Karnataka Budget 2023: ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಂಚಿಕೆ ಹೆಚ್ಚಳ ಸಾಧ್ಯತೆ
ಬೆಂಗಳೂರು, ಜಲೈ 05: ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ ಮತ್ತು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಮುದಾಯಗಳಿಗೆ ತಾರತಮ್ಯ ಮಾಡಿದ್ದಾರೆ ಎಂದು ಹಾಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈ ಕಾರಣದಿಂದಲೇ ಜುಲೈ 07 ರಂದು ನಡೆಯಲಿರುವ 'ಕರ್ನಾಟಕ ಆಯವ್ಯಯ 2023-24' (Karnataka Budget 2023-24) ಮಂಡಿಸುವಾಗ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಿಗಾಗಿ ಅನುದಾನ ಹೆಚ್ಚಿಸುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎನ್ನಲಾಗುವು ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಜೈನರು ಹಾಗೂ ಪಾರ್ಸಿ ಸಮುದಾಯದವರು ಸುಮಾರು ಒಂದು ಕೋಟಿಯಷ್ಟಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 16 ರಷ್ಟು ಅಲ್ಪಸಂಖ್ಯಾತರಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಸರ್ಕಾರವೇ ಅಧಿಕಾರದಲ್ಲಿದ್ದ 2017-18ರ ಸಂದರ್ಭದಲ್ಲಿ ಅಂದಿನ ಬಜೆಟ್‌ನಲ್ಲಿ ಈ ಸಮುದಾಯಗಳ ಅಭಿವೃದ್ಧಿಗೆಂದು ಬರೊಬ್ಬರಿ 2,145 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ತದನಂತರ ಅಧಿಕಾರಕ್ಕೆ ಬಂದು ಮೂರು ವರ್ಷ ಆಡಳಿತ ನೀಡಿದ ಬಿಜೆಪಿ ಸರ್ಕಾರದ ಬಸವರಾಜ ಬೊಮ್ಮಾಯಿ ಅವರು ಕಳೆದ ಬಾರಿ (2022-23) ಆಯವ್ಯಯದಲ್ಲಿ ಈ ಅನುದಾನವನ್ನು 1,429 ಕೋಟಿ ಇಳಿಸಿದ್ದರು.
ಇದೀಗ ಮತ್ತೆ ರಾಜ್ಯದ ಅಧಿಕಾರ ಚುಕ್ಕಾಣೆ ಹಿಡಿದಿರುವ ಕಾಂಗ್ರಸ್ ಮತ್ತು ಸಿಎಂ ಸಿದ್ದರಾಮಯ್ಯ ಅವರು 2023-24ರ ಬಜೆಟ್ ಅನ್ನು ಇದೇ ಶುಕ್ರವಾರ ಜುಲೈ 7ರಂದು ಮಂಡಿಸಲಿದ್ದಾರೆ.

ಅಲ್ಪಸಂಖ್ಯಾತರಿಗೆ ಹಂಚಿಕೆ ಹೆಚ್ಚಿಸಬೇಕಿದೆ
ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಮುಖ್ಯ ಸಚೇತಕ ಸಲೀಂ ಅಹಮದ್ ಅವರು, ಸಮುದಾಯದ ಮುಖಂಡರು ಮತ್ತು ತಜ್ಞರು ಸಲಹೆ ಪ್ರಕಾರ ಈ ಸಮುದಾಯಗಳ ಅಭಿವೃದ್ಧಿಗೆ ಅನುದಾನ ಪ್ರಮಾಣ ಹೆಚ್ಚಿಸಬೇಕಿದೆ. ಈ ಮೂಲಕ ಮುಸ್ಲಿಮರು ಇತರರಂತೆ ಸಮಾನವಾಗಿ ಪ್ರಗತಿ ಸಾಧಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಮೇಲೆ ವಿಶೇಷ ಗಮನವವಹಿಸಬೇಕು. ಮುಸ್ಲಿಮರು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಹಿಂದಿದ್ದ ಬಿಜೆಪಿ ಅಧಿಕಾರಾವಧಿಯಲ್ಲಿ 'ಅಲ್ಪಸಂಖ್ಯಾತರ ನಿರ್ದೇಶನಾಲಯ/ಇಲಾಖೆಯ ಕಾರ್ಯಚಟುವಟಿಕೆಯಲ್ಲಿ ತಾಂತ್ರಿಕ ಸುಧಾರಣೆಗಳನ್ನು ಕಂಡಿದೆ ಎಂಬುದನ್ನು ಹಲವರು ಒಪ್ಪಿದ್ದಾರೆ. ಆದರೆ ಜವಾಬ್ದಾರಿಯ ಕೊರತೆಯಿಂದ ಯೋಜನೆಗಳು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಜನರನ್ನು ತಲುಪಲಿಲ್ಲ ಎಂದು ಮೇಜರ್ ಪಿ ಮಣಿವಣ್ಣನ್ ಹೇಳಿದರು.
