Karnataka Budget 2023: ಸರ್ಕಾರಕ್ಕೆ ಕುಡುಕರೇ ಆಸರೆ, ಸಾರಾಯಿ- ಸೇಂದಿಯ ಮೇಲೂ ಕಣ್ಣು ಹಾಕಿದ ಸಿಎಂ- ಮಾಹಿತಿ ತಿಳಿಯಿರಿ

ಈ ಬಾರಿಯೂ ಸರ್ಕಾರ ಕುಡುಕರಿಗೆ ಶಾಕ್‌ ನೀಡಿದೆ. ಕುಡುಕರಿಗೆ ಈ ಬಾರಿಯು ಬರೆ ಹಾಕಿದೆ. ಅಬಕಾರಿ ಇಲಾಖೆ ವಿಚಾರವಾಗಿ ಈ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ನೀಡಿದ ಮಾಹಿತಿ ಏನು ಎಂಬುದನ್ನು ತಿಳಿಯಲು ಈ ವರದಿ ಓದಿ.

ಬೆಂಗಳೂರು, ಫೆಬ್ರವರಿ 17: ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್‌ ಅನ್ನು ಮಂಡಿಸಿದ್ದಾರೆ. ಅವರು ಜನಸಾಮಾನ್ಯರ ಹಿತದೃಷ್ಟಿಯನ್ನು ಇಟ್ಟುಕೊಂಡು ಬಜೆಟ್‌ ಮಾಡಿಸಿದ್ದಾರೆ ಎಂಬ ಮಾತುಗಳನ್ನೂ ಹೇಳಿದ್ದಾರೆ. ಆದರೆ, ಪ್ರತಿ ಬಾರಿಯಂತೆ, ಈ ಬಾರಿಯೂ ಸರ್ಕಾರ ಕುಡುಕರಿಗೆ ಶಾಕ್‌ ನೀಡಿದೆ. ಕುಡುಕರಿಗೆ ಈ ಬಾರಿಯು ಬರೆ ಹಾಕಿದೆ. ಅಬಕಾರಿ ಇಲಾಖೆ ವಿಚಾರವಾಗಿ ಈ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ನೀಡಿದ ಮಾಹಿತಿ ಏನು ಎಂಬುದನ್ನು ತಿಳಿಯಲು ಈ ವರದಿ ಓದಿ.

 ಸಿಎಂ ಬೊಮ್ಮಾಯಿ ಹೇಳಿದ್ದೇನು?

ಸಿಎಂ ಬೊಮ್ಮಾಯಿ ಹೇಳಿದ್ದೇನು?

ಸಾರಾಯಿ ಹಾಗೂ ಸೇಂದಿಗಳಿಗೆ ಸಂಬಂಧಪಟ್ಟ ಬಾಕಿ ಮೊತ್ತವನ್ನು ವಸೂಲಿ ಮಾಡುವುದಕ್ಕಾಗಿ ನೂತನ ಕರ ಸಮಾಧಾನ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈಗಿರುವ ಯೋಜನೆಯ ಅಡಿಯಲ್ಲಿ ಸಾರಾಯಿ ಹಾಗೂ ಸೇಂದಿಗೆ ಬಾಡಿಗೆಗಳ ಸಂಬಂಧದಲ್ಲಿ ಮೂಲ ಧನವನ್ನು ದಿನಾಂಕ 30.06.2023 ಅಥವಾ ಈ ದಿನಾಂಕಕ್ಕಿಂತ ಮೊದಲು ಪಾವತಿಸುವವರಿಗೆ ಬಡ್ಡಿ ಮತ್ತು ದಂಡ ಬಡ್ಡಿ ಪಾವತಿಗಳಲ್ಲಿ ಪರಿಹಾರ ನೀಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

