Karnataka Bandh: ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ನಿರ್ಧಾರ! ಅಧಿಕೃತ ಘೋಷಣೆ..
ಬೆಂಗಳೂರು, ಫೆಬ್ರವರಿ 28: ಕರ್ನಾಟಕ ರಾಜ್ಯ ಕನ್ನಡಪರ ಸಂಘಟನೆಗಳು ಇಂದು ರಾಜಧಾನಿ ಬೆಂಗಳೂರಿನಲ್ಲಿ ಸಭೆ ಸೇರಿದ್ದು, 'ಅಖಂಡ ಕರ್ನಾಟಕ ಬಂದ್'ಗೆ ನಿರ್ಧರಿಸಿವೆ. 'ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ' ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಎಲ್ಲ ಕನ್ನಡಪರ ನಾಯಕರು, ಕಾರ್ಯಕರ್ತರು ಅಖಂಡ ಕರ್ನಾಟಕ ಬಂದ್‌ಗೆ ಮಾಡಲು ಮುಂದಾಗಿದ್ದಾರೆ. ಸರ್ವ ನಾಯಕರ ಅಭಿಪ್ರಾಯ, ಸಲಹೆ ಸೂಚನೆ ಪಡೆದು ಬಂದ್ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ಅವರು ಇಂದಿನ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕರ್ನಾಟಕ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲೆ ಹಲ್ಲೆ, ಬಸ್‌ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆಯುತ್ತಿದ್ದಾರೆ. ಮರಾಠಿಗರ ಅಟ್ಟಹಾಸ ವಿರೋಧಿ ಹಾಗೂ ಕನ್ನಡಿಗರ ಪರವಾಗಿ, ಕರ್ನಾಟಕದ ಪರವಾಗಿ ಮಹತ್ವದ ನಿರ್ಧಾರ ಕೈಗೊಳ್ಳಲು ಬೆಂಗಳೂರಿನಲ್ಲಿ ಶುಕ್ರವಾರ (ಫೆಬ್ರವರಿ 28) ಸಭೆ ನಡೆಯಿತು. ಒಕ್ಕೋಟದ ಅಧ್ಯಕ್ಷ ಮತ್ತು ಕನ್ನಡ ಪರ ಮುಂಚೂಣಿ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸೇರಿದಂತೆ ವಿವಿಧ ಕನ್ನಡಪರ ನಾಯಕರು ಸಭೆಯಲ್ಲಿ ಚರ್ಚಿಸಿ ಅಖಂಡ ಕರ್ನಾಟಕ ಬಂದ್‌ಗೆ ನಿಧರಿಸಿದ್ದಾರೆ. ಅಧಿಕೃತ ಘೋಷಣೆ ಹೊರ ಬಿದ್ದಿದೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಗಾಗ ಕಾಲುಕೆರೆದು ಜಗಳಕ್ಕೆ ಬರುತ್ತಿರುವ, ಆಗಾಗ್ಗೆ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿರುವವರನ್ನು ಹತ್ತಿಕ್ಕಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಕನ್ನಡಪರ ಸಂಘಟನೆಗಳು ಬಂದ್‌ಗೆ ಮುಂದಾಗಿದೆ ಎಂದು ತಿಳಿದು ಬಂದಿವೆ.
ಎಲ್ಲರನ್ನು ವಿಶ್ವಾಸಕ್ಕೆ ತೆರಗೆದುಕೊಂಡು ಬಂದ್ ಕರೆ
ವಾಟಾಳ್ ನಾಗರಾಜ್ ಅವರು ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕರ್ನಾಟಕ ಬಂದ್ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಈಗಾಗಲೇ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಬಣದವರೊಂದಿಗೆ ಮಾತನಾಡಿದ್ದೇವೆ. ಎಲ್ಲ ಕನ್ನಡಪರ ನಾಯಕರನ್ನು ಅಭಿಪ್ರಾಯ ಪಡೆದು ಬಂದ್ ಮಾಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಕರ್ನಾಟಕ ಬಂದ್ ವಿಚಾರದಲ್ಲಿ ಈ ಹಿಂದೆ ಕೆಲವು ಸಂಘಟನೆಯವರು ಬೆಂಬಲಿಸಿದ್ದರು, ಮತ್ತೆ ಕೆಲವರು ಬೆಂಬಲಿಸಿರಲಿಲ್ಲ. ಹೀಗಾಗಿ ಈ ಬಾರಿ ಅಂತಹ ಪ್ರಸಂಗ ಆಗಲ್ಲ. ಎಲ್ಲರನ್ನು ವಿಶ್ವಾಸ ತೆಗೆದುಕೊಂಡು, ಸಲಹೆ ತೆಗೆದುಕೊಂಡು ಬಂದ್ ಮಾಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ. ಈ ಕರ್ನಾಟಕದ ಬಂದ್‌ಗೆ ಯಾವೆಲ್ಲ ಸಂಘಟನೆಗಳು ಬೆಂಬಲಿಸಿವೆ ಎಂಬ ಮಾಹಿತಿ ಇಲ್ಲಿದೆ.
