Get Updates
Get notified of breaking news, exclusive insights, and must-see stories!

ಕೆಆರ್‌ಎಸ್ ಡ್ಯಾಂನಲ್ಲಿ ಕುಸಿಯುತ್ತಿದೆ ನೀರು, ಬೆಂಗಳೂರಿಗೆ ಜಲ ಕಂಟಕ?

ಬೆಂಗಳೂರು ಬಂದ್ ಬಿಸಿಯನ್ನ ಇಂದು ಬೆಂಗಳೂರಿಗರು ಎದುರಿಸಿದ್ದಾರೆ. ಕೆಲವರು ಯಾಕೆ ಹೀಗೆ ಬಂದ್ ಮಾಡ್ತಾರಪ್ಪಾ? ಅಂತಾ ಗೊಣಗಿದ್ದಾರೆ. ಅದ್ರಲ್ಲೂ ಹೊರ ರಾಜ್ಯದವರಿಗೆ ಈ ಬಂದ್ ಹಿಂದಿನ ನಿಜವಾದ ಉದ್ದೇಶ ಅರ್ಥವೇ ಆದಂತೆ ಕಾಣುತ್ತಿಲ್ಲ. ಇದೆಲ್ಲಾ ಬಿಡಿ ಈಗ ಬೆಂಗಳೂರು ಬಂದ್ ಮೂಲಕ ಕನ್ನಡಿಗರು ಮತ್ತು ಹೊರರಾಜ್ಯದ ನಿವಾಸಿಗಳು ಎದುರಿಸಿದ ಸಮಸ್ಯೆ ತುಂಬಾ ಅಂದ್ರೆ ತುಂಬಾ ಸಣ್ಣದು. ಆದರೆ ನಿಜವಾದ ಕಂಟಕ ಮುಂದೆ ಕಾದಿದೆ.

ಹೌದು, ಕರ್ನಾಟಕದಲ್ಲಿ ಅದರಲ್ಲೂ ಕಾವೇರಿ ಕೊಳ್ಳದಲ್ಲಿ ಭೀಕರ ಬರಗಾಲ ಎದುರಾದ್ರೂ ತಮಿಳುನಾಡಿಗೆ ನೀರು ಬಿಡಲು ಆದೇಶ ಕೇಳಿಬರುತ್ತಿದೆ. ಹೀಗೆ ಹತ್ತಾರು ಟಿಎಂಸಿ ನೀರನ್ನು ಈಗಾಗಲೇ ಬರದ ಬೇಗೆಯಲ್ಲೂ ಕರ್ನಾಟಕ ತಮಿಳುನಾಡಿಗೆ ಕೊಟ್ಟಿದೆ. ಇಷ್ಟು ಕೊಟ್ಟರೂ ಮತ್ತೆ ಮತ್ತೆ ನೀರು ಬಿಡುವಂತೆ ಕರ್ನಾಟಕದ ಮೇಲೆ ಒತ್ತಡ ಹೇರಲಾಗುತ್ತಿದೆ. ಇದೇ ವೇಳೆ ಬೆಂಗಳೂರಿನ ನಿವಾಸಿಗಳಿಗೆ ಬಿಪಿ ಹೆಚ್ಚಾಗುವ ಸುದ್ದಿಯೊಂದು ಬಂದಿದೆ. ಈ ಬಾರಿ ಬೇಸಿಗೆ ವೇಳೆಗೆ ರಾಜಧಾನಿ ಬೆಂಗಳೂರು ಜಲಕಂಟಕದಲ್ಲಿ ನರಳುವುದು ಬಹುತೇಕ ಪಕ್ಕಾ ಆಗಿದೆ.

big-water-problem-in-upcoming-summer

ಕುಸಿದ ಕೆಆರ್‌ಎಸ್ ಡ್ಯಾಂ ಮಟ್ಟ

ಕಾವೇರಿ ನದಿ ನೀರಿನ ವಿಚಾರಕ್ಕೆ ಫೈಟಿಂಗ್ ನಡೆಯುವಾಗಲೇ ಕನ್ನಡಿಗರಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ KRS ಡ್ಯಾಂನಲ್ಲಿ ಇದೀಗ ಕೇವಲ 20 ಟಿಎಂಸಿ ನೀರು ಬಾಕಿ ಉಳಿದಿದ್ದು, ಬೆಂಗಳೂರು ನಗರಕ್ಕೆ ಕುಡಿಯಲು ಪ್ರತಿ ತಿಂಗಳು 1.5 ಟಿಎಂಸಿ ನೀರು ಬೇಕಿದೆ. ಈ ಜಲಾಶಯಕ್ಕೆ ಒಳಹರಿವು 7,134 ಕ್ಯೂಸೆಕ್ ಇದ್ದು, ಹೊರಹರಿವು 5,688 ಕ್ಯೂಸೆಕ್ ದಾಖಲಾಗಿದೆ. ಈ ಮೂಲಕ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 96.80 ಅಡಿಗೆ ಕುಸಿದು ಬಿದ್ದಿದೆ. ಮುಂದಿನ ದಿನಗಳಲ್ಲಿ ಒಳಹರಿವು ಪೂರ್ತಿ ಕುಸಿದು ಹೋಗಲಿದೆ.

ಮುಂದೆ ಮಳೆಯಾಗದಿದ್ದರೆ ಕಂಟಕ!

