Karnataka Budget 2023: ಸಿಎಂ ಬೊಮ್ಮಾಯಿ ತವರು ಜಿಲ್ಲೆ 'ಹಾವೇರಿ' ಜನರ ನಿರೀಕ್ಷೆಗಳೇನು?

ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ಬಸವರಾಜ ಬೊಮ್ಮಾಯಿ ಫೆ.17ರಂದು ಕರ್ನಾಟಕ ಬಜೆಟ್ 2023 ಮಂಡಿಸಲಿದ್ದಾರೆ. ಈ ಬಾರಿ ಹಾವೇರಿ ಜಿಲ್ಲೆ ಜನರ ನಿರೀಕ್ಷೆಗಳು ಏನೇನಿವೆ?. ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಫೆಬ್ರವರಿ 07: ಮುಖ್ಯಮಂತ್ರಿ ಗಾದಿಗೇರಿದ ಬಳಿಕ ಬಸವರಾಜ ಬೊಮ್ಮಾಯಿಯವರು ತವರು ಜಿಲ್ಲೆಯ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಈ ಸಲದ ಕರ್ನಾಟಕ ಬಜೆಟ್‌ನಲ್ಲಿ ಹಾವೇರಿ ಜಿಲ್ಲೆಯ ಜನರ ಬಹುದಿನಗಳ ಕನಸು, ಬೇಡಿಕೆ ಈಡೇರಿಲಿವೆಯೇ?. ಹಾಗಾದರೆ 'ಕರ್ನಾಟಕ ಬಜೆಟ್ 2023' ಕುರಿತು ಹಾವೇರಿಗರ ನಿರೀಕ್ಷೆಗಳೇನು ಎಂಬ ಮಾಹಿತಿ ಇಲ್ಲಿದೆ.

ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿಯವರು ಎರಡನೇ ಬಾರಿಗೆ ಫೆ.17 ರಂದು ಕರ್ನಾಟಕ ಬಜೆಟ್ 2023 ಮಂಡಿಸಲಿದ್ದಾರೆ. ಅವರು ಕಳೆದೊಂದು ವರ್ಷದಿಂದ ಸ್ವಕ್ಷೇತ್ರ ಹಾವೇರಿ ಜಿಲ್ಲೆ ಶಿಗ್ಗಾವಿ ಭಾಗದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಅದರಲ್ಲೂ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಜಕ್ಕನಕಟ್ಟಿಯಲ್ಲಿ ಸಿದ್ಧ ಉಡುಪು ಘಟಕ ಸ್ಥಾಪಿಸಲಾಗುತ್ತಿದೆ. ಶಿಗ್ಗಾವಿ ವ್ಯಾಪ್ತಿಯಲ್ಲಿ ಗಮನಾರ್ಹವಾದ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಷ್ಟಾದರೂ ಒಂದಷ್ಟು ಬೇಡಿಕೆಗಳು, ನಿರೀಕ್ಷೆಗಳ ಅವಲೋಕನ ಮಾಡಲಾಗಿದೆ. ಈ ಸಲವು ರೈತರು ಸೇರಿದಂತೆ ಸಾರ್ವಜನಿಕರು ಹಲವು ನಿರೀಕ್ಷೆಗಳನ್ನು ಹೊರ ಹಾಕಿದ್ದಾರೆ.

ಶಿಗ್ಗಾವಿ ವ್ಯಾಪ್ತಿಯಲ್ಲಿ 'ಶಾಹಿ ಎಕ್ಸಪೋಟ್ರ್ಸ್ ಸಿದ್ಧ ಉಡುಪು ತಯಾರಿಕಾ ಘಟಕ'ಕ್ಕೆ ತಲೆಎತ್ತಲು ಸಜ್ಜಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧ ಹಿಂದುಳಿದ ತಾಲೂಕುಗಳಾದ ಬ್ಯಾಡಗಿ, ಸವಣೂರು, ಹಾವೇರಿ ಮುಂತಾದೆಡೆ ಮತ್ತಷ್ಟು ಘಟಕ (ಗಾರ್ಮೆಂಟ್ಸ್)ಗಳನ್ನು ಆರಂಭಿಸಬೇಕು.

ಕುಟುಂಬ ಸಲಹಲು ಕಷ್ಟ ಪಡುತ್ತಿರುವ ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶ ಸೃಷ್ಟಿಸಿ ಕೊಡಬೇಕು. ಇದರಿಂದ ಸಾಕಷ್ಟು ಕುಟುಂಬಗಳು ಹಾಗೂ ಜಿಲ್ಲೆಯ ಆರ್ಥಿಕತೆ ವೃದ್ಧಿಯಾಗಲಿದೆ ಎಂಬ ಬೇಡಿಕೆ ಬೊಮ್ಮಾಯಿಯವರ ಮುಂದಿದೆ. ಮುಖ್ಯಮಂತ್ರಿಗಳೇ ತಿಳಿಸಿರುವಂತೆ ಶಿಗ್ಗಾವಿ ತಾಲೂಕನ್ನು'ಟೆಕ್ಸ್ ಟೈಲ್ಸ್ ಮತ್ತು ಸಿದ್ಧ ಉಡುಪು ಹಬ್ (ಕೇಂದ್ರ)' ವಾಗಿಸುವ ಗುರಿ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಒಂದಷ್ಟು ಘೋಷಣೆ ಮಾಡಬಹದು ಎನ್ನಲಾಗಿದೆ.

ತಾಲೂಕುಗಳಿಗೆ ಕೈಗಾರಿಕೆ ಯೋಜನೆ ವಿಸ್ತರಿಸಲು ಬೇಡಿಕೆ

ತಾಲೂಕುಗಳಿಗೆ ಕೈಗಾರಿಕೆ ಯೋಜನೆ ವಿಸ್ತರಿಸಲು ಬೇಡಿಕೆ

ಉದ್ಯೋಗ ಸೃಷ್ಟಿಗೆ ಸರ್ಕಾರ ಶಿಗ್ಗಾವಿ ತಾಲೂಕಿನ ಕುರುಸಾಪುರ ಗ್ರಾಮದ ಬಳಿ 'ಜವಳಿ ಪಾರ್ಕ್' ನಿರ್ಮಿಸಲು ಶಂಕು ಸ್ಥಾಪನೆ ಮಾಡಿದೆ. ಅದೇ ರೀತಿ ರಟ್ಟಿಹಳ್ಳಿ, ಸವಣೂರು, ಹಾವೇರಿ, ಹಿರೇಕೆರೂರು, ಬ್ಯಾಡಗಿ, ಹಾನಗಲ್, ರಾಣೆಬೆನ್ನೂರು ಸೇರಿ ಒಟ್ಟು 08 ತಾಲೂಕುಗಳ ಭಾಗಕ್ಕೂ 'ಹೊಸ ಹೊಸ ಕೈಗಾರಿಕೆ'ಗಳನ್ನು ಸರ್ಕಾರ ವಿಸ್ತರಿಸಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.

ಹಾವೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಈಗಾಗಲೇ ರೈತರ ಜಮೀನುಗಳಲ್ಲಿ ಏತ ನೀರಾವರಿ ಕಾಲುವೆ ನಿರ್ಮಾಣ, ಇತರ ನೀರಾವರಿ ಯೋಜನೆಗಾಗಿ ಜಮೀನು ಪಡೆಯಲಾಗಿದೆ. ಆದರೆ ಕೆಲವು ಭೂ ಮಾಲೀಕ ರೈತರಿಗೆ ಪರಿಹಾರ ದೊರೆತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಕ್ರಮ ಹಾಗೂ ಸೂಕ್ತ ಪರಿಹಾರದ ಘೋಷಣೆ ಮಾಡುವರೆ ಮುಖ್ಯಮಂತ್ರಿಗಳು ಎಂದು ರೈತರು ಕಾಯುತ್ತಿದ್ದಾರೆ.

