ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Karnataka Assembly Session 2022 live; ಅಧಿವೇಶನದ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23; ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದ 10 ನೇ ದಿನದ ಕಲಾಪ ಶುಕ್ರವಾರ ಆರಂಭವಾಗಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ.

ಸೆಪ್ಟೆಂಬರ್ 12 ರಿಂದ 23ರ ತನಕ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಬಳಿಕ ನಡೆಯುತ್ತಿರುವ ಅಧಿವೇಶನ ಇದಾಗಿದೆ.

ಶೇ 40ರಷ್ಟು ಕಮೀಷನ್ ಆರೋಪ, ರಾಜ್ಯದಲ್ಲಿ ಸುರಿಯುತ್ತಿರುವ ಮಳೆ, ಪಠ್ಯ ಪುಸ್ತಕ ಪರಿಷ್ಕರಣೆ ಮುಂತಾದ ಅಂಶಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಯಾರಿ ನಡೆಸಿವೆ.

karnataka monsoon session 2022

ವಿಧಾನ ಪರಿಷತ್‌ನಲ್ಲಿ ಪರಿಷತ್ ಸಭಾಪತಿ ಆಯ್ಕೆ ನಡೆಯಬೇಕಿದೆ. ಸದ್ಯ ರಘುನಾಥರಾವ್ ಮಲ್ಕಾಪುರೆ ಹಂಗಾಮಿ ಸಭಾಪತಿಯಾಗಿದ್ದಾರೆ. ಪರಿಷತ್‌ನಲ್ಲಿ ಬಿಜೆಪಿ ಬಹಮತ ಹೊಂದಿದೆ. ಸಭಾಪತಿ, ಉಪ ಸಭಾಪತಿ ಸ್ಥಾನಕ್ಕೆ ದಿನಾಂಕ ಘೋಷಣೆಯಾದ ಬಳಿಕ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ.

ವಿಧಾನಮಂಡಲದ ಮುಂಗಾರು ಅಧಿವೇಶನ ಸುದ್ದಿ, ಚಿತ್ರ, ವಿಡಿಯೋ ಸೇರಿದಂತೆ ಕ್ಷಣ-ಕ್ಷಣದ ಅಪ್‌ಡೇಟ್‌ಗಳು ಈ ಪುಟದಲ್ಲಿ ನಿಮಗೆ ಸಿಗಲಿವೆ.

Newest FirstOldest First
12:45 PM, 23 Sep

ವಿಧಾನಮಂಡಲ ಅಧಿವೇಶನ ಅನಿರ್ಧಿಷ್ಟಕಾಲ ಮುಂದೂಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.
12:43 PM, 23 Sep

ಮೀಸಲಾತಿ ಕುರಿತು ನಿರ್ಧರಿಸಲು ಮುಖ್ಯಮಂತ್ರಿಗಳು ಒಂದು ವಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಹೇಳಿದ್ದಾರೆ. ಅದನ್ನು ಎಲ್ಲರು ಸ್ವಾಗತಿಸಬೇಕು. ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಸ್ವಾಮೀಜಿಗಳು ಪ್ರತಿಭಟನೆ ಕೈ ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸದನದ ಪರವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮನವಿ ಮಾಡಿದರು.
12:41 PM, 23 Sep

ಶೀಘ್ರವೇ ಸರ್ವ ಪಕ್ಷ ಸಭೆ:ಸಿಎಂ

ಶೀಘ್ರವೇ ಸರ್ವ ಪಕ್ಷ ಸಭೆ:ಸಿಎಂ
ಮೀಸಲಾತಿ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ನ್ಯಾ.ನಾಗಮೋಹನ್ ದಾಸ್ ಸಮಿತಿ, ಸುಭಾಷ್ ಅಡಿ ಸಮಿತಿ ವರದಿಗಳು ಸಲ್ಲಿಕೆ ಆಗಿವೆ. ವರದಿ ಆಧರಿಸಿ ನಿರ್ಧಾರ ಕೈಗೊಳ್ಳುವ ಪೂರ್ವದಲ್ಲಿ ಶೀಘ್ರವೇ ಸರ್ವಪಕ್ಷ ಸಭೆ ಕರೆಯುತ್ತೇನೆ. ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ. ರಾಜ್ಯ ಸರ್ಕಾರಕ್ಕೆ ಎಲ್ಲ ಸಮುದಾಯದಗಳ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ. ಆಯಾ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಒದಗಿಸಲು ಸರ್ಕಾರ ಬದ್ಧವಾಗಿದೆ. ಇದನ್ನು ಅರಿತು ಮೀಸಲಾತಿ ಆಗ್ರಹಿಸಿ ನಡೆಸುತ್ತಿರುವ ಎಸ್‌ಟಿ ಜನಾಂಗದ ಸ್ವಾಮೀಜಿಗಳು ಪ್ರತಿಭಟನೆ ಕೈಬಿಡಬೇಕು ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
12:32 PM, 23 Sep

