Chaitra Kundapura Case: ಎಲ್ಲಾ ಗೊತ್ತಿದ್ದೂ ಇವರಿಬ್ಬರೂ ಸುಮ್ಮನೆ ಇದ್ದಿದ್ದೇಕೆ? ಕಾಂಗ್ರೆಸ್ ಪ್ರಶ್ನೆ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋವಿಂದ ಪೂಜಾರಿ ಎನ್ನುವರರಿಗೆ 5 ಕೋಟಿ ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಮತ್ತ ಸಹಚರರು ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಲವು ದೊಡ್ಡವರು ಹೆಸರುಗಳು ಹೊರಗೆ ಬರುತ್ತವೆ ಎಂದು ಚೈತ್ರಾ ಕುಂದಾಪುರ ಹೇಳಿದ್ದು ಭಾರಿ ಸಂಚಲನ ಮೂಡಿಸಿತ್ತು.
ಜನಪ್ರಿಯ ಭಾಷಣಕಾರ, ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮತ್ತು ಬಿಜೆಪಿ ನಾಯಕ ಸಿಟಿ ವಿ ಅವರಿಗೂ ಚೈತ್ರಾ ಕುಂದಾಪುರ ವಂಚನೆ ಬಗ್ಗೆ ಮೊದಲೇ ಗೊತ್ತಿತ್ತು ಎನ್ನುವ ವಿಚಾರ ಕೂಡ ಬಹಿರಂಗವಾಗಿದ್ದು. ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಬಿಜೆಪಿ ನಾಯಕರಿಗೆ ಪ್ರಶ್ನೆಗಳನ್ನು ಕೇಳಿದೆ.

ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಚಕ್ರವರ್ತಿ ಸೂಲಿಬೆಲೆ ಎಂಬ ಕರ್ನಾಟಕದ ಫ್ರಿಂಜ್ ಎಲಿಮೆಂಟ್ ಗೆ ಆತನೇ ಒಪ್ಪಿಕೊಂಡಂತೆ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ, ಸಿಟಿ ರವಿ ಅವರಿಗೂ ತಿಳಿದಿತ್ತಂತೆ.
"ಬಿಜೆಪಿ ಪಕ್ಷದ ಹೆಸರಲ್ಲಿ ಮಹಾವಂಚನೆ ನಡೆದಿದ್ದರೂ, ಹಣದ ಅಕ್ರಮ ವರ್ಗಾವಣೆ ನಡೆದಿದ್ದರೂ ಈ ಮಹಾ ಸುಭಗಧ್ವಯರು ಸುಮ್ಮನಿದಿದ್ದೇಕೆ? ಈ ಚೈನ್ ಚೈತ್ರ ನಮಗೆ ತಿಳಿದೇ ಇಲ್ಲ ಎನ್ನುತ್ತಿರುವ ಎನ್ನುತ್ತಿರುವ ಬಿಜೆಪಿಗರು ಹಿಂದುತ್ವದ ಹೆಸರಲ್ಲಿ ಯಾರನ್ನು ಬೇಕಾದರೂ ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ!" ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದೆ.
ಸಿಟಿ ರವಿ ಸುಮ್ಮನೆ ಇದ್ದಿದ್ದೇಕೆ?
ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಹಿರಿಯ ನಾಯಕ ಸಿಟಿ ಅವರನ್ನು ಪ್ರಶ್ನೆ ಮಾಡಿದ್ದು, ಇದೆಲ್ಲಾ ನಿಮಗೆ ಗೊತ್ತಿದ್ದೇ ನಡೆಯಿತಾ ಎಂದು ಪ್ರಶ್ನೆ ಮಾಡಿದೆ. "ಸಿಟಿ ರವಿ ಅವರೇ, ನಿಮ್ಮ ಪಕ್ಷದ ಟಿಕೆಟ್ ಹೆಸರಲ್ಲಿ ಕೋಟ್ಯಂತರ ರೂಪಾಯಿಯ ವಂಚನೆ ನಡೆದಿದ್ದು ನಿಮ್ಮ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಿದ್ದು ಏಕೆ? ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹೊಣೆಗಾರಿಕೆ ಹೊಂದಿದ್ದರೂ, ಮಾಜಿ ಸಚಿವರಾಗಿದ್ದರೂ ಇಂತಹ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲ ಮೌನದ ಮೂಲಕ ಬೆಂಬಲ ನೀಡಿದ್ದೇಕೆ?" ಎಂದು ಪ್ರಶ್ನೆ ಮಾಡಿದೆ.
"ಬಿಜೆಪಿಯಲ್ಲಿ ನಿಜಕ್ಕೂ ಹಣಕ್ಕಾಗಿ ಟಿಕೆಟ್ ಮಾರಾಟ ನಡೆಯುತ್ತಿತ್ತೆ? ಇಂತಹ ವಂಚನೆಗಳೆಲ್ಲ ಕರ್ನಾಟಕದ ಬಿಜೆಪಿಯಲ್ಲಿ ಸಾಮಾನ್ಯವೇ? ಅಥವಾ ಈ ವಂಚನೆ ಬಿಜೆಪಿಯ ದೊಡ್ಡ ನಾಯಕರ ಅಣತಿಯಂತೆ ನಡೆದಿದೆಯೇ? ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದೆ.












Click it and Unblock the Notifications