Industry: 20230ರ ವೇಳೆಗೆ ರಾಜ್ಯದಲ್ಲಿ ₹7.50 ಲಕ್ಷ ಕೋಟಿ ಹೂಡಿಕೆ, 2 ಲಕ್ಷ ಉದ್ಯೋಗ ನಿರೀಕ್ಷೆ

ಬೆಂಗಳೂರು, ಜೂನ್ 14: ಕರ್ನಾಟಕ ಸರ್ಕಾರಕ್ಕೆ ಎರಡು ವರ್ಷ ಪೂರ್ಣವಾಗಿದೆ. ಈ ಅವಧಿಯಲ್ಲಿ ಕರ್ನಾಟಕ ಕೈಗಾರಿಕೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಸಾಕಷ್ಟು ಯೋಜನೆ, ಒಪ್ಪಂದ, ಹೂಡಿಕೆಗಳ ಆಕರ್ಷಣೆಗೆ ಶ್ರಮಿಸಿದೆ. ರಾಜ್ಯದಲ್ಲಿ ₹6,57,660 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ 115 ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ 2,32,771 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೈಗಾರಿಕೆ ಹಾಗೂ ಮೂಲಸೌಲಭ್ಯ ಇಲಾಖೆಗಳಲ್ಲಿನ 2 ವರ್ಷಗಳ ಸಾಧನೆ ಕುರಿತ ಪ್ರಗತಿ ಪಥದ ಮುಂದಣ ಹೆಜ್ಜೆ ಕೈಪಿಡಿ ಅನಾವರಣಗೊಳಿಸಿ ಅವರು ಮಾತನಾಡಿದರು. ರ್ನಾಟಕದ ಸಿದ್ಧಪಡಿಸಿರುವ ಹೊಸ ಕೈಗಾರಿಕಾ ನೀತಿ 2025-30-ಯು ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ ₹7.50 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಲಿದೆ. ಒಟ್ಟು 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ.

Karnataka Attracts 6 57 Lakh Crore in Investments Eyes 7 5 Lakh Crore More by 2030

'ದೇಶ ವಿದೇಶಗಳ ಪ್ರಮುಖ ಕೈಗಾರಿಕೆಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಉದ್ಯಮ ದಿಗ್ಗಜರಿಂದ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ರಾಜ್ಯವು ತನ್ನ ಮುಂಚೂಣಿ ಸ್ಥಾನ ಉಳಿಸಿಕೊಂಡಿದೆ. ಫೆಬ್ರುವರಿಯಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ'ದಲ್ಲಿ ಒಟ್ಟು 98 ಕಂಪನಿಗಳ ಜೊತೆಗೆ ₹6,23,970 ಕೋಟಿ ಹೂಡಿಕೆಯ ಒಪ್ಪಂದ ಮಾಡಿಕೊಳ್ಳಲಾಗಿದೆ. ₹ 4,03,533 ಕೋಟಿ ಹೂಡಿಕೆ ಮಾಡಲು 1,101 ಕಂಪನಿಗಳು ವಿವಿಧ ಸಮಿತಿಗಳಿಂದ ಅನುಮೋದನೆ ಪಡೆದಿವೆ. ಈ ಎಲ್ಲ ಯೋಜನೆಗಳಿಂದ ರಾಜ್ಯದಲ್ಲಿ 6 ಲಕ್ಷದಷ್ಟು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆʼ ಎಂದು ವಿವರಿಸಿದರು.

ಪ್ರಾದೇಶಿಕ ಸಮತೋಲನಕ್ಕೆ ಒತ್ತು

ಪ್ರಾದೇಶಿಕ ಸಮತೋಲನದ ಕೈಗಾರಿಕಾ ಅಭಿವೃದ್ಧಿ ಖಚಿತಪಡಿಸಿಕೊಳ್ಳಲು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಇಲಾಖೆಯು ಕಳೆದ ಎರಡು ವರ್ಷಗಳಲ್ಲಿ ಕೈಗಾರಿಕ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆಗಳು/ತಾಲ್ಲೂಕುಗಳಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಉತ್ತೇಜನೆಗಳನ್ನು ನೀಡುತ್ತಿದೆ. ಇದೇ ಕಾರಣಕ್ಕೆ ಉದ್ಯೋಗ ಸೃಷ್ಟಿಯಲ್ಲಿ ಶೇಕಡ 75ರಷ್ಟು ಬೆಂಗಳೂರಿನ ಆಚೆಗೆ ಹಾಗೂ ಶೇ 45 ರಷ್ಟು ಉತ್ತರ ಕರ್ನಾಟಕದ ಭಾಗದಲ್ಲಿ ಇರಲಿವೆ.

