ಸಿದ್ದರಾಮಯ್ಯಗೆ ಸದಾಕಾಲ ಗೊತ್ತಿರುವುದು ಪಿಎಫ್‌ಐ ಮತಾಂಧರ ಓಲೈಕೆ ಮಾತ್ರ!
ಬೆಂಗಳೂರು, ಅಕ್ಟೋಬರ್ 26: ಜಾಣ ಕಿವುಡು, ಜಾಣ ನಿದ್ದೆ ಹಾಗೂ ಜಾಣ ಮೌನಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸದಾಕಾಲ ಗೊತ್ತಿರುವುದು ಪಿಎಫ್‌ಐ ಮತಾಂಧರ ಓಲೈಕೆ ಮಾತ್ರ ಎಂದು ರಾಜ್ಯ ಬಿಜೆಪಿ ಕುಟುಕಿದೆ.
ಗುಪ್ತಚರ ಇಲಾಖೆಯನ್ನೇ ತಮ್ಮ ಬಳಿ ಇಟ್ಟುಕೊಂಡಿದ್ದರೂ, ಇಡೀ ಜಗತ್ತೇ ಮಾತನಾಡುವ ವಿಚಾರಗಳು ನಮ್ಮ ಗೌರವಾನ್ವಿತ ಮುಖ್ಯಮಂತ್ರಿ @siddaramaiah ಅವರಿಗೆ ಗೊತ್ತೇ ಇರುವುದಿಲ್ಲ. ಹಾಗೆಯೇ ಅವರಿಗೆ ಗೊತ್ತೇ ಇರದ ಇನ್ನಿತರ ವಿಚಾರಗಳು:
— BJP Karnataka (@BJP4Karnataka) October 26, 2023
✔️ ಬೆಂಗಳೂರು ವ್ಯಾಪ್ತಿಗೆ ಡಿ. ಕೆ. ಶಿವಕುಮಾರ್ ಕನಕಪುರ ಸೇರಿಸುತ್ತಿರುವುದು..!
✔️ "ಲಕ್ಷ್ಮಿ" ವಿಚಾರವಾಗಿ…
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ಗುಪ್ತಚರ ಇಲಾಖೆಯನ್ನೇ ತಮ್ಮ ಬಳಿ ಇಟ್ಟುಕೊಂಡಿದ್ದರೂ, ಇಡೀ ಜಗತ್ತೇ ಮಾತನಾಡುವ ವಿಚಾರಗಳು ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತೇ ಇರುವುದಿಲ್ಲ. ಹಾಗೆಯೇ ಅವರಿಗೆ ಗೊತ್ತೇ ಇರದ ಇನ್ನಿತರ ವಿಚಾರಗಳನ್ನ ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದಾರೆ.

- ಬೆಂಗಳೂರು ವ್ಯಾಪ್ತಿಗೆ ಡಿ. ಕೆ. ಶಿವಕುಮಾರ್ ಕನಕಪುರ ಸೇರಿಸುತ್ತಿರುವುದು..!
- "ಲಕ್ಷ್ಮಿ" ವಿಚಾರವಾಗಿ ಕಾಂಗ್ರೆಸ್ ಮೂರು ಬಾಗಿಲು ಆಗಿರುವುದು..!
- ಇಂದಿಗೂ ಸ್ಟ್ಯಾಲಿನ್ ನಾಡಿಗೆ ಕಾವೇರಿ ನೀರು ಹರಿಯುತ್ತಿರುವುದು..!
- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ಸೃಷ್ಟಿಯಾಗಿರುವುದು..!
- ಶ್ಯಾಡೋ ಸಿಎಂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು..!
- ಪಂಚ ರಾಜ್ಯ ಚುನಾವಣೆಗೆ #ATMSarkara ಹಣ ಕಳುಹಿಸುತ್ತಿರುವುದು..!
ಸಂಪದ್ಭರಿತವಾಗಿದ್ದ ಕರ್ನಾಟಕವನ್ನು ಭರಪೂರವಾಗಿ ಲೂಟಿ ಹೊಡೆಯಲೆಂದೇ ರಾಜ್ಯದ ಜನತೆಯ ಕಿವಿ ಮೇಲೆ ಕಲರ್ ಕಲರ್ ಹೂವಿಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆ ಒಂದು ಹಗಲು ದರೋಡೆ!! ಇದು ಈಗಾಗಲೇ "ಬ್ರ್ಯಾಂಡ್" ಆಗಿರುವ ಬೆಂಗಳೂರನ್ನು "ಬ್ಯಾಡ್ ಬೆಂಗಳೂರು" ಮಾಡುವ ಕುತಂತ್ರ ಎಂದು ಬಿಜೆಪಿ ಕಿಡಿಕಾರಿದೆ.
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರಿನಾದ್ಯಂತ ಪಿಕ್‌ನಿಕ್ ಮಾಡುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಬೆಂಗಳೂರಿನ ಬ್ರ್ಯಾಂಡ್ ಕುಗ್ಗಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆಯೇ ಹೊರತು, ಅವರ ಬ್ರ್ಯಾಂಡ್ ಬೆಂಗಳೂರು ಯೋಜನೆಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿಗರಿಗೆ ನಯಾಪೈಸೆ ಲಾಭವಿಲ್ಲ, ಬದಲಿಗೆ ನಷ್ಟವೇ ಅಧಿಕ. ಅಸಲಿಗೆ ಬ್ರ್ಯಾಂಡ್ ಬೆಂಗಳೂರಿಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಘೋಷಿಸುತ್ತಿರುವ ಯೋಜನೆಗಳೆಲ್ಲವೂ ನಗರವನ್ನು ಬೇಕಾಬಿಟ್ಟಿಯಾಗಿ ಲೂಟಿ ಮಾಡುವ ಯೋಜನೆಗಳಾಗಿವೆ. ಆ ಎಲ್ಲಾ ಯೋಜನೆಗಳು ಕಾರ್ಯಗತವಾದರೆ ಅದರ ಲಾಭಾರ್ಥಿಗಳು ಕೇವಲ ಡಿ. ಕೆ. ಶಿವಕುಮಾರ್ ಮತ್ತವರ ಪಟಾಲಂ.
ಡಿ. ಕೆ. ಶಿವಕುಮಾರ್ ಅವರು ಈ ಐದು ತಿಂಗಳಲ್ಲಿ ಪಟಾಲಂ ಕಟ್ಟಿಕೊಂಡು ನಗರವನ್ನು ಐದಾರು ಬಾರಿ ತಿರುಗಿದ್ದಾರೆಯೇ ಹೊರತು, ಇದುವರೆಗೂ ನಗರದ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲು ಸಾಧ್ಯವಾಗಿಲ್ಲ. ಇದು ಡಿ. ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಯಾವುದೇ ಪ್ರಾಮಾಣಿಕ ಕಾಳಜಿ ಇಲ್ಲ ಎಂಬುದರ ಸೂಚಕ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.












Click it and Unblock the Notifications