ಬಿಜೆಪಿಯಿಂದ ಶೇ.100ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಘೋಷಣೆ ಕೂಗಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.
12:32 PM, 23 Sep

'ಪ್ರೈವೇಟ್ ಅಶ್ವತ್ಥ, ಪಬ್ಲಿಕ್ ನಾರಾಯಣ್'

ಬಿಎಂಎಸ್‌ ಟ್ರಸ್ಟ್‌, ಜಮೀನು ಅಕ್ರಮ ತನಿಖೆ ನಡೆಸಲು ಆಗ್ರಹಿಸಿ ಸದನದಲ್ಲಿ ಮುಂದುವರಿದ ಗಲಾಟೆ. 'ಪ್ರೈವೇಟ್ ಅಶ್ವತ್ಥ, ಪಬ್ಲಿಕ್ ನಾರಾಯಣ್' ಪೊಸ್ಟ್‌ರ್ ಹಿಡಿದು ಸದನದಲ್ಲಿ ಘೋಷಣೆ ಕೂಗುತ್ತಿರುವ ಆಕ್ರೋಶ ವ್ಯಕ್ತಪಡಿಸುತ್ತಿರುವ ಜೆಡಿಎಸ್, ಕಾಂಗ್ರೆಸ್ ನಾಯಕರು.
12:29 PM, 23 Sep

ವಿಧಾನಸಭೆಯಲ್ಲಿ ಬಿಎಂಎಸ್‌ ಟ್ರಸ್ಟ್‌ ಅಕ್ರಮ ಆರೋಪ ಕುರಿತು ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ನಾಯಕರಲ್ಲಿ ಮುಂದುವರಿದ ಗಲಾಟೆ. ಗದ್ದಲ ನಡುವೆಯೇ ಮಸೂದೆ ಮಂಡಿಸಲು ಅವಕಾಶ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.
12:22 PM, 23 Sep

ಜೆಡಿಎಸ್‌ ಜತೆಗಿನ ಸಂಧಾನ ವಿಫಲ ಹಿನ್ನೆಲೆಯಲ್ಲಿ ಕೆಲ ಕಾಲ ವಿಧಾನಸಭೆ ಕಲಾಪ ಮುಂದೂಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
Advertisement
12:16 PM, 23 Sep

ಸಂಧಾನ ವಿಫಲ: ಧರಣಿಗೆ ನಿರ್ಧಾರ

ಸರ್ಕಾರ ಬಿಎಂಎಸ್‌ ಟ್ರಸ್ಟ್‌, ಜಮೀನು ಅಕ್ರಮ ತನಿಖೆ ನಡೆಸಲು ಒಪ್ಪದ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ಕರೆದಿದ್ದ ಸಂಧಾನ ಸಭೆ ವಿಫಲ. ವಿಧಾನಸಭೆ ಕಲಾಪದಲ್ಲಿ ಧರಣಿ ಮುಂದುವರಿಸಲು ನಿರ್ಧರಿಸಿದ ಜೆಡಿಎಸ್‌ ನಾಯಕರು.
12:14 PM, 23 Sep

ಬಿಎಂಎಸ್‌ ಟ್ರಸ್ಟ್‌, ಜಮೀನು ಅಕ್ರಮ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಧರಣಿ.
12:13 PM, 23 Sep

ಬಿಎಂಎಸ್‌ ಟ್ರಸ್ಟ್‌, ಜಮೀನು ಅಕ್ರಮ ಆರೋಪ. ಸಿಬಿಐ ತನಿಖೆಗೆ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹ.
8:08 PM, 22 Sep

ಶುಕ್ರವಾರ ಬೆಳಗ್ಗೆ 10.30ವರೆಗೆ ಸದನ ಮುಂದೂಡಿಕೆ

ಶುಕ್ರವಾರ ಬೆಳಗ್ಗೆ 10.30ವರೆಗೆ ವಿಧಾನಸಭೆ ಕಲಾಪ ಮುಂದೂಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ
7:56 PM, 22 Sep

ಬಿಎಂಸಿ ಟ್ರಸ್ಟ್‌ನಲ್ಲಿ ದಯಾನಂದ ಪೈ ಅವರನ್ನು ಮುಂದುವರಿಸಿರುವುದು ಯಾವ ಕಾರಣದಿಂದ. ಈ ಬಗ್ಗೆ ತನಿಖೆಯಾಗಬೇಕು. ಅಡ್ವಕೇಟ್‌ ಜನರಲ್‌ ಅವರನ್ನು ನಾವು ನೇಮಿಸಿದ್ದಲ್ಲ: ಶಾಸಕ ಎಚ್‌ಡಿ ಕುಮಾರಸ್ವಾಮಿ
Advertisement
7:44 PM, 22 Sep

ಎಚ್‌ಡಿ ಕುಮಾರಸ್ವಾಮಿ ಸಚಿವ ಅಶ್ವತ್ಥ್‌ ನಾರಾಯಣ ಜಟಾಪಟಿ

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಹಾರಿಹಾಯ್ದರು. ಇದಕ್ಕೆ ನಿಮ್ಮ ಕೆಲಸಗಳು ಜನಕ್ಕೆ ಗೊತ್ತಿದೆ ಎಂದ ಸಚಿವ ಅಶ್ವತ್ಥ್‌ ನಾರಾಯಣ ತಿರುಗೇಟು ನೀಡಿದರು.
7:40 PM, 22 Sep