ಹಾವೇರಿಯ ಕನಸು 'ಮೆಕ್ಕೆಜೋಳ ಖರೀದಿ ಕೇಂದ್ರ'

ಹಾವೇರಿಯ ಕನಸು 'ಮೆಕ್ಕೆಜೋಳ ಖರೀದಿ ಕೇಂದ್ರ'

ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು 'ಗೋವಿನ ಜೋಳ (ಮೆಕ್ಕೆಜೋಳ)' ಉತ್ಪಾದನೆ ಆಗುತ್ತದೆ. 'ಮಕ್ಕೆಜೋಳ ಖರೀದಿ ಕೇಂದ್ರ' ಮಾಡಬೇಕು ಎಂಬುದು ಜಿಲ್ಲೆಯ ಬಹು ದಿನಗಳ ಕನಸು ಆಗಿದೆ. ಈ ಕನಸು 2023ರ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ನನಸು ಮಾಡುತ್ತಾರೆಂದು ರೈತರು ಕಾಯುತ್ತಿದ್ದಾರೆ.

ಮಳೆ, ನೆರೆ ಹಾನಿ ಪರಿಹಾರ ಸಿಗದವರಿಗೆ ನೆರವು ಒದಗಿಸಬೇಕು. ಮನೆ ಕಳೆದುಕೊಂಡು ನಿರಾಶ್ರಿತರಾದ ಅರ್ಹರಿಗೆ ಐದು ಲಕ್ಷ ರೂಪಾಯಿ ರೂ.ನ ಸಿಗಬೇಕು. ಕೆಲವರಿಗೆ ಐದು ಲಕ್ಷ ಪರಿಹಾರ ಹಣದ ಮನೆಗಳು ಸಿಕ್ಕಿಲ್ಲ ಎಂಬ ಕೂಗು ಇದೆ. ಈ ಬಗ್ಗೆ ಕ್ರಮ ವಹಿಸಬೇಕು.

ಜಿಲ್ಲೆಗೆ ಪ್ರತ್ಯೇಕ 'ಡಿಸಿಸಿ ಬ್ಯಾಂಕ್' ಸ್ಥಾಪನೆಯ ಘೋಷಣೆ?

ಜಿಲ್ಲೆಗೆ ಪ್ರತ್ಯೇಕ 'ಡಿಸಿಸಿ ಬ್ಯಾಂಕ್' ಸ್ಥಾಪನೆಯ ಘೋಷಣೆ?

ಹಾವೇರಿ ಜಿಲ್ಲೆಗೆ ಪ್ರತ್ಯೇಕ 'ಡಿಸಿಸಿ ಬ್ಯಾಂಕ್' ನಿರ್ಮಿಸಬೇಕೆಂಬುದು ಸ್ವತಃ ಮುಖ್ಯಮಂತ್ರಿಗಳೇ ಕನಸು ಹೊಂದಿದವರು. ಅವರ ಬಹು ದಿನಗಳ ಕನಸಿನ ಬಗ್ಗೆ ಈ ಹಿಂದೆ ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್ ಭರವಸೆ ನೀಡಿದ್ದರು. ಚರ್ಚಿಸಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದ ಸರ್ಕಾರ ಡಿಸಿಸಿ ಬ್ಯಾಂಕ್ ಸ್ಥಾಪನೆ ಬಗ್ಗೆ ಘೋಷಿಸುತ್ತದೆಯೇ ಎಂದು ಕಾದು ನೋಡಬೇಕಿದೆ. ಒಂದು ವೇಳೆ ಘೋಷಣೆಯಾದರೆ ಜಿಲ್ಲೆಯ ರೈತರಿಗೆ ಸಾಲ ಸೌಲಭ್ಯ, ಅಗತ್ಯ ಆರ್ಥಿಕ ಸಹಕಾರ ದೊರೆಯಲಿದೆ.

