ನಂದಿನಿ ಹಾಲಿನ ಬೆಲೆ ಏರಿಕೆ ನಿರ್ಧಾರ ವಾಪಸ್? ಮೊದಲಿನ ರೇಟ್‌ಗೆ ಸಿಗುತ್ತಾ ನಂದಿನಿ ಹಾಲು?
ನಂದಿನಿ ಹಾಲಿನ ಬೆಲೆ ಏರುಪೇರು ಆಗಿರುವುದು ಕನ್ನಡ ನಾಡಲ್ಲಿ ಸಂಚಲನಕ್ಕೆ ದಾರಿ ಮಾಡಿಕೊಟ್ಟಿದೆ. ಅದ್ರಲ್ಲೂ 'ಕಾಂಗ್ರೆಸ್ ಗ್ಯಾರಂಟಿ' ಯೋಜನೆ ವಿರುದ್ಧ ಭಾರಿ ವಾಗ್ದಾಳಿ ನಡೆಸುತ್ತಿದ್ದ ವಿರೋಧ ಪಕ್ಷಗಳ ನಾಯಕರಿಗೆ ಈ ಬೆಳವಣಿಗೆ ಮತ್ತಷ್ಟು ಬಲ ನೀಡಿದಂತೆ ಕಾಣುತ್ತಿದೆ. ಹೀಗಿದ್ದಾಗಲೇ ಸಿಎಂ ಸಿದ್ದರಾಮಯ್ಯ ಅವರು ನಂದಿನಿ ಹಾಲಿನ ಬೆಲೆ ಏರಿಕೆ ನಿರ್ಧಾರ ವಾಪಸ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ನಂದಿನಿ ಹಾಲಿನ ಬೆಲೆ ಏರುಪೇರು ನಿರ್ಧಾರ ವಾಪಸ್ ತೆಗೆದುಕೊಳ್ಳುತ್ತಾರಾ? ಮುಂದೆ ಓದಿ.
ನಂದಿನಿ ಹಾಲಿನ ಬೆಲೆ ಬಗ್ಗೆ ವಿರೋಧ ಪಕ್ಷಗಳು & ಸಿಎಂ ಸಿದ್ದರಾಮಯ್ಯ ಸರ್ಕಾರದ ನಡುವೆ ದೊಡ್ಡ ಫೈಟಿಂಗ್ ನಡೆಯುತ್ತಿದೆ. ಈ ಮೊದಲಿನಿಂದ ಕೂಡ ನಂದಿನಿ ಹಾಲಿನ ವಿಚಾರ ರಾಜಕೀಯ ತಿರುವು ಪಡೆಯುತ್ತಿದೆ. ಅದರಲ್ಲೂ ಸಿದ್ದರಾಮಯ್ಯ ಸರ್ಕಾರ ಈಗ ಹಾಲಿನ ಬೆಲೆ ವಿಚಾರದಲ್ಲಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ವಿರೋಧ ಪಕ್ಷಗಳು ಈ ವಿಚಾರದಲ್ಲಿ ಮತ್ತೊಂದು ರೌಂಡ್ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ, ಭಾರಿ ದೊಡ್ಡ ಹೋರಾಟ ಮಾಡಲು ಸಿದ್ಧವಾಗಿದ್ದಾರೆ. ಹೀಗಿದ್ದಾಗ ಹಾಲಿನ ಬೆಲೆ ಇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಏನ್ ಹೇಳಿದ್ರು ಗೊತ್ತಾ? ಮುಂದೆ ಓದಿ.

'ನಂದಿನಿ' ವಿಚಾರ ರಾಜಕೀಯ ದಾಳ?
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಕನ್ನಡಿಗರ ನಾಡಿನ 'ನಂದಿನಿ' & ಗುಜರಾತ್ ಮೂಲದ ಹಾಲು ಮಾರಾಟ ಸಂಸ್ಥೆ 'ಅಮುಲ್' ವಿಚಾರವಾಗಿ ಫೈಟಿಂಗ್ ಆಗಿತ್ತು. ಒಂದು ಕಡೆ ಬಿಜೆಪಿ ಕೇಂದ್ರ ನಾಯಕರು 'ನಂದಿನಿ' ಸಂಸ್ಥೆಯನ್ನ 'ಅಮುಲ್' ಜೊತೆ ವಿಲೀನ ಮಾಡ್ತಾರೆ ಅನ್ನೋ ಆರೋಪ ಕೇಳಿಬಂದಿತ್ತು.
ಆಗ ಕಾಂಗ್ರೆಸ್ ಕೂಡ ಈ ವಿಚಾರವನ್ನ ಚುನಾವಣೆಗೆ ಅಸ್ತ್ರ ಮಾಡಿಕೊಂಡಿತ್ತು. ಇದೀಗ ನಂದಿನಿ ಹಾಲಿನ ಬೆಲೆ ಏರಿಕೆ ಬಗ್ಗೆ ಫೈಟ್ ಶುರುವಾಗಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಲಿನ ದರ ನಾವು ಏರಿಕೆ ಮಾಡಿಲ್ಲ, ಆದರೆ ಹೆಚ್ಚಿಗೆ ಕ್ವಾಂಟಿಟಿ ಹಾಲು ಕೊಟ್ಟು ಆ ಕ್ವಾಂಟಿಟಿಗೆ ತಕ್ಕಂತೆ ಬೆಲೆ ಇಟ್ಟಿದ್ದೇವೆ ಎಂದಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿದ ಪ್ರಶ್ನೆಯೇ ಬರಲ್ಲ ಎಂದಿದ್ದಾರೆ.
ಸರ್ಕಾರದ ಹಾಲಿನ ಲೆಕ್ಕಾಚಾರ ಏನು?
ನಂದಿನಿ ಹಾಲಿನ ಪ್ಯಾಕೆಟ್ 1,000 ಮಿ.ಲೀಗೆ 42 ರೂಪಾಯಿ ಇತ್ತು, 500 ಮಿಲಿ ಲೀಟರ್ ಹಾಲಿಗೆ 22 ರೂಪಾಯಿ ಬೆಲೆ ಇತ್ತು. ಆದರೆ ಇದೀಗ 1 ಲೀಟರ್ ಬದಲು 1,050 ಮಿಲಿ ಲೀಟರ್ ಮತ್ತು 500 ಎಂಎಲ್ ಬದಲು 550 ಮಿಲಿ ಲೀಟರ್ ಪ್ಯಾಕೆಟ್ ಮಾರಾಟ ಮಾಡಲು ಕೆಎಂಎಫ್ ನಿರ್ಧರಿಸಿದೆ. ಹೀಗಾಗಿ ನಂದಿನಿ ಹಾಲಿನ 1,050 ಮಿಲಿ ಲೀಟರ್ ಪ್ಯಾಕೆಟ್‌ಗೆ 44 ರೂಪಾಯಿ & 550 ಮಿಲಿ ಲೀಟರ್ ಪ್ಯಾಕೆಟ್‌ಗೆ 24 ರೂಪಾಯಿ ಫಿಕ್ಸ್ ಮಾಡಲಾಗಿದೆ. ಇದೇ ಹಿನ್ನೆಲೆ ಬೆಂಕಿ ಹೊತ್ತಿದ್ದು, ಹಾಲಿನ ದರ ಏರಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಸ್ಪಷ್ಟನೆ ಕೂಡ ನೀಡಿದ್ದಾರೆ.












Click it and Unblock the Notifications