ಕರ್ನಾಟಕ ಸಿಇಟಿ 2018ರ ಫಲಿತಾಂಶ:ಶ್ರೀಧರ್ ದೊಡ್ಮನಿ ಪ್ರಥಮ ರ‍್ಯಾಂಕ್

ಬೆಂಗಳೂರು, ಜೂನ್ 1: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.

ವಿಜಯಪುರದ ಶ್ರೀಧರ್ ದೊಡ್ಮನಿ ಪ್ರಥಮ ರ‍್ಯಾಂಕ್ ಪಡೆದಿದ್ದು, ದಕ್ಷಿಣ ಕನ್ನಡದ ನಾರಾಯಣ ಪೈ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ, ಬೆಂಗಳೂರಿನ ಮಹಿಮಾ ಕೃಷ್ಣ ತೃತೀಯ ಹಾಗೂ ಬಳ್ಳಾರಿಯ ಎಸ್ಆರ್ ಅಪರೂಪ ನಾಲ್ಕನೇ ರ‍್ಯಾಂಕ್ ಗಳಿಸಿದ್ದಾರೆ.

ಎಂಜಿನಿಯರಿಂಗ್‌ನಲ್ಲಿ ವಿಜಯಪುರದ ಶ್ರೀಧರ ದೊಡ್ಮನಿ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡದ ನಾರಾಯಣ ಪೈ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡಿಬೋರ್ಸ್‌ ಸನ್ಯಾಸಿ 3 ನೇ ಸ್ಥಾನ ಪಡೆದಿದ್ದಾರೆ.

ಪಶುವೈದ್ಯ ವಿಭಾಗದಲ್ಲಿ ವಿನೀತ್ ಮೆಗುರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.ಜೂನ್ 25ರಿಂದ ಮೊದಲ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್‌ 18ಕ್ಕೆ ಕೊನೆಯ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ. ಫಲಿತಾಂಶವನ್ನು ಮಧ್ಯಾಹ್ನ 3 ಗಂಟೆಗೆ ವೀಕ್ಷಿಸಬಹುದಾಗಿದೆ.

(http://kea.kar.nic.in/cet_2015.htm ಹಾಗೂ http://karresults.nic.in/) ಸೇರಿದಂತೆ ಕೆಲ ವೆಬ್ ಸೈಟ್ ಗಳಲ್ಲಿ ಮಾತ್ರ ಸಿಇಟಿ ಫಲಿತಾಂಶ ವೀಕ್ಷಿಸಬಹುದು. ಈ ಬಾರಿ ಕರ್ನಾಟಕ ಸಿಇಟಿ ಮೇ 12 ಹಾಗೂ 13 ರಂದು ನಡೆಸಲಾಯಿತು.

ಒಟ್ಟು 1,57,580 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಬೆಂಗಳೂರಿನಲ್ಲಿ 73 ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 343 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು ಇದರಲ್ಲಿ 82079 ವಿದ್ಯಾ ರ್ಥಿಗಳಿದ್ದರೆ, 75501 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.

ಮೆಡಿಕಲ್, ಡೆಂಟಲ್ ಅಥವಾ ಇಂಜಿನಿಯರಿಂಗ್ ಪೂರ್ಣಾವಧಿ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

ಸಿಇಟಿ ಎಂಜಿನಿಯರಿಂಗ್ ಫಲಿತಾಂಶ

ಸಿಇಟಿ ಎಂಜಿನಿಯರಿಂಗ್ ಫಲಿತಾಂಶ

ಸಿಇಟಿ ಎಂಜಿನಿಯರಿಂಗ್‌ ನಲ್ಲಿ ಶ್ರೀಧರ್ ದೊಡ್ಮನಿ ಪ್ರಥಮ ಎಕ್ಸಲೆಂಟ್‌ ಸೈನ್ಸ್ ಕಾಲೇಜು, ವಿಜಯಪುರ ಪ್ರಥಮ, ನಾರಾಯಣ ಪೈ ದ್ವಿತೀಯ ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜು, ದಕ್ಷಿಣ ಕನ್ನಡ ದ್ವಿತೀಯ, ದೇಬರ್ಶೋ ಸನ್ಯಾಸಿ ತೃತೀಯ ಜಿಂದಾಲ್ ವಿದ್ಯಾ ಮಂದಿರ, ಬಳ್ಳಾರಿ ತೃತೀಯ ಸ್ಥಾನ ಗಳಿಸಿದ್ದಾರೆ.