ದುಸ್ಥಿತಿಯ ರಸ್ತೆಗಳು ಅಭಿವೃದ್ಧಿ ಕಾಣಲಿ: ವಿದ್ಯಾರ್ಥಿಗಳು

ದುಸ್ಥಿತಿಯ ರಸ್ತೆಗಳು ಅಭಿವೃದ್ಧಿ ಕಾಣಲಿ: ವಿದ್ಯಾರ್ಥಿಗಳು

ಜಿಲ್ಲೆಯ ಗ್ರಾಮೀಣ ಭಾಗಗಳ ಪ್ರಮುಖ ರಸ್ತೆಗಳು ದುಸ್ಥಿತಿಯಲ್ಲಿದ್ದು, ಜನರ ಓಡಾಟವೇ ದುಸ್ತರವಾಗಿದೆ. ಕಳೆದ ತಿಂಗಳು ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'ಕ್ಕೆ ಸಿಮೀತವಾಗಿ ಒಂದಷ್ಟು ರಸ್ತೆಗಳು ತಾತ್ಕಾಲಿಕವಾಗಿ ದರುಸ್ತಿ ಕಂಡಿವೆ. ಜಿಲ್ಲೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗೆ ವಿಶೇಷ ಕ್ರಮ ಜರುಗಿಸಬೇಕು ಎಂಬುದು ಜಿಲ್ಲಾ ಕೇಂದ್ರಕ್ಕೆ ತೆರಳುವ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಸರ್ವಜ್ಞನ ಹುಟ್ಟೂರು: ಜೀರ್ಣೋದ್ಧಾರದ ನಿರೀಕ್ಷೆ

ಸರ್ವಜ್ಞನ ಹುಟ್ಟೂರು: ಜೀರ್ಣೋದ್ಧಾರದ ನಿರೀಕ್ಷೆ

ಸಂತ ಕನಕದಾಸರು, ಸರ್ವಜ್ಞ, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಮಹನೀಯರು ಹುಟ್ಟಿಬೆಳೆದು ಸಾಧನೆ ಮಾಡಿದ ಈ ನೆಲ, ಹಾವೇರಿ ಜಿಲ್ಲೆ ಮಾದರಿ ನಗರವಾಗಬೇಕು. ಕನಕದಾಸರ ಬಾಡ ಗ್ರಾಮ ಇನ್ನಷ್ಟು ಅಭಿವೃದ್ಧಿ ಮಾಡಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕಟ್ಟಡ ಸ್ಥಾಪನೆ ತ್ವರಿಗತಿಯಲ್ಲಿ ಆಗಬೇಕು. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಅನುದಾನ ಘೋಷಿಸಲಾಗಿದೆ. ಮುಂದುವರಿದು ಸರ್ವಜ್ಞ ಹುಟ್ಟೂರು ಅಬಲೂರು ಗ್ರಾಮದ ಸಮಗ್ರ ಅಭಿವೃದ್ಧಿ/ ಜೀರ್ಣೋದ್ಧಾರಕ್ಕೆ ಬಗ್ಗೆ ಸರ್ಕಾರ ಘೋಷಿಸಬೇಕೆಂಬುದು ನಾಗರಿಕರ ಬಯಕೆಯಾಗಿದೆ.

ಇಷ್ಟು ಪ್ರಮುಖ ಬೇಡಿಕೆಗಳ ಪೈಕಿ ಈ ವರ್ಷ ಯಾವ ಯಾವ ಹೊಸ ಯೋಜನೆಗಳು, ಬಂಪರ್ ಗಿಫ್ಟ ಬಜೆಟ್ ಮೂಲಕ ಮುಖ್ಯಮಂತ್ರಿಗಳ ತವರು ಜಿಲ್ಲೆಗೆ ಧಕ್ಕಲಿವೆ ಎಂಬುದು ಫೆ.17 ರಂದು ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+