Karnataka: ಆದಿವಾಸಿಗಳ ಬದುಕಿಗೆ ಹೊಸ ಭರವಸೆ, ಹೊಸ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಪುಟ ಅಸ್ತು!

ಬೆಂಗಳೂರು: ಕರ್ನಾಟಕ ಸರ್ಕಾರ ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುವ ಆದಿವಾಸಿಗಳ ಸಬಲೀಕರಣಕ್ಕಾಗಿ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಜೊತೆಗೆ ವಿದ್ಯುತ್ ವಲಯದಲ್ಲಿ ಪಾರದರ್ಶಕತೆಗೆ, ಜನಕಲ್ಯಾಣಕ್ಕೆ ಹೊಸ ದಿಕ್ಕು ನೀಡಲು ವಿವಿಧ ನೀರ್ಣಯಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ನವ ಕರ್ನಾಟಕ ನಿರ್ಮಾಣಕ್ಕೆ 7 ಸೂತ್ರಗಳನ್ನು ಹಾಕಿಕೊಂಡಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ತಿಳಿಸಿದೆ.

ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುವ ಆದಿವಾಸಿಗಳ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜ್ಯದ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಪ್ರದೇಶಳಲ್ಲಿ ವಾಸಿಸುತ್ತಿರುವ 'ಸೋಲಿಗ, ಜೇನುಕುರುಬ, ಕಾಡುಕುರುಬ, ಸಿದ್ಧಿಗಳು' ಸೇರಿದಂತೆ ರಾಜ್ಯದ ಹಲವು ಆದಿವಾಸಿ ಜನಾಂಗಗಳ ಸುಸ್ಥಿರ ಜೀವನ ಸುಧಾರಣೆಗಾಗಿ 'ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ' ಸ್ಥಾಪನೆಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ ಎಂದು ತಿಳಿಸಿದೆ.

Karnataka Cabinet

'ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ'ದ ಸ್ಥಾಪನೆಗೆ ರಾಜ್ಯ ಸರ್ಕಾರವು ಒಟ್ಟು ಸುಮಾರು 33.36 ಕೋಟಿ ರೂಪಾಯಿ ಅನುದಾನಕ್ಕೂ ಬಿಡುಗಡೆಗೂ ಅನುಮೋದನೆ ಕೊಟ್ಟಿದೆ. ಶೀಘ್ರವೇ ನಿರ್ಮಾಣದ ಎಲ್ಲ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ ಎನ್ನಲಾಗಿದೆ.

ವಿದ್ಯುತ್ ವಲಯದಲ್ಲಿ ಪಾರದರ್ಶಕತೆ

ಇನ್ನೂ ರಾಜ್ಯದ ವಿದ್ಯುತ್ ವಲಯದಲ್ಲಿ ಪಾರದರ್ಶಕತೆ ತರಲು ಹಾಗೂ ತಂತ್ರಜ್ಞಾನ ಆಧಾರಿತ ನಿರ್ವಹಣೆಗೆ 'ಎನರ್ಜಿ ರಿಕಾನ್ಸಿಲಿಯೇಷನ್' ಎಂಬ ಅತ್ಯಾಧುನಿಕ ಡಿಜಿಟಲ್ ವೇದಿಕೆ ಬಳಕೆಗೆ ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ. ಈ ಆಧುನಿಕ ವ್ಯವಸ್ಥೆಯಿಂದ ವಿದ್ಯುತ್ ಉತ್ಪಾದನೆಯಿಂದ ಹಿಡಿದು ವಿತರಣೆವರೆಗೆ ಎಲ್ಲ ಕೆಲಸಗಳನ್ನು ಒಂದೇ ಸೂರಿನಡಿ ನಿರ್ವಹಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು. ಇದರಿಂದ ಬಳಕೆದಾರರಿಗೆ ಹೆಚ್ಚಿನ ಸಹಾಯವಾಗಲಿದೆ.

ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣ

ಜನಕಲ್ಯಾಣಕ್ಕೆ ಹೊಸ ದಿಕ್ಕು ನೀಡಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ವಿವಿಧ ನಿಗಮಗಳಡಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆಗೆ 16.04 ಕೋಟಿ ರೂಪಾಯಿ ನೀಡಲು ಸಮ್ಮತಿಸಲಾಗಿದೆ.

ಇನ್ನೂ ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದಲ್ಲಿರುವ ಕ್ರಾಂತಿ ವೀರಂ ಸಂಗೊಳ್ಳಿ ರಾಯಣ್ಣ ಸ್ಮರಣಾರ್ಥ ನಿರ್ಮಿಸಿದ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ನಿರ್ಮಾಣ ನಿರ್ಮಾಣವಾಗಿದೆ. 2022ರಿಂದಲೇ ಕಾರ್ಯಾರಂಭಗೊಂಡಿದ್ದು, ರಾಜ್ಯ ಸರ್ಕಾರ ಈ ಶಾಲೆಗೆ ಹೆಚ್ಚುವರಿಯಾಗಿ 228.95 ಕೋಟಿ ರೂ. ಅನುದಾನ ಹಾಗೂ 21.11 ಕೋಟಿ ರೂ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆಗಳ ಲ್ಯಾಬ್ ಉಪಕರಣಗಳ ಖರೀದಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಸರ್ಕಾರ ತಿಳಿಸಿದೆ.

ನವ ಕರ್ನಾಟಕ ನಿರ್ಮಾಣಕ್ಕೆ 7 ಸೂತ್ರ

ಬಲಿಷ್ಟ ಕರ್ನಾಟಕಕ್ಕಾಗಿ ರಾಜ್ಯ ಸರ್ಕಾರ ದೂರದೃಷ್ಟಿ ಹೆಜ್ಜೆ ಇಟ್ಟಿದೆ.

1. ಉದ್ಯಮ ಕರ್ನಾಟಕ: ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕೆಗಳ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಸಲು ನಿರ್ಧಾರ

2. ಸೇವಾ ಉನ್ನತಿ ಕರ್ನಾಟಕ: ಗುಣಮಟ್ಟದ ಸಾರ್ವಜನಿಕ ಸೇವೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೊಳಿಸುವುದು.

3. ಸಂಚಾರ ಕರ್ನಾಟಕ: ಆಧುನಿಕ ಸಾರಿಗೆ ಮತ್ತು ಸುಧಾರಿತ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು.

4. ಪರಿಸರ ಕರ್ನಾಟಕ: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ನಗರಾಭಿವೃದ್ಧಿಗೆ ಆದ್ಯತೆ ನೀಡುವುದು.

5. ಪ್ರತಿಭಾ ಕರ್ನಾಟಕ: ಶಿಕ್ಷಣ, ಕೌಶಲ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುವುದು.

6. ಸಮೃದ್ಧಿ ಕರ್ನಾಟಕ: ರಾಜ್ಯದ ಎಲ್ಲ ಪ್ರದೇಶಗಳ ಸಮಗ್ರ ಆರ್ಥಿಕ ಬೆಳವಣಿಗೆ ಆದ್ಯತೆ

7. ಡಿಜಿಟಲ್ ಕರ್ನಾಟಕ: ತಂತ್ರಜ್ಞಾನ ಆಧಾರಿತ ಅಡಳಿತ ಮತ್ತು ಸೇವೆಗಳ ವಿಸ್ತರಣೆಗೆ ಸರ್ಕಾರ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+