2021ರ ಆಗಸ್ಟ್ ತಿಂಗಳಲ್ಲಿ ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಛೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪನೆ ಆಯಿತು. ಇದು ಕುಂದುಕೊರತೆಗಳಿಗೆ ಪರಿಹಾರ, ದೃಢ ಮಾಹಿತಿ ಸಂಗ್ರಹ, ಪ್ರಸರಣ ಖಚಿತತೆ ಅನುಕೂಲವಾಯಿತು. ನಿರ್ದೇಶನಾಲಯದ ಯೋಜನೆ, ಕಾರ್ಯಕ್ರಮಗಳ ತಂತ್ರಜ್ಞಾನ ಸಹಿತಿವಾಗಿ ಪಾರದರ್ಶಕವಾಗಿ ತಲುಪಿಸಲು 24 ಗಂಟೆಯ ಸಹಾಯವಾಣಿ ಆರಂಭವಾಯಿತು.
ನಿಯಂತ್ರಣ ಕೊಠಡಿಯ ಪ್ರಯೋಜನ, ಕಾರ್ಯವೈಖರಿ
ಇದರಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಿದೆ. ಮುಖ್ಯವಾಗಿ ಸಹಾಯವಾಣಿಯಿಂದಾ ಸಾರ್ವಜನಿಕ ಸಹಭಾಗಿತ್ವ ದೊರೆತಂತಾಗಿದೆ. ಇಲಾಖೆಯು ಇದುವರೆಗೆ 1.4 ಲಕ್ಷ ಕರೆಗಳನ್ನು ಸ್ವೀಕರಿಸಿದೆ. ಶೇಕಡಾ 92ರಷ್ಟಕ್ಕೆ ಪರಿಹಾರ ಕಲ್ಪಿಸಿದೆ ಎಂದು ನಿಯಂತ್ರಣ ಕೊಠಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲೂ ಸಹ ಪ್ರತಿ 31 ಜಿಲ್ಲಾ ಕಚೇರಿಗಳು ಮತ್ತು 75 ತಾಲೂಕು ಮಾಹಿತಿ ಕೇಂದ್ರಗಳು ಸಕ್ರಿಯವಾಗಿದ್ದುಕೊಂಡು ಕಾರ್ಯ ನಿರ್ವಹಿಸಿವೆ.
ಸರ್ಕಾರ ಅಲ್ಪಸಂಖ್ಯಾತರ ಕುರಿತು ಹೊರಡಿಸುವ ಸುತ್ತೋಲೆ, ಕಾರ್ಯಕ್ರಮ, ಯೋಜನೆ ಹಾಗೂ ಇನ್ನಿತರ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿ ಪ್ರಸಾರ ಮಾಡಲು ಎಲ್ಲಾ ಸಮುದಾಯಗಳು ಮತ್ತು ಎನ್‌ಜಿಒಗಳ ಪ್ರಮುಖ ಪ್ರತಿನಿಧಿಗಳನ್ನು ಒಳಗೊಂಡ ಸಲಹಾ ಸಮಿತಿಯನ್ನು ಸಹ ರಚಿಸಿದೆ. ಈ ಸಭೆಯಗಳಲ್ಲಿ ಸಲಹೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆಯೆ ಈ ನಿರ್ದೇಶನಾಲಯ ಮೌಲಾನಾ ಆಜಾದ್ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಡ್ಯಾಶ್‌ಬೋರ್ಡ್ ನಿರ್ಮಿಸಿದೆ. ಅದರಲ್ಲಿ ದಾಖಲಾತಿ, ಖಾಲಿ ಇರುವ ಹುದ್ದೆಗಳ ಮಾಹಿತಿ, ಶಾಲಾ ಮೂಲಸೌಕರ್ಯ ಹಾಗೂ ಪಠ್ಯಕ್ರಮದ ವಿವರ ಹಾಗೂ ಇನ್ನಿತರ ಅಗತ್ಯ ಮಾಹಿತಿ ಒದಗಿಸುವ ಕೆಲಸವಾಗುತ್ತಿದೆ.












Click it and Unblock the Notifications