ಇದೀಗ ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾವೇರಿ ನೀರಿನ ವಿಚಾರಕ್ಕೆ ಕಿಚ್ಚು ಹೊತ್ತಿರುವಾಗ ಮತ್ತೆ ಶಾಕ್ ಸಿಕ್ಕಿದೆ. ತಮಿಳುನಾಡಿಗೆ ಮತ್ತೆ 18 ದಿನ ಪ್ರತಿ ನಿತ್ಯವೂ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇಂದು ಆದೇಶ ನೀಡಿದೆ. ಹೀಗಾಗಿ ಕೆಆರ್‌ಎಸ್ ಜಲಾಶಯ ಮತ್ತಷ್ಟು ಬರಿದಾಗುವುದು ಪಕ್ಕಾ. ಅದರಲ್ಲೂ ಬೇಸಿಗೆಯ ಹೊತ್ತಿಗೆ ಕೆಆರ್‌ಎಸ್ ಭಾಗಶಃ ಬರಿದಾಗುವುದು ಗ್ಯಾರಂಟಿ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದೇ ಇದ್ರೆ ಬೆಂಗಳೂರಿಗೆ ಜಲಕಂಟಕ ಪಕ್ಕಾ ಅಂತಿದ್ದಾರೆ ತಜ್ಞರು.

big-water-problem-in-upcoming-summer

ನೆರೆ ರಾಜ್ಯದಲ್ಲೂ ಜೋರಾದ ಹೋರಾಟ

ತಮಿಳುನಾಡು ಸರ್ಕಾರ ಹೆಚ್ಚು ನೀರು ಸಿಕ್ಕಾಗ ಅದನ್ನ ಉಳಿಸಿಕೊಳ್ಳದೆ ಸಮುದ್ರಕ್ಕೆ ಬಿಟ್ಟು ಈಗ ನಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದು ಕರ್ನಾಟಕ ಆರೋಪಿಸಿದೆ. ಹೀಗೆ ಎರಡೂ ರಾಜ್ಯಗಳ ಕಿಚ್ಚು ದೊಡ್ಡದಾದ ವೇಳೆ ತಮಿಳುನಾಡಿನ ರೈತರೂ ಆಕ್ರೋಶ ಹೊರಹಾಕಿದ್ದು, 'ನ್ಯಾಷನಲ್ ಸೌಥ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಷನ್' ಹೋರಾಟ ಆರಂಭಿಸಿದೆ. ಈ ಸಂಘಟನೆಯ ತಮಿಳುನಾಡು ಘಟಕದ ಅಧ್ಯಕ್ಷ ಅಯ್ಯಕಣ್ಣು ಅವರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದೆ.

ಸತ್ತ ಇಲಿಗಳ ಜೊತೆ ತಲೆಬುರುಡೆ!

ತಿರುಚ್ಚಿಯಲ್ಲಿ ಮಾನವ ತಲೆಬುರುಡೆ ಹಾಗೂ ಸತ್ತ ಇಲಿ ಹಿಡಿದು ಕಾವೇರಿ ನೀರಿನಲ್ಲಿ ತಮ್ಮ ಪಾಲಿಗಾಗಿ ಆಗ್ರಹಿಸಿದ್ದಾರೆ ತಮಿಳುನಾಡು ರೈತರು. ಅರೆಬೆತ್ತಲೆಯಾಗಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು ಅಲ್ಪಾವಧಿ ಕುರುವೈ ಬೆಳೆಗೂ ಸೂಕ್ತ ಪರಿಹಾರ ನೀಡಲು ಆಗ್ರಹಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ವಿರುದ್ಧ ಇದೇ ವೇಳೆ 'ನ್ಯಾಷನಲ್ ಸೌಥ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಷನ್' ಆಕ್ರೋಶ ಹೊರಹಾಕಿದೆ. ಈ ಮೂಲಕ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಕಾವೇರಿ ಹೋರಾಟದ ಬಿಸಿ ಹೆಚ್ಚಾಗಿದೆ.

ಒಟ್ನಲ್ಲಿ ಬರದ ಮಧ್ಯೆ ಕರ್ನಾಟಕ ರಾಜಧಾನಿಗೆ ಕುಡಿಯುವ ನೀರು ಸಿಗುತ್ತೋ? ಇಲ್ವೋ? ಎಂಬ ಪ್ರಶ್ನೆ ಮೂಡಿದೆ. ಈಗಿನ್ನೂ ಕೇವಲ ಬೆಂಗಳೂರು ಬಂದ್ ಬಿಸಿ ಕಂಡಿರುವ ಜನರಿಗೆ ಮುಂದೆ ಇನ್ನು ದೊಡ್ಡ ಹೋರಾಟಗಳು ಎದುರಾಗುವ ಸಾಧ್ಯತೆಗಳು ಇವೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಕಾನೂನು ಹೋರಾಟದ ಮೂಲಕ, ನೀರು ಹರಿಸಲು ಆಗಲ್ಲ ಎಂಬ ಸತ್ಯ ತಿಳಿಸಲು ಯತ್ನಿಸುತ್ತಿದೆ. ಆದರೆ ಈ ಹೋರಾಟದಲ್ಲಿ ಜಯ ಸಿಗದಿದ್ದರೆ ಸಮಸ್ಯೆ ಗ್ಯಾರಂಟಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+