Karnataka Attracts 6 57 Lakh Crore in Investments Eyes 7 5 Lakh Crore More by 2030

ಬೆಂಗಳೂರು ಕ್ವಿನ್‌ ಸಿಟಿ / ಸ್ವಿಫ್ಟ್‌ ಸಿಟಿ ಅಭಿವೃದ್ಧಿ

ಬೆಂಗಳೂರು ಬಳಿ ದೊಡ್ಡಬಳ್ಳಾಪುರ-ದಾಬಸ್‌ಪೇಟೆ ರಸ್ತೆಯಲ್ಲಿ ₹40,000 ಕೋಟಿ ಹೂಡಿಕೆಯ ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆಯ 'ಕ್ವಿನ್‌ ಸಿಟಿ'ಯ ಮೊದಲ ಹಂತ ಅಭಿವೃದ್ಧಿಪಡಿಸಲಾಗುತ್ತಿದೆ. 'ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ಹಣಕಾಸು ತಂತ್ರಜ್ಞಾನ ಉದ್ಯಮಗಳಿಗೆ ನೆಲೆ ಕಲ್ಪಿಸಲು ಬೆಂಗಳೂರಿಗೆ ಸಮೀಪದಲ್ಲಿ 1,000 ಎಕರೆ ವಿಸ್ತೀರ್ಣದಲ್ಲಿ 'ಸ್ವಿಫ್ಟ್ ಸಿಟಿ' ನಿರ್ಮಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.

ಮೈಕ್ರೊಸಾಫ್ಟ್ ಸಹಯೋಗದಲ್ಲಿ ಹೂಡಿಕೆದಾರ ಸ್ನೇಹಿ ಏಕಗವಾಕ್ಷಿ ಅಂತರ್ಜಾಲ ತಾಣವನ್ನು ಅಭಿವೃದ್ಧಿಸಲಾಗಿದೆ. 30 ಇಲಾಖೆಗಳ 100ಕ್ಕೂ ಹೆಚ್ಚು ಸೇವೆಗಳನ್ನು ಈ ತಾಣದಲ್ಲಿ ಸುಲಭವಾಗಿ ಪಡೆಯಬಹುದಾಗಿದೆ ಎಂದು ವಿವರಿಸಿದರು.

2 ವರ್ಷಗಳಲ್ಲಿ ಕರ್ನಾಟಕ ಆಕರ್ಷಿಸಿದ ಹೂಡಿಕೆ

* ಫಾಕ್ಸ್‌ಕಾನ್‌: ₹ 22,000 ಕೋಟಿ ಹೂಡಿಕೆ

* ಎಂವಿ ಎನರ್ಜಿ ಪ್ರೈವೇಟ್ ಲಿಮಿಟೆಡ್: ₹5,000 ಕೋಟಿ

* ಕ್ರೋನ್ಸ್ ಕಂಪನಿ: ₹315 ಕೋಟಿ7. ಸನ್ಸೇರಾ ಕಂಪನಿ: ₹2,150 ಕೋಟಿ

* ಡಿಎನ್ ಸೊಲ್ಯೂಷನ್ಸ್: ₹998 ಕೋಟಿ

* ನೈಡೆಕ್: 600 ಕೋಟಿ

* ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್: 1 ಶತಕೋಟಿ ಡಾಲರ್‌ ಹೂಡಿಕೆ

* ಟೊಯೋಟಾ ಕಿರ್ಲೋಸ್ಕರ್: ₹3,700 ಕೋಟಿ

* ಸಂವರ್ಧನ ಮದರ್ಸನ್ ಕಂಪನಿ: ₹3,700 ಕೋಟಿ

* ಎಪ್ಸಿಲಾನ್ ಗ್ರೂಪ್: ₹15,350 ಕೋಟಿ

* ಜಿಂದಾಲ್ ಎನರ್ಜಿ ಕಂಪನಿ: ₹4,960 ಕೋಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+