ಬರುತ್ತದೋ ಕಾದು ನೋಡೋಣ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ಬಳಿ 105 ಶಾಸಕರಿದ್ದು ಎರಡು ಪಕ್ಷೇತರ ಶಾಸಕರ ಬೆಂಬಲವೂ ದೊರೆತಿದೆ.ಹೀಗಾಗಿ ಮೇಲ್ನೋಟಕ್ಕೆ ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿರುವುದು ನಿಶ್ಚತವಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ವಿಧಾನಸಭಾ ಕಲಾಪದಲ್ಲಿ ಯಾವ ಯಾವ ನಾಟಕಗಳು ನಡೆಯಲಿದೆ ಎನ್ನುವುದು ದೇಶದ ಜನರ ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+