ಕರ್ನಾಟಕದಲ್ಲಿ ಮೈತ್ರಿಯಿಂದ ಜೆಡಿಎಸ್‌ಗೆ ಲಾಭ, ಬಿಜೆಪಿಗೆ ನಷ್ಟ- ಏಕೆಂದು ಗೊತ್ತಾ? ವಿವರ, ವಿಶ್ಲೇಷಣೆ

ಬೆಂಗಳೂರು, ಸೆಪ್ಟೆಂಬರ್‌ 09: 2019 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ಜಯಭೇರಿ ಭಾರಿಸಿತ್ತು. ಕರ್ನಾಟಕದ 28 ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗೆದ್ದು ಜಯದ ನಗೆ ಬೀರಿತ್ತು. ಶೇಕಡಾ 52 ರಷ್ಟು ಮತಗಳನ್ನು ಗಳಿಸುವ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಗೆ ಬಿಜೆಪಿ ಹೊಡೆತ ನೀಡಿತ್ತು. ಆದರೆ, ಬದಲಾದ ಸಮಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಕುರಿತ ಮಾತುಗಳು ಮುನ್ನೆಲೆಗೆ ಬಂದಿವೆ. ಇದು ಯಾರಿಗೆ ಲಾಭವಾಗಲಿದೆ, ನಷ್ಟವಾಗಲಿದೆ ಎಂಬುದರ ಕುರಿತು ಈಗ ಚರ್ಚೆ ಹುಟ್ಟಿಕೊಂಡಿದೆ.

2014 ರಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಸ್ವತಂತ್ರವಾಗಿ ಹೋರಾಟ ನಡೆಸಿದ್ದವು. ಕಾಂಗ್ರೆಸ್ ಶೇ 41, ಜೆಡಿಎಸ್ ಶೇ 9 ಹಾಗೂ ಬಿಜೆಪಿ ಶೇ 45 ಮತಗಳನ್ನು ಗಳಿಸಿದ್ದವು. ಈ ಬಾರಿ ಅಂದರೆ 2024 ರ ಲೋಕಸಭೆ ಚುನಾವಣೆ ಯಾವ ಹಾದಿಯಲ್ಲಿ ಸಾಗಲಿದೆ ಎಂಬುದೀಗ ಕುತೂಹಲ ಮೂಡಿಸಿದೆ.

Karnataka: BJP-JDS alliance on, but vote transfer may not be simple- Do you know why?

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡರೆ ಒಕ್ಕಲಿಗ ಹಾಗೂ ಲಿಂಗಾಯತ ಮತಗಳನ್ನು ಕ್ರೋಡಿಕರಿಸಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಈ ಎರಡು ದೊಡ್ಡ ಜಾತಿಗಳು ಒಂಗಾಗಿ ಮತ ಚಲಾಯಿಸಿದರೆ, ಶೇ 50 ಮತಗಳ ಪಾಲನ್ನು ಹೊಂದಬಹುದು. ಇದು ಸೋತು ಬಳಲುತ್ತಿರುವ ಜೆಡಿಎಸ್‌ ಪಾಲಿಗೆ ವರವಾಗಿ ಪರಿಣಮಿಸಬಹುದು ಎಂದು ತಜ್ಞರು ಹೇಳಿದ್ದಾರೆ.

ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಜೊತೆಗಿರುವ ಲಿಂಗಾಯತರು ಕಾಂಗ್ರೆಸ್ ಕಡೆಗೆ ಮುಖಮಾಡಬಹುದು. ಇದು ಬಿಜೆಪಿಗೆ ಮತ್ತಷ್ಟು ಹಿನ್ನೆಡೆಯನ್ನು ಉಂಟು ಮಾಡಬಹುದು ಎಂಬ ವಿಶ್ಲೇಷಣೆಗಳು ಹುಟ್ಟಿಕೊಂಡಿವೆ.

ಜೆಡಿಎಸ್‌ ಜೊತೆಗಿನ ಮೈತ್ರಿಯಿಂದ ಬಿಜೆಪಿ ಹೆಚ್ಚು ನಷ್ಟವಾಗಬಹುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ ಜೆಡಿಎಸ್‌ ಒಂದೇ ಸ್ಥಾನವನ್ನು ಹೊಂದಿವೆ. ಈಗ ಮೈತ್ರಿ ಮಾಡಿಕೊಂಡರೆ ಬಿಜೆಪಿಯು ಈಗ ತಾನು ಗೆದ್ದಿರುವ ಸ್ಥಾನಗಳಲ್ಲಿ ಕೆಲವೊಂದಿಷ್ಟು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗುತ್ತಿದೆ. ಕೋಲಾರ, ಮಂಡ್ಯ, ತುಮಕೂರು, ಮೈಸೂರು ಹಾಗೂ ಬೆಂಗಳೂರು ಗ್ರಾಮಂತರದಂತಹ ಲೋಕಸಭಾ ಸೀಟುಗಳ ಮೇಲೆ ಜೆಡಿಎಸ್‌ ಕಣ್ಣಿರಿಸಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಇದು ಬಿಜೆಪಿಗೆ ನಷ್ಟವೆಂದೇ ಹೇಳಬಹುದಾಗಿದೆ.

ಪಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಮತ್ತೆ ಕಣಕ್ಕಿಳಿಸಬಹುದು. ಏತನ್ಮಧ್ಯೆ, ಬಿಎಸ್ ಯಡಿಯೂರಪ್ಪ ಮತ್ತು ಎಚ್‌ಡಿ ದೇವೇಗೌಡರ ಒಗ್ಗೂಡುವಿಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್‌ಗೆ ಕಷ್ಟದ ಸಮಯ ಎಂದು ಕೆಲವು ಒಳಗಿನವರು ಹೇಳಿದ್ದಾರೆ. ಏಕೆಂದರೆ ಯಡಿಯೂರಪ್ಪನವರಿಂದಲೇ ಮೈತ್ರಿ ಏರ್ಪಟ್ಟಂತಿದೆ.

ಮೈತ್ರಿ ಬಹುತೇಕ ಖಚಿತ

ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಬಹುತೇಕ ಖಚಿತವಾಗಿದೆ. ಜೆಡಿಎಸ್ ಶಾಸಕರು ಮತ್ತು ಎಂಎಲ್‌ಸಿಗಳು ಕಾಂಗ್ರೆಸ್‌ನೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂಬುದು ಜೆಡಿಎಸ್‌ ಶಾಸಕರ ಆಶಯವಾಗಿದೆ ಎಂದು ಹಿರಿಯ ನಾಯಕ ಜಿ ಟಿ ದೇವೇಗೌಡ ಶುಕ್ರವಾರ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಹೋರಾಡಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರೂ ಆಗಿರುವ ದೇವೇಗೌಡ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+