ಯಡಿಯೂರಪ್ಪ ಕೈಸೇರಿರುವ ಗುಪ್ತಚರ ಸಮೀಕ್ಷೆಯ ಅಂತಿಮ ವರದಿ: ಯಾರಿಗೆ ಎಷ್ಟು?
ಬೆಂಗಳೂರು, ಡಿ : ರಾಜ್ಯದ ಜನತೆಯನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಇಂದು (ಡಿ 5) ಮುಕ್ತಾಯಗೊಂಡಿದೆ. ಒಟ್ಟಾರೆಯಾಗಿ, ಸರಾಸರಿ ಶೇ. 62.5 ಮತದಾನವಾಗಿದೆ.
ಮತದಾನ ಮುಗಿದ ಕೂಡಲೇ ಕನ್ನಡದ ವಿವಿಧ ಮಾಧ್ಯಮಗಳು ಮತ್ತು ಸಿವೋಟರ್, ಮತಗಟ್ಟೆ ಸಮೀಕ್ಷೆಯನ್ನು ನಡೆಸಿದೆ. ಬಿಜೆಪಿ 'ಉಸ್ಸಪ್ಪಾ' ಎನ್ನುವ ವರದಿಗಳು ಸಮೀಕ್ಷೆಯಲ್ಲಿ ಬಂದಿದೆ.
ಈ ನಡುವೆ, ಗುಪ್ತಚರ ಇಲಾಖೆ, ಉಪಚುನಾವಣೆಯಲ್ಲಿ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು ಎನ್ನುವುದರ ಬಗ್ಗೆ ವರದಿಯನ್ನು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದೆ ಎನ್ನುವ ಮಾಹಿತಿಯಿದೆ.

ಕ್ಷೇತ್ರಾವಾರು ಯಾರಿಗೆ ಮುನ್ನಡೆ, ಹಿನ್ನಡೆ ಎನ್ನುವುದರ ಬಗ್ಗೆ ಸದ್ಯ ಮಾಹಿತಿಯಿಲ್ಲದಿದ್ದರೂ, ಒಟ್ಟಾರೆಯಾಗಿ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು ಎಂದು, ಇಲಾಖೆ ನೀಡಿದೆ ಎನ್ನಲಾಗುತ್ತಿರುವ ವರದಿ ಹೀಗಿದೆ:
ಬಿಜೆಪಿ - 10
ಕಾಂಗ್ರೆಸ್ - 02
ಜೆಡಿಎಸ್ - 02
ಪಕ್ಷೇತರರು - 01
15ಕ್ಷೇತ್ರಗಳಿಗೆ ನಡೆದ ಅಸೆಂಬ್ಲಿ ಚುನಾವಣೆಯ ಮತದಾನ ಡಿಸೆಂಬರ್ ಐದರಂದು ನಡೆದಿದ್ದು, ಫಲಿತಾಂಶ, ಸೋಮವಾರ (ಡಿ 9) ಹೊರಬೀಳಲಿದೆ.












Click it and Unblock the Notifications