ಕರ್ನಾಟಕ ಕಾಂಗ್ರೆಸ್‌ನ 14 ಮಾಜಿ ಶಾಸಕರು ಉಚ್ಛಾಟನೆ
ಬೆಂಗಳೂರು, ಜುಲೈ 30 : ಕರ್ನಾಟಕ ಕಾಂಗ್ರೆಸ್ 14 ಮಾಜಿ ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ. 2018ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಎಲ್ಲಾ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.
ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮಾಜಿ ಶಾಸಕರನ್ನು ಉಚ್ಛಾಟನೆ ಮಾಡಿದ ಆದೇಶವನ್ನು ಬಿಡುಗಡೆ ಮಾಡಿದರು. ಎಲ್ಲಾ ಮಾಜಿ ಶಾಸಕರನ್ನು ಅನರ್ಹಗೊಳಿಸಲು ಕೆಪಿಸಿಸಿ ಎಐಸಿಸಿಗೆ ಮನವಿ ಸಲ್ಲಿಸಿತ್ತು.

ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಎಲ್ಲಾ ಮಾಜಿ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಈ ಮೂಲಕ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಲವು ದಿನಗಳಿಂದ ಉಂಟಾಗಿದ್ದ ರೆಬಲ್ ಟ್ರಬಲ್‌ಗೆ ತೆರೆ ಬಿದ್ದಿದೆ.
ಉಚ್ಛಾಟನೆಗೊಂಡ ಶಾಸಕರು : ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಬಿ. ಸಿ. ಪಾಟೀಲ್, ಆರ್. ಶಂಕರ್, ಆನಂದ್ ಸಿಂಗ್, ಡಾ. ಕೆ. ಸುಧಾಕರ್, ಬಿ. ಎ. ಬಸವರಾಜ್, ಎಸ್. ಟಿ. ಸೋಮಶೇಖರ್, ಮುನಿರತ್ನ, ಆರ್. ರೋಷನ್ ಬೇಗ್, ಎಂ. ಟಿ. ಬಿ. ನಾಗರಾಜ್.
ಶಾಸಕ ಸ್ಥಾನಕ್ಕೆ ರಾಜೀನಾಮೆ ಜುಲೈ 6ರಂದು ರಾಜೀನಾಮೆ ನೀಡಿದ್ದ ಶಾಸಕರು ಮುಂಬೈಗೆ ಹೋಗಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿಶ್ವಾಸಮತಯಾಚನೆ ಪ್ರಕ್ರಿಯೆಯಿಂದಲೂ ದೂರ ಉಳಿದಿದ್ದರು.
ಎಲ್ಲಾ ಶಾಸಕರನ್ನು ಅನರ್ಹಗೊಳಿಸಲು ಪಕ್ಷದ ವತಿಯಿಂದ ಸ್ಪೀಕರ್‌ಗೆ ದೂರು ನೀಡಲಾಗಿತ್ತು. ಎಲ್ಲರನ್ನೂ 15ನೇ ವಿಧಾನಸಭೆ ಅವಧಿ ಮುಗಿಯುವ ತನಕ ಚುನಾವಣಾ ಕಣಕ್ಕಿಳಿಯಂದತೆ ಸ್ಪೀಕರ್ ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. ಈಗ ಎಲ್ಲರನ್ನೂ ಪಕ್ಷದಿಂದಲೂ ಉಚ್ಛಾಟನೆ ಮಾಡಲಾಗಿದೆ.












Click it and Unblock the Notifications