ಸಿಇಟಿ ಬಿಎಸ್‌ಸಿ ಅಗ್ರಿಕಲ್ಚರ್ ವಿಭಾಗ

ಸಿಇಟಿ ಬಿಎಸ್‌ಸಿ ಅಗ್ರಿಕಲ್ಚರ್ ವಿಭಾಗ

ಸಿಇಟಿ ಅಗ್ರಿಕಲ್ಚರ್‌ನಲ್ಲಿ ಶ್ರೀಧರ್ ದೊಡ್ಮನಿ ಪ್ರಥಮ ಎಕ್ಸಲೆಂಟ್‌ ಸೈನ್ಸ್ ಕಾಲೇಜು, ವಿಜಯಪುರ ಪ್ರಥಮ, ಶೈಕುಮಾರ್ ದ್ವಿತೀಯ ಚೇತನ ಇಂಡಿಪೆಂಡೆಂಟ್ ಪಿಯು ಕಾಲೇಜು, ಹುಬ್ಬಳ್ಳಿ ದ್ವಿತೀಯ, ಮಹಿಮಾ ಕೃಷ್ಣಾ ತೃತೀಯ ವಿವಿಎಸ್ ಸರ್ದಾರ್ ಪಟೇಲ್, ಬೆಂಗಳೂರು ತೃತೀಯ ಸ್ಥಾನ ಗಳಿಸಿದ್ದಾರೆ.

ಸಿಇಟಿ ವೆಟರ್ನರಿ ಸೈನ್ಸ್‌ ಫಲಿತಾಂಶ

ಸಿಇಟಿ ವೆಟರ್ನರಿ ಸೈನ್ಸ್‌ ಫಲಿತಾಂಶ

ಸಿಇಟಿ ವೆಟರ್ನರಿಯಲ್ಲಿ ವಿನೀತ್ ಮೆಗುರ್ ಪ್ರಥಮ ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು ಪ್ರಥಮ, ಅಪರೂಪ ದ್ವಿತೀಯ ಸಂಕಲ್ಪ ಪಿಯು ಕಾಲೇಜು, ಬಳ್ಳಾರಿ ದ್ವಿತೀಯ ಸ್ಥಾನ, ಆದಿತ್ಯ ತೃತೀಯ ಶ್ರೀ ಕುಮಾರನ್ ಚಿಲ್ಡ್ರನ್ಸ್‌ ಹೋಮ್, ಬೆಂಗಳೂರು ತೃತೀಯ ಸ್ಥಾನ ಗಳಿಸಿದ್ದಾರೆ.

ಸಿಇಟಿ ಫಾರ್ಮ ಫಲಿತಾಂಶ

ಸಿಇಟಿ ಫಾರ್ಮ ಫಲಿತಾಂಶ

ಸಿಇಟಿ ಫಾರ್ಮದಲ್ಲಿ, ತುಹೀನ್ ಗಿರಿನಾಥ್ ಪ್ರಥಮ ನಾರಾಯಣ ಇ ಟೆಕ್ನೋ ಬೆಂಗಳೂರು ಪ್ರಥಮ, ಅನಿತಾ ಜೇಮ್ಸ್‌ ದ್ವಿತೀಯ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು ದ್ವಿತೀಯ, ಯೋಗೇಶ್‌ ಮಾಧವ, ತೃತೀಯ ನಾರಾಯಣ ಇ ಟೆಕ್ನೋ ಬೆಂಗಳೂರು ತೃತೀಯ ಸ್ಥಾನ ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+