ರೈತರಿಗೆ ₹ 5 ಲಕ್ಷ ಸಾಲ, ಮಹಿಳೆಯರಿಗೆ ಪ್ರತಿ ತಿಂಗಳು ಹಣ, ನೌಕರರಿಗೆ 7ನೇ ವೇತನ ಆಯೋಗ: ಬೊಮ್ಮಾಯಿ ಬಜೆಟ್‌ನಲ್ಲಿ ಏನಿದೆ?

ರೈತರಿಗೆ ₹ 5 ಲಕ್ಷ ಸಾಲ, ಮಹಿಳೆಯರಿಗೆ ಪ್ರತಿ ತಿಂಗಳು ಹಣ, ನೌಕರರಿಗೆ 7ನೇ ವೇತನ ಆಯೋಗ: ಬೊಮ್ಮಾಯಿ ಬಜೆಟ್‌ನಲ್ಲಿ ಏನಿದೆ? ಮಾಹಿತಿ ತಿಳಿಯಿರಿ

ಬೆಂಗಳೂರು, ಫೆಬ್ರವರಿ 17: ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಇದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರದ ಕೊನೆಯ ಬಜೆಟ್‌ ಆಗಿದೆ. ಚುನಾವಣೆಯಲ್ಲಿ ಮತ್ತೆ ಜಯಭೇರಿ ಬಾರಿಸಬೇಕೆಂಬ ಮಹದಾಸೆ ಹೊಂದಿರುವ ಬೊಮ್ಮಯಿ ಈ ಬಾರಿ ಜನಪರ ಬಜೆಟ್‌ ಮಂಡಿಸುವ ತುರಾತುರಿಯಲ್ಲಿದ್ದಾರೆ. ಸಾಮಾನ್ಯ ಜನರನ್ನು ತಲೆಯಲ್ಲಿ ಇಟ್ಟುಕೊಂಡು ಬೊಮ್ಮಾಯಿ ಅವರು ಕರ್ನಾಟಕ ಬಜೆಟ್‌ ಮಂಡಿಸಲಿದ್ದಾರೆ. ಈ ಮೂಲಕ ಮತಗಳನ್ನು ಸೆಳೆಯುವ ಯತ್ನವನ್ನು ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ರಾಜ್ಯದ ವಿವಿಧ ಜಾತಿಗಳು, ಪ್ರಮುಖವಾಗಿ ಎಸಿ/ಎಸ್‌ಟಿ ಸಮುದಾಯಗಳು, ಮಧ್ಯಮ ವರ್ಗದವರು, ನಗರವಾಸಿಗಳು ತಳ ಸಮುದಾಯಗಳು, ರೈತರು, ಮಹಿಳೆಯರು, ಸರ್ಕಾರಿ ನೌಕರರು, ಕೂಲಿ-ಕಾರ್ಮಿಕರನ್ನು ಕೇಂದ್ರಿಕರಿಸಿಕೊಂಡು ಬಜೆಟ್‌ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

ಎಸ್ಸಿ/ಎಸ್ಟಿಗಳಿಗೆ ಮೀಸಲಾತಿ ಸೇರಿದಂತೆ ಜಾತಿ ಆಧರಿತ ಬಜೆಟ್‌ ಅನ್ನು ಮಂಡಿಸುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಯಾರಿ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಸರ್ಕಾರಿ ಉದ್ಯೋಗಿಗಳ ವೇತನ ಪರಿಷ್ಕರಣೆಗೆ ರಚಿಸಲಾಗಿರುವ ಏಳನೇ ವೇತನ ಆಯೋಗದ ಅನುಷ್ಠಾನದ ಘೋಷಣೆ ಮಾಡಬಹುದು ಎಂದು ನೌಕರರು ಅಂದುಕೊಂಡಿದ್ದಾರೆ. ಈ ಬಗ್ಗೆ ಹಲವು ತಿಂಗಳುಗಳಿಂದ ಕಾತರದಿಂದ ಕಾಯುತ್ತಿದ್ದಾರೆ ಎನ್ನಲಾಗಿದೆ. ಏಳನೇ ಮೀಸಲಾತಿ ಆಯೋಗದ ವರದಿ ಸಲ್ಲಿಕೆಯಾದ ಬಳಿಕ ಸರ್ಕಾರಿ ನೌಕರರಿಗಾಗಿಯೇ ಹತ್ತು ಸಾವಿರ ಕೋಟಿ ರೂಪಾಯಿ ಘೋಷಿಸಬಹುದು ಎಂದು ತಿಳಿದುಬಂದಿದೆ.