 ಅಬಕಾರಿ ಇಲಾಖೆಗೆ ಟಾರ್ಗೆಟ್‌ ನೀಡಿದ ಸಿಎಂ

ಅಬಕಾರಿ ಇಲಾಖೆಗೆ ಟಾರ್ಗೆಟ್‌ ನೀಡಿದ ಸಿಎಂ

2022- 23 ರಲ್ಲಿ ಅಬಕಾರಿ ಇಲಾಖೆಗೆ ಸರ್ಕಾರವು ಟಾರ್ಗೆಟ್‌ ನೀಡಿದೆ. ಈ ಸಾಲಿನ ಆಯವ್ಯಯದಲ್ಲಿ 29,000 ರೂಪಾಯಿಗಳು ಗುರಿಯನ್ನು ನೀಡಲಾಗಿದೆ. ಈ ವರ್ಷದ ಅಂತ್ಯಕ್ಕೆ 32,000 ಕೋಟಿ ರೂಪಾಯಿಗಳ ಮೊತ್ತದ ರಾಜಸ್ವ ಸಂಗ್ರಹಣೆ ಮಾಡಲಿದ್ದೇವೆ ಎಂದು ಬೊಮ್ಮಾಯಿ ಖಚಿತಪಡಿಸಿದ್ದಾರೆ. ಇದು ಕಳೆದ ಆಯವ್ಯಯಕ್ಕಿಂತ ಶೇ 10 ರಷ್ಟು ಅಧಿಕವಾಗಿರಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 ಮುಂದಿನ ವರ್ಷಕ್ಕೂ ಟಾರ್ಗೆಟ್‌

ಮುಂದಿನ ವರ್ಷಕ್ಕೂ ಟಾರ್ಗೆಟ್‌

ಮುಂದಿನ ವರ್ಷ ಅಂದರೆ 2023-24ರ ಅಂತ್ಯದ ವೇಳೆಗೆ ರಾಜಸ್ವ ಸಂಗ್ರಹಣೆಗೆ ಗುರಿಯನ್ನು ನೀಡಲಾಗಿದೆ. ಅಬಕಾರಿ ಇಲಾಖೆಯು ಆ ಆರ್ಥಿಕ ವರ್ಷದ ಅಂತ್ಯದ ವೇಳೆ 35, 000 ಕೋಟಿ ರೂಪಾಯಿಗಳ ರಾಜಸ್ವ ಸಂಗ್ರಹಿಸಬೇಕೆಂದು ನಿಗದಿಪಡಿಸಲಾಗಿದೆ. ಒಟ್ಟಿನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಸರ್ಕಾರ ಕುಡುಕರ ಆಸರೆಯನ್ನು ಬಯಸಿದೆ. ಈ ಮೂಲಕ ಸರ್ಕಾರವು ಎಣ್ಣೆ ದರವನ್ನು ಏರಿಕೆ ಮಾಡಲಿದೆ ಎಂಬುದಂತೂ ಖಚಿತವಾಗಿದೆ.

 ಈ ಮೂಲಗಳಿಂದ ಅಬಕಾರಿ ಇಲಾಖೆಗೆ ಆದಾಯ

ಈ ಮೂಲಗಳಿಂದ ಅಬಕಾರಿ ಇಲಾಖೆಗೆ ಆದಾಯ

ಮದ್ಯ ಬಿಯರ್‌ ಮತ್ತು ವೈನ್‌ ಮಾರಾಟದಿಂದ ಸಂಗ್ರಹವಾಗುವ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಅಬಕಾರಿ ಸುಂಕದಿಂದ ಆದಾಯ ಬರುತ್ತದೆ. ಮದ್ಯ ಉತ್ಪಾದನಾ ಘಟಕಗಳು ಮತ್ತು ಚಿಲ್ಲರೆ ಮದ್ಯ ಮಾರಾಟ ಸನ್ನದುಗಳ ಮೇಲಿನ ಸನ್ನದು ಶುಲ್ಕದಿಂದಲೂ ಅಬಕಾರಿ ಇಲಾಖೆ ಆದಾಯ ಸಂಗ್ರಹಿಸುತ್ತದೆ. ಶುಲ್ಕಗಳು, ದಂಡ ಮತ್ತು ಮುಟ್ಟುಗೋಲು ಹಾಗೂ ಮುಟ್ಟುಗೋಲುಗಳಿಂದಲೂ ಅಬಕಾರಿ ಇಲಾಖೆ ಅದಾಯದ ಮೂಲವನ್ನು ಕಂಡುಕೊಂಡಿದೆ.

