ಕರ್ನಾಟಕ ಬಂದ್: ಮಹದಾಯಿಗಾಗಿ ಟ್ವಿಟ್ಟರಲ್ಲೂ ಆಕ್ರೋಶದ ಕಿಡಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 28: ಬೆಳಗಾವಿಯಲ್ಲಿ ಹುಟ್ಟಿ ಗೋವಾದ ಜೀವನದಿಯಾಗಿರುವ ಮಾಂಡೋವಿ-ಮಹಾದಾಯಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೊಮೆ ಹಿನ್ನಡೆಯಾಗಿದೆ.ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 100 ಟಿಎಂಸಿಯಲ್ಲಿ 7.56 ಟಿಎಂಸಿ ಪಾಲು ಕೇಳಿದ ಕರ್ನಾಟಕದ ವಿರುದ್ಧವಾಗಿ ಮಹಾದಾಯಿ ನ್ಯಾಯಾಧೀಕರಣ ತೀರ್ಪು ನೀಡಿದೆ. ಜನಸಾಮಾನ್ಯರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಟ್ವಿಟ್ಟರ್ ನಲ್ಲಿ ಮಹಾದಾಯಿ ಬಗ್ಗೆ ಟ್ವೀಟ್ ಗಳು ಹರಿದು ಬಂದಿವೆ.

'ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ, ಎನ್ನುವ ನಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಲು ಎಲ್ಲಾ ಪಕ್ಷಗಳು ಕಾರಣ ನಿಮ್ಮ ಒಳ ಜಗಳ ಬಿಟ್ಟು ಜನರಿಗಾಗಿ ಒಮ್ಮೆಯಾದರೂ ಕೆಲಸ ಮಾಡಿ ಎಂದು ಟ್ವೀಟ್ ಮಾಡಿ ಸಲಹೆ ನೀಡಿದ್ದಾರೆ.[ಮಹದಾಯಿ ಯೋಜನೆಗೆ ಚಾಲನೆ ಸಿಕ್ಕಿದ್ದು ಹೇಗೆ?]

ಮಧ್ಯಂತರ ಅರ್ಜಿ ತಿರಸ್ಕಾರವಾದರೇನು ಮೇಲ್ಮನವಿ ಹಾಕಿ ಕಾನೂನು ಹೋರಾಟ ಮುಂದುವರೆಸಿ ಎಂದಿದ್ದಾರೆ. ಇದು ಹುಬ್ಬಳ್ಳಿ-ಧಾರವಾಡಾ, ಗದಗ ಅಥವಾ ಉತ್ತರ ಕರ್ನಾಟಕದ ಜಿಲ್ಲೆಗಳ ಸಮಸ್ಯೆ ಮಾತ್ರವಲ್ಲ, ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಬನ್ನಿ ಹೋರಾಡೋಣ ಎಂದು ಕರೆ ನೀಡಿದ್ದಾರೆ.[ಏನಿದು ಕಳಸಾ-ಬಂಡೂರಿ ಯೋಜನೆ]

ಎಲ್ಲಾ ಸರಿ ಟ್ವೀಟ್, ಫೇಸ್ ಬುಕ್ 'ಡಿಪಿ' ಯಲ್ಲಿ #isupportkalasabanduri ಎಂದು ಹಾಕಿಕೊಂಡರೆ ಏನು ಪ್ರಯೋಜನ ಎಂದು ಪ್ರಶ್ನಿಸಿದವರು ಇದ್ದಾರೆ.[ಕರ್ನಾಟಕದ ಅರ್ಜಿ ತಿರಸ್ಕರಿಸಿದ ಮಹಾದಾಯಿ ನ್ಯಾಯ ಮಂಡಳಿ]

ಒಟ್ಟಾರೆ, ಟ್ವಿಟ್ಟರ್ ನಿಂದ ಬೆಂಗಳೂರು ಸೇರಿ ಹಲವೆಡೆ ಇರುವ ಕನ್ನಡಿಗರಿಗೆ ಮಹಾದಾಯಿ, ಕಳಸಾ ಬಂಡೂರಿ ಬಗ್ಗೆ ಮಾಹಿತಿಯಂತೂ ಸಿಗುತ್ತಿದೆ.

2 ಸಂಸದರನ್ನು ಹೊಂದಿರುವ ಗೋವಾ

2 ಸಂಸದರನ್ನು ಹೊಂದಿರುವ ಗೋವಾ

2 ಸಂಸದರನ್ನು ಹೊಂದಿರುವ ಗೋವಾಕ್ಕೆ ಇಷ್ಟು ಬಲವಿದ್ದರೆ 18 ಸಂಸದರನ್ನು ನೀಡುತ್ತಾ ಬಂದಿರುವ ಕರ್ನಾಟಕಕ್ಕೆ ಎಷ್ಟು ಬಲ ಇರಬೇಕು? ಎಂಬ ಪ್ರಶ್ನೆ ಮೂಡುತ್ತದೆ. ಅದರೆ, ನಮ್ಮ ಸಂಸದರು ಉತ್ತರಿಸುವ ಛಾತಿ ತೋರಿಲ್ಲ.

#mahadayi ಟ್ರೆಂಡಿಂಗ್ ಏಕೆ?

#mahadayi ಟ್ರೆಂಡಿಂಗ್ ಏಕೆ? ಎಲ್ಲಕ್ಕೂ ಟ್ವಿಟ್ಟರ್ ನಲ್ಲಿ ಉತ್ತರವಿದೆ.

ಮಹದಾಯಿ ತೀರ್ಪು ಖಂಡಿಸಿ, ಬಂದ್ ಗೆ ಕರೆ

ಮಹದಾಯಿ ತೀರ್ಪು ಖಂಡಿಸಿ, ಕರ್ನಾಟಕ ಬಂದ್ ಗೆ ಕರೆ

ರಾಜಕೀಯ ಪಕ್ಷಗಳೇ ಕೆಸರೆರೆಚಾಟ ನಿಲ್ಲಿಸಿ

ರಾಜಕೀಯ ಪಕ್ಷಗಳೇ ಕೆಸರೆರೆಚಾಟ ನಿಲ್ಲಿಸಿ, ಒಮ್ಮೆಯಾದರೂ ಜನರಿಗಾಗಿ ಏನಾದರೂ ಮಾಡಿ

ಮಹಾದಾಯಿ ನೀರು ಹಂಚಿಕೆ ತೀರ್ಪಿನ ಬಗ್ಗೆ

ಮಹಾದಾಯಿ ನೀರು ಹಂಚಿಕೆ ತೀರ್ಪಿನ ಬಗ್ಗೆ ಬಿಜೆಪಿ ಕರ್ನಾಟಕ ಹೊರಡಿಸಿದ ಪ್ರಕಟಣೆ

ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ

ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ

ರಾಜಕೀಯ ಪಕ್ಷಗಳ ವಿರುದ್ಧ ಜನರ ಆಕ್ರೋಶ

ರಾಜಕೀಯ ಪಕ್ಷಗಳ ವಿರುದ್ಧ ಜನರ ಆಕ್ರೋಶ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Bandh against Mahadayi Water Tribunal: The sharing of the waters of Mandovi or Mhadei river is a cause of dispute between the governments of Karnataka and Goa. Twitter reaction on Karnataka Bandh July 28, 2016.
Please Wait while comments are loading...