Karnataka Budget 2023: ₹ 5 lakh loan for farmers, monthly money for women, 7th Pay Commission?

ಇದು ಬೊಮ್ಮಾಯಿ ಅವರ ಕೊನೆಯ ಬಜೆಟ್‌ ಆಗಿರುವುದರಿಂದ ಜಾತಿವಾರು ಲೆಕ್ಕಾಚಾರಗಳನ್ನು ಇಟ್ಟುಕೊಂಡು ಬೊಮ್ಮಾಯಿ ಬಜೆಟ್‌ ಮಂಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಮೇದಾರ, ಅಕ್ಕಸಾಲಿಗ, ಗಾಣಿಗ, ಮಡಿವಾಳ, ಕುಂಬಾರ, ಹೂಗಾರ, ಚಮ್ಮಾರ, ಕಂಬಾರ ಸೇರಿದಂತೆ ಹಲವು ಸಣ್ಣ ಪುಟ್ಟು ಸಮುದಾಯಗಳಿವೆ ಪ್ರತ್ಯೇಕ ನಿಗಮಗಳನ್ನು ರಚಿಸಬಹುದು ಎಂದು ಊಹಿಸಲಾಗಿದೆ. ಸಂಪ್ರದಾಯಿಗ ವೃತ್ತಿಯಲ್ಲಿ ಇರುವವರಿಗೆ ಪ್ರೋತ್ಸಾಹ ಧನ ನೀಡಲು ಬೊಮ್ಮಾಯಿ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಕೃಷಿ ಪ್ರಧಾನವಾದ ಸಮುದಾಯಕ್ಕೆ ಈ ಬಜೆಟ್‌ನಲ್ಲಿ ಭಾರೀ ಕೊಡುಗೆ ನೀಡುವ ಸಾಧ್ಯತೆ ಇದೆ. ಬಿಎಸ್‌ ಯಡಿಯೂರಪ್ಪ ಅವಧಿಯಲ್ಲಿ ರೈತರನ್ನು ಗುರಿಯಾಗಿಸಿ ಬಜೆಟ್‌ ಮಂಡಿಸಲಾಗಿತ್ತು. ರೈತರು ಎಲ್ಲ ಪಕ್ಷಗಳಿಗೂ ವೋಟ್‌ ಬ್ಯಾಂಕ್‌ ಎಂದೇ ಹೇಳಲಾಗುತ್ತಿದೆ. ಹೀಗಾಗಿ, ಬಸವರಾಜ ಬೊಮ್ಮಾಯಿ ಅವರು ರೈತಸ್ನೇಹಿ ಬಜೆಟ್‌ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈಗ ರೈತರಿಗೆ ₹ 3 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಇದನ್ನು ₹ 5 ಲಕ್ಷಕ್ಕೆ ಏರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮಹಿಳೆಯರನ್ನು ಸೆಳೆಯಲು ಪ್ರತಿಕುಟುಂಬದ ಮಹಿಳೆಯಗೆ ₹1,500 ಪ್ರೋತ್ಸಾಹ ಧನ ನೀಡುವ ಗೃಹಿಣಿ ಶಕ್ತ ಯೋಜನೆ ಘೋಷಿಸುವ ಸಂಭವವಿದೆ.

ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿರೆ, ಉಚಿತ ವಿದ್ಯುತ್‌ ಹಾಗೂ ಮಹಿಳೆಯರಿಗೆ ಪ್ರೋತ್ಸಾಹಧನ ನೀಡುವ ಕುರಿತು ಕಾಂಗ್ರೆಸ್‌ ಘೋಷಣೆ ಮಾಡಿದೆ. ಇದಕ್ಕೆ ಕೌಂಟರ್ ಕೊಡಲು ಬೊಮ್ಮಾಯಿ ಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+