Congress Government: ಇಂದು ಸಿದ್ದು,ಡಿಕೆಶಿ ಸೇರಿದಂತೆ 28 ಸಚಿವರ ಪದಗ್ರಹಣ? ಇಲ್ಲಿದೆ ಕೈ ಪಾಳಯದ ಫೈನಲ್ ಲಿಸ್ಟ್!?
ಬೆಂಗಳೂರು, ಮೇ 20: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನ ತರುವುದಾಗಿ ಬಿಜೆಪಿ ನಾಯಕರ ವಿರುದ್ದ ಪಣತೊಟ್ಟು ಸವಾಲು ಹಾಕಿದ್ದ ಕಾಂಗ್ರೆಸ್ ನಾಯಕರಿಗೆ ಕೊನೆಗೂ ಸರ್ಕಾರ ರಚನೆಗೆ ಕಾಲಕೂಡಿ ಬಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕವಾಗಿ 135 ಸ್ಥಾನಗಳ ಮೂಲಕ ರಾಜ್ಯದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಶನಿವಾರ ರಚನೆಗೆ ಸಿದ್ದತೆ ನಡೆಸಿದೆ.
ಈಗಾಗಲೇ ಚುನಾವಣಾ ಫಲಿತಾಂಶದ ಬಳಿಕ ಐದು ದಿನಗಳ ಕಾಲ ಸಿಎಂ ಸ್ಥಾನಕ್ಕಾಗಿ ಜಟಾಪಟಿ ನಡೆದು ಕೊನೆಗೂ ಹೈಕಮಾಂಡ್ ಅಧಿಕೃತ ಘೋಷಣೆಯ ಬೆನ್ನಲ್ಲೇ ಶನಿವಾರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಭರ್ಜರಿ ಸಿದ್ದತೆಯನ್ನ ಮಾಡಿಕೊಂಡಿದೆ.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಏಕೈಕ ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಜೊತೆಗೆ ಸುಮಾರು 28 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇನ್ನೂ ಶುಕ್ರವಾರ ದೆಹಲಿಗೆ ತೆರಳಿದ್ದ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸಂಭಾವ್ಯ ಮಂತ್ರಿಗಳ ಪಟ್ಟಿಯನ್ನ ಹೈಕಮಾಂಡ್ ನಾಯಕರ ಮುಂದೆ ಇಟ್ಟಿದ್ದು, ತಮ್ಮ ತಮ್ಮ ಬೆಂಬಲಿಗರಿಗೆ ತಲಾ 10 ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ಉಳಿದ 8 ಸಚಿವ ಸ್ಥಾನಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎನ್ನಲಾಗಿದೆ.
ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ತಮ್ಮ ಕೋಟಾದಲ್ಲಿ ತಲಾ 10 ಶಾಸಕರಿಗೆ ಸಚಿವ ಸ್ಥಾನವನ್ನ ನೀಡಲು ತಯಾರಿ ನಡೆಸಿದ್ದು, ಸಾಮಾಜಿಕ ಹಾಗೂ ಪ್ರಾದೇಶಿಕ ನ್ಯಾಯವನ್ನು ಕಾಪಾಡಬೇಕು ಎಂದು ಹೈಕಮಾಂಡ್ ನಾಯಕರು ಈ ಇಬ್ಬರು ನಾಯಕರಿಗೆ ಸೂಚನೆ ನೀಡಿದ್ದಾರೆ. ಇತ್ತ ಹೈಕಮಾಂಡ್ ಪಕ್ಷದಲ್ಲಿ ಹಿರಿಯ ನಾಯಕರ ಜೊತೆಗೆ ಕಿರಿಯರಿಗೂ ಅವಕಾಶವನ್ನ ಕಲ್ಪಿಸುವುದಾಗಿ ಸೂಚಿಸಿದೆ. ಇನ್ನೂ ಪ್ರಮುಖವಾಗಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿರುವ ಬೆಂಗಳೂರು ಹಾಗೂ ಬೆಳಗಾವಿಗೆ ಹೆಚ್ಚು ಸಚಿವ ಸ್ಥಾನಗಳು ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನೂ ಸಿದ್ದರಾಮಯ್ಯ ಬಣಕ್ಕೆ 10 ಮಂತ್ರಿಗಳು , ಡಿ ಕೆ ಶಿವಕುಮಾರ್ ಬಣಕ್ಕೆ 10 ಮಂತ್ರಿ ಸ್ಥಾನಗಳನ್ನ ಹೈಕಮಾಂಡ್ ನೀಡಿದ್ದು, ಉಳಿದ 8 ಸ್ಥಾನಗಳನ್ನ ಹೈಕಮಾಂಡ್ ನಾಯಕರು ಯಾರಿಗೆ ನೀಡಬೇಕು ಎಂಬುದನ್ನ ನಿರ್ಧಾರಿಸಲಿದ್ದಾರೆ. ಅಲ್ಲದೇ ಶುಕ್ರವಾರ ಹೈಕಮಾಂಡ್ ನಾಯಕರ ಜೊತೆಗೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಚರ್ಚೆ ನಡೆಸಿದ್ದು, ಪ್ರಬಲ ಖಾತೆಯ ಮೇಲೆ ಈ ಇಬ್ಬರು ನಾಯಕರು ಕಣ್ಣೀಟ್ಟಿದ್ದು, ಹೈಕಮಾಂಡ್ ಈಗಾಗಲೇ ಯಾರಿಗೆ ಯಾವ ಖಾತೆಯನ್ನ ನೀಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿದೆ ಎನ್ನಲಾಗಿದೆ.
ಕಾಂಗ್ರೆಸ್ಸ್ ಸಂಭಾವ್ಯ ಪಟ್ಟಿ ಇಲ್ಲಿದೆ ನೋಡಿ?
1. ಸಿದ್ದರಾಮಯ್ಯ, ಮುಖ್ಯಮಂತ್ರಿ
2. ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ
3. ಡಾ ಜಿ ಪರಮೇಶ್ವರ್
4. ಕೆಎಚ್ ಮುನಿಯಪ್ಪ
5. ಬಿಕೆ ಹರಿಪ್ರಸಾದ್
6. ಎಂಬಿ ಪಾಟೀಲ್
7. ರಾಮಲಿಂಗಾರೆಡ್ಡಿ
8. ಆರ್‌ವಿ ದೇಶಪಾಂಡೆ
9. ಕೆಜೆ ಜಾರ್ಜ್
10. ಎಚ್‌ಕೆ ಪಾಟೀಲ್
11. ಕೃಷ್ಣ ಬೈರೇಗೌಡ
12. ಯುಟಿ ಖಾದರ್
13. ಜಮೀರ್ ಅಹ್ಮದ್ ಖಾನ್
14. ಸತೀಶ್ ಜಾರಕಿಹೊಳಿ
15. ಎಚ್‌ಸಿ ಮಹದೇವಪ್ಪ
16. ಶರಣಪ್ರಕಾಶ್ ಪಾಟೀಲ್
17. ಅಜಯ್ ಸಿಂಗ್
18. ದಿನೇಶ್ ಗುಂಡೂರಾವ್
19. ಲಕ್ಷ್ಮಣ್ ಸವದಿ
20. ಲಕ್ಷ್ಮೀ ಹೆಬ್ಬಾಳ್ಕರ್
21. ಮಧು ಬಂಗಾರಪ್ಪ
22. ಬಸವರಾಜ ರಾಯರೆಡ್ಡಿ
23. ಪ್ರಿಯಾಂಕ್ ಖರ್ಗೆ
24. ಸಂತೋಷ್ ಲಾಡ್
25. ವಿಜಯಾನಂದ ಕಾಶಪ್ಪನವರ್
26. ಟಿಡಿ ರಾಜೇಗೌಡ/ಕೆಎಂ ಶಿವಲಿಂಗೇಗೌಡ
27. ಆರ್‌ಬಿ ತಿಮ್ಮಾಪುರ
28. ಕೊತ್ತೂರು ಮಂಜುನಾಥ್
29. ಶಾಮನೂರು ಶಿವಶಂಕರಪ್ಪ/ಎಸ್‌ಎಸ್ ಮಲ್ಲಿಕಾರ್ಜುನ
30. ಎಂ ಕೃಷ್ಣಪ್ಪ/ಪ್ರಿಯಾಕೃಷ್ಣ












Click it and Unblock the Notifications