 ಕರ್ನಾಟಕ ಎಕ್ಸೈಸ್ ಆಕ್ಟ್

ಕರ್ನಾಟಕ ಎಕ್ಸೈಸ್ ಆಕ್ಟ್

'ಕರ್ನಾಟಕ ಎಕ್ಸೈಸ್ ಆಕ್ಟ್ 1965' ರ ಅಡಿಯಲ್ಲಿ ಬರುವ ಆದಾಯಕ್ಕೆ ಹೆಚ್ಚುವರಿಯಾಗಿ, ರಾಜ್ಯ ಸರ್ಕಾರವು ಔಷಧ ಮತ್ತು ಶೌಚಾಲಯ ತಯಾರಿಕೆಯ ಕಾಯಿದೆ ಅಡಿಯಲ್ಲಿ ಆದಾಯವನ್ನು ಪಡೆಯುತ್ತದೆ. ರಾಜ್ಯದಲ್ಲಿ ಅಬಕಾರಿ ಆದಾಯವು 1967-68ರ ಹಣಕಾಸು ವರ್ಷದಲ್ಲಿ ₹ 7.11 ಕೋಟಿಗಳಿಂದ 2021-22ರ ಹಣಕಾಸು ವರ್ಷದಲ್ಲಿ ₹ 26,377.68 ಕೋಟಿಗಳಿಗೆ ಏರಿದೆ. 2022-23ರ ಹಣಕಾಸು ವರ್ಷದ ಬಜೆಟ್ ಅಂದಾಜುಗಳು ₹ 29,000 ಕೋಟಿಗಳಾಗಿವೆ ಎಂದು ತಿಳಿದುಬಂದಿದೆ.

 3.09 ಲಕ್ಷ ಕೋಟಿ ಕರ್ನಾಟಕದ ಬಜೆಟ್

3.09 ಲಕ್ಷ ಕೋಟಿ ಕರ್ನಾಟಕದ ಬಜೆಟ್

ಕರ್ನಾಟಕದ ಬಜೆಟ್ 3.09 ಲಕ್ಷ ಕೋಟಿ, ಒಟ್ಟು ಸಾಲ 77,750 ಕೋಟಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸಾಂಕ್ರಾಮಿಕ ನಂತರದ ಪರಿಸ್ಥಿತಿಯಲ್ಲಿ ಮೊದಲ ಬಾರಿಗೆ, ಸಿಎಂ ಬೊಮ್ಮಾಯಿ ಅವರು ಆದಾಯ ಹೆಚ್ಚುವರಿ ಬಜೆಟ್ ಮಂಡಿಸಿದ್ದಾರೆ. ರಾಜಸ್ವ ವೆಚ್ಚಕ್ಕಿಂತ 402 ಕೋಟಿ ರೂ. ಆದಾಯದ ಆದಾಯ ಹೆಚ್ಚು ಎಂದು ಅಂದಾಜಿಸಲಾಗಿದೆ. ಅಬಕಾರಿ ಇಲಾಖೆಗೆ 29,000 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಿದ್ದು, ಈ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯವು 32,000 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸುತ್ತಿದೆ. 2023-24 ರ ಗುರಿಯನ್ನು 35,000 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ, ಇದು ಹಿಂದಿನ ವರ್ಷದ ಗುರಿಗಿಂತ 20 ಪ್ರತಿಶತ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+