ಕರವೇ ಪ್ರವೀಣ್ ಶೆಟ್ಟಿ ಬಣ ಬೆಂಬಲ
ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗಾರಜ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಅಖಂಡ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಬೆಂಬಲಿಸಿದೆ. ಈ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. ಮರಾಠಿಗರ ದೌರ್ಜನ್ಯ ಖಂಡಿಸಿರುವ ಅವರು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನೂ ಆಟೋ ರಿಕ್ಷಾ ಯೂನಿಯನ್ ಸಹ ರಾಜ್ಯ ಬಂದ್‌ಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದೆ. ಯೂನಿಯ್ನ ರಾಜ್ಯಾಧ್ಯಕ್ಷರು ನಾವೆಲ್ಲ ಒಂದು. ಕನ್ನಡಿಗರ ತಂಟೆಗೆ ಬಂದಾಗ ಸುಮ್ಮನಿರಬಾರದು ಎಂದು ಕರೆ ನೀಡಿದ್ದಾರೆ. ಇದೇ ರೀತಿ ವಿವಿಧ ಕನ್ನಡಪರ ಸಂಘಟನೆಗಳು, ಕನ್ನಡಪರ ಕಾರ್ಯಕರ್ತರು ಬಂದ್ ಬೆಂಬಲಿಸುವ ನಿರೀಕ್ಷೆ ಇವೆ.
ಇಂದಿನ ಪ್ರಮುಖ ಅಂಶಗಳು
* ಮಾರ್ಚ್ 07ರಂದು ಬೆಳಗಾವಿ ಚಲೋ ಕಾರ್ಯಕ್ರಮ, ಮರಾಠಿ ಪುಂಡಾಟಿಕೆಗೆ ಕೊನೆಗಾಣಿಸಲು ಆಗ್ರಹ
* ಮಾರ್ಚ್ 11ರಂದು ಮೇಕೆದಾಟು ಯೋಜನೆ ಜಾರಿಗೆ ಒತ್ತಯಾಇಸಿ ಅತ್ತಿಬೆಲೆ ಗಡಿ ಬಂದ್.
* ಮಾರ್ಚ್ 16ರಂದು ಹೊಸಕೋಟೆ ಟೋಲ್ ಬಂದ್.
* ಮಾರ್ಚ್ 22ರಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ನಡೆಸಲು ಕನ್ನಡಿಗರ ತೀರ್ಮಾನ.
* ಕನ್ನಡಪರ ಸಂಘಟನೆಗಳಿಂದ ರಾಜ್ಯ ಬಂದ್‌ಗೆ ಹಾಗೂ ವಿವಿಧ ಗಡಿ ಸಮಸ್ಯೆಗಳ ವಿರುದ್ಧ ಬಂದ್, ಪ್ರತಿಭಟೆನಗೆ ಕರೆ.
ಬೆಂಗಳೂರಿನಲ್ಲೂ ಬೃಹತ್ ಪ್ರತಿಭಟನೆ
ಮರಾಠಿ ಪುಂಡಾಟಿಕೆ ಜೊತೆಗೆ ರಾಜ್ಯದ ಜಲ್ವಂತ ಸಮಸ್ಯೆಗಳ ವಿರುದ್ಧ ಕನ್ನಡಿಗರು ಹೋರಾಟದ ರಣಕಹಳೆ ಊದಿದ್ದಾರೆ. ಬಂದ್ ಜೊತೆಗೆ ವಿವಿಧೆಡೆ ಪ್ರತಿಬಟನೆಗೆ ಕರೆ ನೀಡಿದ್ದಾರೆ. ಮೇಕೆದಾಟು ಯೋಜನೆ ಜಾರಿ, ಗಡಿ ಸಮಸ್ಯೆ, ನೆರೆ ರಾಜ್ಯದವರ ಪುಂಡಾಟಿಕೆ ವಿರುದ್ಧ ಕನ್ನಡಿಗರ ಒಟ್ಟಾಗಿದ್ದಾರೆ.
ಕರ್ನಾಟಕ ಬಂದ್ ದಿವಸ ಬೆಂಗಳೂರಿನ ಟೌನ್‌ಹಾಲ್‌ನಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಕನ್ನಡಿಗರು ಮುಂದಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು, ಮೂಲೆ ಮೂಲಗಳಿಂದ ರಾಜ್ಯ ಬಂದ್ ಬೆಂಬಲಿಸಲು ಸಜ್ಜಾಗಿದ್ದಾರೆ.












Click it and Unblock the Notifications