ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ...

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದಿನಕ್ಕೊಂದು ವಿಚಾರದಲ್ಲಿ ಮಹಾಯುದ್ಧ ನಡೆಯುತ್ತಿದೆ. ಅದರಲ್ಲೂ ಇತ್ತೀಚೆಗಷ್ಟೆ ಕೃಷಿ ಸಚಿವ ಚೆಲುವರಾಯಸ್ವಾಮಿ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿಚ್ಚು ಧಗಧಗಿಸುತ್ತಿದೆ. ಈ ಹೊತ್ತಲ್ಲೇ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಅಖಾಡ ಪ್ರವೇಶಿಸಿದ್ದು, ಆರೋಪಗಳಿಗೆಲ್ಲಾ ಸೂಕ್ತ ಉತ್ತರ ನೀಡಿದ್ದಾರೆ.

ಅಷ್ಟಕ್ಕೂ ಸಚಿವ ಚೆಲುವರಾಯಸ್ವಾಮಿ ವಿಚಾರವಾಗಿ ಟ್ವೀಟ್ ಮಾಡಿದ್ದ ರಾಜ್ಯ ಬಿಜೆಪಿ ಘಟಕ, 'ಭ್ರಷ್ಟ #ATMSarkara ದ ಮತ್ತೊಂದು ಕರ್ಮಕಾಂಡ ಅಧಿಕಾರಿಗಳಿಂದ ಬಯಲು! ಸ್ವಾಮಿ ಸಿದ್ದರಾಮಯ್ಯ ರವರೇ, ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ರಾಜೀನಾಮೆ ಪಡೆಯಲು "ರಾಹು"ಕಾಲಕ್ಕಾಗಿ ಕಾಯುತ್ತಿದ್ದೀರಾ..? ಬಾಯಿ ಬಿಡಿ ಸ್ವಾಮೀ..!' ಎಂದು ಟ್ವೀಟ್ ಮಾಡಿತ್ತು. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಕಮಲ ಪಾಳಯ ಕೂಡ ಚಾಲೆಂಜ್ ಹಾಕಿತ್ತು. ಇದೀಗ ಆರೋಪಗಳಿಗೆ ಉತ್ತರ ನೀಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

Karnataka CM Siddaramaiah gave reply to BJP allegations

ಸಿಎಂ ಸಿದ್ದರಾಮಯ್ಯ ಹೇಳಿದ್ದು ಏನು?

ಅಷ್ಟಕ್ಕೂ ಬಿಜೆಪಿ ಆರೋಪಗಳಿಗೆಲ್ಲ ಖಡಕ್ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, 'ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾದುದು ಎಂದು ಬಯಲಾಗಿದೆ. ಅಂತಹ ಅಧಿಕಾರಿಗಳು ಯಾರು ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಈ ಸಂಬಂಧ ಪರಿಶೀಲನೆ ನಡೆಸಿ, ಅಗತ್ಯ ಕಂಡುಬಂದಲ್ಲಿ ತನಿಖೆ ನಡೆಸುತ್ತೇವೆ. @bjp4karnataka ದ ನಾಯಕರೇ ಇಂತಹ ನಕಲಿ ಪತ್ರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನೀವೇ ಇದರ ಸೃಷ್ಟಿಕರ್ತರೋ? ಅಥವಾ ನಿಮ್ಮ "ಬ್ರದರ್ರೋ"?' ಎಂದು ಪ್ರಶ್ನೆ ಮಾಡಿದ್ದಾರೆ.

'Breaking news'ನ ಕಾಲಘಟ್ಟದಲ್ಲಿ ಆತುರಕ್ಕೆ...

ಹೀಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ರಾಜ್ಯ ಕಾಂಗ್ರೆಸ್ ಘಟಕ ಕೂಡ ರಾಜ್ಯ ಬಿಜೆಪಿ ನಾಯಕರಿಗೆ ಉತ್ತರ ನೀಡಿದ್ದು, 'ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆನ್ನಲಾದ ಅಧಿಕಾರಿಗಳಿಗೆ ಈ ನಕಲಿ ಪತ್ರದ ಕುರಿತು ಮಾಹಿತಿಯೇ ಇರಲಿಲ್ಲ!
ಸಹಿಯೂ ಅವರದ್ದಲ್ಲ, ವಿಳಾಸವೂ ಅವರದ್ದಲ್ಲ. ಶಾಸಕ ಬಿ. ಆರ್ ಪಾಟೀಲ್ ಅವರ ಹೆಸರಿನ ನಕಲಿ ಪತ್ರದ ನಂತರ ಈಗ ಅಧಿಕಾರಿಗಳ ಹೆಸರಿನ ನಕಲಿ ಪತ್ರ..
ರಾಜ್ಯದಲ್ಲಿ ತಲೆ ಎತ್ತಿರುವ ಫೇಕ್ ಫ್ಯಾಕ್ಟರಿಯ ಮಾಲೀಕರನ್ನು ಶೀಘ್ರದಲ್ಲೇ ಹತ್ತಿಕ್ಕುತ್ತೇವೆ. 'Breaking news' ನ ಕಾಲಘಟ್ಟದಲ್ಲಿ ಆತುರಕ್ಕೆ ಬೀಳದೆ ಮಾಧ್ಯಮಗಳೂ ಸಹ ಸತ್ಯಾಸತ್ಯತೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಜವಾಬ್ದಾರಿಯುತವಾಗಿ ವರದಿ ಮಾಡಬೇಕು.' ಎಂದಿದೆ.

Karnataka CM Siddaramaiah gave reply to BJP allegations

ಒಟ್ನಲ್ಲಿ ಈ ಪತ್ರ ನಕಲಿ ಎಂದು ಕಾಂಗ್ರೆಸ್ ಹೇಳುತ್ತಿದೆ, ಆದರೆ ಈ ಪತ್ರ ಅಸಲಿ ಅಂತಾ ಬಿಜೆಪಿ ವಾದ ಮಾಡುತ್ತಿದೆ. ಹೀಗಾಗಿ ನಕಲಿ ಪತ್ರದ ಬಗ್ಗೆ ತನಿಖೆ ಆಗಬೇಕು. ಹಾಗೇ ಈ ಅಸಲಿ ಮತ್ತು ನಕಲಿ ಕಹಾನಿಯ ಬಗ್ಗೆ ಜನರಿಗೆ ಸೂಕ್ತ ಸಂದೇಶ ಸಿಗಬೇಕು. ಹಾಗೇ ಈ ಪತ್ರ ನಕಲಿಯೇ ಆಗಿದ್ದರೆ ಅದರ ವಿರುದ್ಧ ಹಾಗೂ ಸತ್ಯ ಮರೆಮಾಚುವ ಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೋಷಿಯಲ್ ಮೀಡಿಯಾ ಮಂದಿ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+