Narendra Modi PM Swearing: ನರೇಂದ್ರ ಮೋದಿಗೆ ಬಿ.ವೈ ವಿಜಯೇಂದ್ರ ಸ್ಪೆಷಲ್ ವಿಶ್
ಬೆಂಗಳೂರು, ಜೂನ್ 09: ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಭಾರತದ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಕೋಟ್ಯಂತರ ಭಾರತೀಯ ಸಾಕ್ಷಿಯಾಗಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ನರೇಂದ್ರ ಮೋದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಸ್ವಾತಂತ್ರ್ಯಾ ನಂತರ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಚಾರಿತ್ರಿಕ ಪ್ರಧಾನಿ ನಮ್ಮ ನೆಚ್ಚಿನ ನರೇಂದ್ರ ಮೋದಿ ಅವರು ಭಾರತದ ಹೆಮ್ಮೆ.

18ನೇ ಲೋಕಸಭೆಗೆ ನಡೆದ ಮಹಾ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟದ ಯಶಸ್ವಿ ನಾಯಕರಾಗಿ, ದಶಕ ಪೂರೈಸಿದ ಸಮರ್ಥ ಪ್ರಧಾನಿಯಾಗಿ. ತಮ್ಮ ಅಭಿವೃದ್ಧಿ ಕಾರ್ಯಗಳಿಂದ ಶತಕೋಟಿ ಭಾರತೀಯರು ಮೆಚ್ಚಿದ ನೇತಾರರಾಗಿ 3ನೇ ಬಾರಿ ಪ್ರಧಾನಿ ಪಟ್ಟಕ್ಕೇರುತ್ತಿರುವ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರನ್ನು ಕರುನಾಡಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಕರ್ನಾಟಕದ ಬಿಜೆಪಿ ಅಭಿನಂದಿಸುತ್ತದೆ.
ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಎನ್.ಡಿ.ಎ ಮೈತ್ರಿ ಕೂಟಕ್ಕೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಕೊಟ್ಟಿರುವ ಕರ್ನಾಟಕದ ಜನತೆ ಮೋದಿ ಅವರ ಹ್ಯಾಟ್ರಿಕ್ ಸಾಧನೆಯ ಸಡಗರದಲ್ಲಿ ಬಹುದೊಡ್ಡ ಭಾಗೀದಾರರಾಗಿದ್ದು ಜಾಗತಿಕ ಮಟ್ಟದಲ್ಲಿ ಮೋದಿ ಜೀ ಅವರ ನೇತೃತ್ವದಲ್ಲಿ ಮುಂಚೂಣಿ ಸ್ಥಾನದಲ್ಲಿ ನಡೆದಿರುವ ಭಾರತದ ಅಭಿವೃದ್ಧಿಯು ಉತ್ತುಂಗಕ್ಕೆ ತಲುಪಬೇಕೆಂದು ಬಯಸಿ ಆಶೀರ್ವದಿಸಿದ್ದಾರೆ. ಅಂತೆಯೇ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆಗಳನ್ನು ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದಿಂದ ನಿರೀಕ್ಷಿಸಿದ್ದಾರೆ.
ಅಚಲ ವಿಶ್ವಾಸದ ಸಂಕೇತವಾಗಿರುವ ಮೋದಿ ಜೀ ಅವರ ಆಡಳಿತದಲ್ಲಿ ಕನ್ನಡನಾಡು ಸಮೃದ್ಧವಾಗಿ ಬೆಳೆಯಲಿದೆ, ನಿರೀಕ್ಷೆ ಮೀರಿ ಕೊಡುಗೆಗಳನ್ನು ಪಡೆಯಲಿದೆ ಎಂಬ ನಿಶ್ಚಲ ನಂಬಿಕೆ ನಮ್ಮದಾಗಿದೆ. ರಾಜ್ಯದ ಜನತೆಯ ಆಶೀರ್ವಾದದ ಬೆಂಬಲ ಮೋದಿ ಜೀ ಅವರ ಅಭಿವೃದ್ಧಿ ಕಾರ್ಯಗಳಿಗೆ ಶ್ರೀರಕ್ಷೆಯಾಗಲಿ ಹಾಗೂ ಸುಭದ್ರ ಭಾರತ ಕಟ್ಟುವ ಅವರ ಯೋಜನೆಗಳಿಗೆ ಬೆನ್ನೆಲುಬಾಗಲಿ ಎಂಬ ಹಾರೈಕೆಯೊಂದಿಗೆ ಮಾನ್ಯ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಅಭಿಂದಿಸೋಣ ಎಂದು ಬಿ.ವೈ ವಿಜಯೇಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications