ಉಪ ಚುನಾವಣೆ: ಸ್ಫೋಟಗೊಂಡ ವಿಜಯೇಂದ್ರ ಅಭಿಮಾನಿಗಳ ಆಕ್ರೋಶ!
ಬೆಂಗಳೂರು,
ಅ. 04: ಕರ್ನಾಟಕದ ಚುನಾವಣಾ ಚಾಣಕ್ಯ ಎಂದೇ ಬಿಜೆಪಿಯಲ್ಲಿ ಬಿಂಬಿತವಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆಯಾ? ಅಂಥದ್ದೊಂದು ಚರ್ಚೆ ಇದೀಗ ಶುರುವಾಗಿದೆ. ಜೊತೆಗೆ ಉಪ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಯಾವುದೇ ಜವಾಬ್ದಾರಿ ಕೊಡದಿರುವುದನ್ನು ಅವರ ಅಭಿಮಾನಿಗಳು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಟೀಕೆ ಅನ್ನುವುದಕ್ಕಿಂತ ಬಿಜೆಪಿ ನಾಯಕರ ಮೇಲೆ ವಾಗ್ದಾಳಿಯನ್ನೇ ನಡೆಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಬಿ.ಎಸ್.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಹುತೇಕ ಎಲ್ಲ ಚುನಾವಣೆಗಳ ಉಸ್ತುವಾರಿಯನ್ನು ಬಿ.ವೈ. ವಿಜಯೇಂದ್ರ ಅವರಿಗೆ ವಹಿಸಲಾಗಿತ್ತು. ಆದರೆ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಆರೋಪಗಳು ಎದುರಾಗಿವೆ. ಅವರ ಅಭಿಮಾನಿಗಳಂತೂ ಬಿಜೆಪಿ ನಾಯಕರ ಮೇಲೆ ಕೆಂಡಾಮಂಡಲವಾಗಿದ್ದಾರೆ. ಸಂಪೂರ್ಣ ವಿವರ ಮುಂದಿದೆ. id='are-slot-2' class='oiad oi-axt oiadv'>
ವಿಜಯೇಂದ್ರ ಬೆಂಬಲಿಗರು ಕೆಂಡಾಮಂಡಲ!
ಉಪಚುನಾವಣೆ ಉಸ್ತುವಾರಿ ವಿಚಾರದಲ್ಲಿ ಬಿಜೆಪಿಯಲ್ಲಿ ಶೀತಲ ಸಮರ ಆರಂಭವಾಗಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಿಂದಗಿ ಉಪ ಚುನಾವಣೆ ಉಸ್ತುವಾರಿ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದರುವ ಅಭಿಮಾನಿಗಳು, ವಿಜಯೇಂದ್ರ ಹೆಸರು ಕೈಬಿಟ್ಟಿದ್ದಕ್ಕೆ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಅಸಮಾಧಾನವನ್ನು ಫೇಸ್‌ಬುಕ್‌ನಲ್ಲಿ ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲವಾಗಿ ಹೊರ ಹಾಕಿದ್ದಾರೆ. ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಕಟೀಲ್ ನಿನ್ನೆ ಭಾನುವಾರ ಆದೇಶ ಮಾಡಿದ್ದರು. ಆದರೆ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಸ್. ಸಂತೋಷ್ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

ಬಿ.ಎಲ್. ಸಂತೋಷ್ ವಿರುದ್ಧ ಏಕಚನದ ವಾಗ್ದಾಳಿ!
ಬಿವೈ ವಿಜಯೇಂದ್ರ ಅಭಿಮಾನಿಗಳು ಎಂದು ಹೇಳಿಕೊಂಡಿರುವವರು, ಫೇಸ್‌ಬುಕ್‌ನಲ್ಲಿ ಬಿಜೆಪಿ ನಾಯಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲಿಯೂ ಬಿಜೆಪಿ ರಾಷ್ಟ್ರಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಎರಡು ಕ್ಷೇತ್ರಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಅದರಲ್ಲಿ ವಿಜಯೇಂದ್ರ ಅವರ ಹೆಸರನ್ನು ಬೇಕೆಂದೇ ಕೈಬಿಡಲಾಗಿದೆ. ದೆಹಲಿಯ ಎಸಿ ರೂಂನಲ್ಲಿ ಕುಳಿತ ತಿಗಣಿ ಗಿರಾಕಿಯೊಬ್ಬ, ತನ್ನ ಚೇಲಾ ಕಟೀಲ್ ಮೂಲಕ ಈ ರೀತಿ ಮಾಡಿಸಿದ್ದಾನೆ ಎಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

ವಿಜಯೇಂದ್ರ ಬೆಳೆಯುತ್ತಿರುವುದನ್ನು ನೋಡಿ ಹೆದರಿಕೆ!
ಇಷ್ಟಕ್ಕೆ ಸುಮ್ಮನಾಗದೇ ವಿಜಯೇಂದ್ರ ಹೆಸರನ್ನು ಬೇಕೆಂದೇ ತೆಗೆಸಿದ್ದಾನೆ. ವಿಜಯೇಂದ್ರ ಬೆಳೆಯೋದನ್ನು ನೋಡಿ ಹೆದರಿ ಕಡಿವಾಣ ಹಾಕೋಕೆ ಪ್ರಯತ್ನ ನಡೆಸಿದ್ದಾನೆ. ಹೆದರಿಕೆಯಾದ್ರೆ ಡೈಪರ್ ಹಾಕಿಕೊಳ್ರಲೇ, ಕಾರ್ಯಕರ್ತರ ಬೆಂಬಲ ಇರುವವರೆಗೆ ವಿಜಯೇಂದ್ರ ಓಟಕ್ಕೆ ಬ್ರೇಕ್ ಸಾಧ್ಯವಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಬಿಜೆಪಿ ನಾಯಕರ ವಿರುದ್ಧ ವಿಜಯೇಂದ್ರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಹಂತದ ದಿಢೀರ್ ಬೆಳವಣಿಗೆಯನ್ನು ಸೂಚಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Recommended Video

ಉಪ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ?
ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕಳಿ ಬಂದಿದ್ದವು. ಆದರೆ ಅದಕ್ಕೆ ಸ್ವತಃ ವಿಜಯೇಂದ್ರ ಅವರು ಸ್ಪಷ್ಟನೆ ಕೊಟ್ಟಿದ್ದರು. ಜೊತೆಗೆ ಯಾವುದೇ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಕೊಟ್ಟರೂ ನಿಭಾಯಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಾನಗಲ್ ಅಥವಾ ಸಿಂದಗಿ ಕ್ಷೇತ್ರದ ಉಸ್ತುವಾರಿಗಳ ಪಟ್ಟಿಯಲ್ಲಿ ವಿಜಯೇಂದ್ರ ಹೆಸರಿಲ್ಲ. ಹೀಗಾಗಿ ಇದು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಆಗುತ್ತಿರುವ ಹಿನ್ನಡೆ ಎಂದೆ ವಿಶ್ಲೇಷಣೆ ಮಾಡಲಾಗುತ್ತಿದೆ. ಹೀಗಾಗಿ ವಿಜಯೇಂದ್ರ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.












Click it and Unblock the Notifications