Waqf Controversy: ನ.4ರಂದು ವಕ್ಫ್ ಬೋರ್ಡ್ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಬೃಹತ್ ಪ್ರತಿಭಟನೆ

ಬೆಂಗಳೂರು, ನವೆಂಬರ್ 03: ತನಿಖೆ ನಡೆಯುತ್ತಿರುವ ಮುಡಾ ಹಗರಣ ಬಳಿಕ ರಾಜ್ಯಾದ್ಯಂತ ವಕ್ಫ್ ಬೋರ್ಡ್‌ನಿಂದ ರೈತರು, ಮಠ, ಗೋಮಾಳ, ರೈತರ ಜಮೀನು ಸೇರಿದಂತೆ ಹಿಂದೂಗಳ ಜಮೀನನ್ನು ಕಬಳಿಕೆ ಮಾಡುತ್ತಿದೆ ಎಂಬ ವಿವಾದ ತಲೆಎತ್ತಿದೆ. ಇದರ ವಿರುದ್ಧ ಆರೋಪಿಸಿರುತ್ತಿರುವ ಕರ್ನಾಟಕ ರಾಜ್ಯ ಬಿಜೆಪಿಯು ರಾಜ್ಯಾದ್ಯಂತ ನವೆಂಬರ್ 4ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಉಪ ಚುನಾವಣೆ ಹೊತ್ತಿನಲ್ಲಿ ಹಿಂದೂಗಳ ಜಮೀನು ವಕ್ಫ್ ಕಬಳಿಸುತ್ತಿದೆ ಎಂಬ ವಿಚಾರ ಭುಗೆಲೆಳುತ್ತಲೇ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನೀಡಿರುವ ನೋಟಿಸ್ ವಾಪಾಸ್ ಪಡೆಯುವಂತೆ ಆದೇಶಿಸಿದ್ದಾರೆ. ಇದೆಲ್ಲವು ರಾಜಕೀಯ ಬೂಟಾಟಿಕೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

Karnataka BJP Protest against Waqf Land Grabbing in Across Karnataka on November 4th

ಬೆಳಗಾವಿ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಜಿಲ್ಲೆಗಳು, ತಾಲೂಕುಗಳಲ್ಲಿ ರೈತರು, ಮಠ ಮಾನ್ಯಗಳು, ಬಡವರ ಜಾಗಗಳ ಪಹಣಿಯಲ್ಲಿ ವಕ್ಫ್ ಎಂದು ಉಲ್ಲೇಖಿಸಲಾಗಿದೆ. ಸದ್ದೆ ಮಾಡದೇ ರಾಜ್ಯ ಸರ್ಕಾರ ವಕ್ಫ್ ಜೊತೆ ಕೂಡಿಸಿಕೊಂಡು ಅಧಿಕಾರದಾಸೆಗೆ ಜನರ ಭೂಮಿ ಕಬಳಿಸುತ್ತಿದೆ ಎಂದು ವಿಪಕ್ಷಗಳ ನಾಯಕರು ದೂರಿದ್ದಾರೆ. ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆಗಾಗಿ ರೈತರ, ಜನಸಾಮಾನ್ಯರ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ವರ್ಗಾವಣೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ಹುನ್ನಾರದ ವಿರುದ್ಧ ನವೆಂಬರ್‌ 4ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರದ ಮತೀಯ ಓಲೈಕೆಯ ರಾಜಕಾರಣದ ವಿರುದ್ಧ ಪ್ರತಿಭಟಿಸೋಣ ಎಂದು ರಾಜ್ಯ ಬಿಜೆಪಿಯು ಕರೆ ಕೊಟ್ಟಿದೆ.

ರಾಜ್ಯಾದ್ಯಂತ ವಕ್ಫ್ ಬೋರ್ಡ್ ಕಂದಾಯ ಇಲಾಖೆಯ ನಿಯಮ ಮೀರಿ ಕಂಡ ಕಂಡ ಜಾಗಗಳು/ಆಸ್ತಿಗಳು ತಮ್ಮವೆಂದು ಅಕ್ರಮವಾಗಿ ಮಾಡಿಕೊಳ್ಳಲು ಮುಂದಾಗಿದೆ. ಸರ್ಕಾರ ಮುಸ್ಲಿಮರ ಓಲೈಕೆ ಮಾಡಲು ಮೌನ ವಹಿಸಿದೆ. ಸರ್ಕಾರಕ್ಕೆ ರೈತರು, ಜನರ ಹಿತಕ್ಕಿಂತ ತುಷ್ಠೀಕರಣ ರಾಜಕಾರಣವ ಮುಖ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆಯುವಂತೆ ಸೂಚಿಸಬೇಕು ಎಂದು ಮಾಜಿ ಸಿಎಂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದ್ದರು. ಎಲ್ಲ ಕಡೆಗಳಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ರೈತರಿಗೆ ನೀಡಿದ್ದ ಆದೇಶ ಹಿಂಪಡೆಯುವಂತೆ ತಿಳಿಸಿದೆ. ಇತ್ತ ಸಚಿವರಾದ ಜಮೀರ್ ಅಹ್ಮದ್ ಖಾನ್, ಎಂಬಿ ಪಾಟೀಲ್ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ವಿಜಯಪುರದಲ್ಲಿ 11 ಎಕರೆ ಮಾತ್ರವೇ ವಕ್ಫ್ ಆಸ್ತಿಯಾಗಿದೆ. ಉಳಿದೆಲ್ಲವು ಆಯಾ ಮಾಲೀಕರದ್ದೆ, ನಾವು ಯಾರಿಗೂ ನೋಟಿಸ್ ನೀಡಿಲ್ಲ ಎಂದು ಸಬೂಬು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+