ಬಿಜೆಪಿ ಹಚ್ಚಿದ ದ್ವೇಷದ ಕಿಚ್ಚಿಗೆ ಬಲಿಯಾದ ಅಮಾಯಕರ ಕುಟುಂಬಗಳಿಗೆ ನ್ಯಾಯ ನೀಡಿದ್ದೇವೆ: ಕಾಂಗ್ರೆಸ್
ಬೆಂಗಳೂರು, ಜೂನ್ 17: ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ ನಾಲ್ವರು ಯುವಕರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದು, ಬಿಜೆಪಿ ಹಚ್ಚಿದ ದ್ವೇಷದ ಕಿಚ್ಚಿಗೆ ಬಲಿಯಾದ ಅಮಾಯಕರ ಕುಟುಂಬಗಳಿಗೆ ನ್ಯಾಯವನ್ನು ಸರಿದೂಗಿಸಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ದುಷ್ಕರ್ಮಿಗಳಿಂದ ಕೊಲೆಯಾದ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಯುವಕರ ಕುಟುಂಬದವರಿಗೆ ತಲಾ 25 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಪ್ರವೀಣ್ ಪೆಟ್ಟಾರು ಪತ್ನಿಗೆ ಉದ್ಯೋಗದಲ್ಲಿ ಮುಂದುವರೆಯಲು ಅವಕಾಶ.

ಫಾಜಿಲ್, ಮಸೂದ್ ಹಾಗೂ ದೀಪಕ್ ರಾವ್ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಬಿಜೆಪಿ ಹಚ್ಚಿದ ದ್ವೇಷದ ಕಿಚ್ಚಿಗೆ ಬಲಿಯಾದ ಅಮಾಯಕರ ಕುಟುಂಬಗಳಿಗೆ ನ್ಯಾಯವನ್ನು ಸರಿದೂಗಿಸಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
◆ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗದಲ್ಲಿ ಮುಂದುವರೆಯಲು ಅವಕಾಶ.
— Karnataka Congress (@INCKarnataka) June 17, 2023
◆ಫಾಜಿಲ್, ಮಸೂದ್, ಅಜರ್ ಹಾಗೂ ದೀಪಕ್ ರಾವ್ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ.
ಬಿಜೆಪಿ ಹಚ್ಚಿದ ದ್ವೇಷದ ಕಿಚ್ಚಿಗೆ ಬಲಿಯಾದ ಅಮಾಯಕರ ಕುಟುಂಬಗಳಿಗೆ ನ್ಯಾಯವನ್ನು ಸರಿದೂಗಿಸಿದ್ದೇವೆ.
ನಮ್ಮ ಸರ್ಕಾರ ಯಾವುದೇ ಬಗೆಯಲ್ಲಿ ಕಾನೂನು ಮೀರುವುದನ್ನು ಸಹಿಸುವುದಿಲ್ಲ,…
ನಮ್ಮ ಸರ್ಕಾರ ಯಾವುದೇ ಬಗೆಯಲ್ಲಿ ಕಾನೂನು ಮೀರುವುದನ್ನು ಸಹಿಸುವುದಿಲ್ಲ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದೊಂದಿಗೆ ಮುನ್ನೆಡೆಯುವ ನಮ್ಮ ಸರ್ಕಾರದಲ್ಲಿ ತಾರತಮ್ಯಕ್ಕೆ ಆಸ್ಪದವಿಲ್ಲ.
— Karnataka Congress (@INCKarnataka) June 17, 2023
ಬಿಜೆಪಿ ಅವಧಿಯಲ್ಲಿ ಕೋಮು ಕಿಚ್ಚಿಗೆ ಬಲಿಯಾದ ಮಸೂದ್, ಫಾಜಿಲ್, ಜಲೀಲ್ ಹಾಗೂ ದೀಪಕ್ ರಾವ್ ಅವರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಗಳನ್ನು ಸಿಎಂ @siddaramaiah ಘೋಷಿಸಿದ್ದಾರೆ.… pic.twitter.com/5auLtH7s5I
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದೊಂದಿಗೆ ಮುನ್ನಡೆಯುವ ನಮ್ಮ ಸರ್ಕಾರದಲ್ಲಿ ತಾರತಮ್ಯಕ್ಕೆ ಆಸ್ಪದವಿಲ್ಲ. ಕರ್ನಾಟಕದಲ್ಲಿ ಇನ್ನುಂದ ಕೋಮು ಕಲಹಕ್ಕೆ ಪ್ರಚೋದನೆಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಹೇಳಿದೆ.












Click it and Unblock the Notifications