ನಾವು ರಾಜ ವಂಶದ ರಾಜಕಾರಣಿಗಳಲ್ಲ: ಎಚ್‌ಡಿ ಕುಮಾರಸ್ವಾಮಿ

ನಾವು ರಾಜವಂಶದ ರಾಜಕಾರಣಿಗಳಲ್ಲ, ನಾವು ಕೂಡ ರೈತರ ಮಕ್ಕಳೇ. ನಮಗೆ ವ್ಯವಸ್ಥೆಯ ಬಗ್ಗೆ ಅರಿವಿದೆ. ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಹರಿಹಾಯ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ
6:54 PM, 22 Sep

ಸಾರ್ವಜನಿಕ ಟ್ರಸ್ಟ್‌ ಆಸ್ತಿಗೆ ಯಾಕೆ ಧಕ್ಕೆ ಆಗುತ್ತಿದೆ. ನಾನು ಸಿಎಂ ಆಗಿದ್ದಾಗ ಖಾಸಗಿಗೆ ನೀಡುವ ಅನುಮೋದನೆ ತಿರಸ್ಕರಿಸಿದ್ದೆ. ದಯಾನಂದ ಪೈ ಬಿಎಂಎಸ್‌ ಶಿಕ್ಷಣ ಟ್ರಸ್ಟನ ಟ್ರಸ್ಟಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ.
6:43 PM, 22 Sep

ಮುಜರಾಯಿ ಆಸ್ತಿ ಬಿಎಂಸ್‌ ಟ್ರಸ್ಟ್‌ಗೆ ಹೋಗಿದೆ. ಮೂರುವರೆ, ನಾಲ್ಕು ಎಕರೆ ಎಷ್ಟು ಬಿಎಂಸ್ ಟ್ರಸ್ಟ ಸಂಸ್ಥೆಗೆ ಹೋಗಿದೆ. ಒಂದು ಎಕರೆ 500 ಕೋಟಿ ಬೆಲೆ ಬಾಳುತ್ತದೆ. ಈ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಸದನದಲ್ಲಿ ಕೃಷ್ಣ ಬೈರೇಗೌಡ ಹೇಳಿಕೆ.
6:23 PM, 22 Sep

ಸರ್ಕಾರದ ವ್ಯಾಪ್ತಿಯಲ್ಲಿ ಬೆಳೆದ ಬಿಎಂಎಸ್ ಕಾಲೇಜು ಟ್ರಸ್ಟ್ ಜಮೀನು ಅಕ್ರಮ, ಖಾಸಗಿಯವರಿಗೆ ಸರ್ಕಾರ ನೀಡಿದ ಅನುಮೋದನೆ ಕುರಿತು ಕುಮಾರಸ್ವಾಮಿ ಪ್ರಸ್ತಾಪ.
5:11 PM, 22 Sep

ಸಿಎಂ ಸವಾಲು ಸ್ವೀಕರಿಸಿದ ಮಾಜಿ ಸಿಎಂ

ಸಿಎಂ ಸವಾಲು ಸ್ವೀಕರಿಸಿದ ಮಾಜಿ ಸಿಎಂ
ಬಿಜೆಪಿ 'ಜನಸ್ಪಂದನ' ಸಮಾವೇಶದಲ್ಲಿ ಧಮ್ ಇದ್ದರೆ ಭ್ರಷ್ಟಾಚಾರ ಕುರಿತು ಚರ್ಚೆಗೆ ಬನ್ನಿ, ಭ್ರಷ್ಟಾಚಾರವನ್ನು ಚುನಾವಣೆ ವಿಷಯವಾಗಿಸುವ ನಿಟ್ಟಿನಲ್ಲಿ ಬನ್ನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದರು. ಅಲ್ಲದೇ ನಾನು ದಾಖಲೆ ಇಲ್ಲದೇ ಮಾತನಾಡುತ್ತೇನೆ. ಹಿಟ್‌ ಆಂಡ್‌ ರನ್‌ ವ್ಯಕ್ತಿ ಎಂದು ಹಗುರವಾಗಿ ಮಾತನಾಡಲಾಗಿದೆ. ಹೀಗಾಗಿಯೇ ಸದನದಲ್ಲಿ ಉತ್ತರಿಸಲು, ಭ್ರಷ್ಟಾಚಾರ ಕುರಿತು ದಾಖಲೆ ನೀಡಲು ಬಂದಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ.
5:03 PM, 22 Sep

ವಿಧಾನಸಭೆಯಲ್ಲಿ ಕರ್ನಾಟಕದ ಆಡಳಿತದಲ್ಲಿ ಪರ್ಸೆಂಟೇಜ್ ಭ್ರಷ್ಟಾಚಾರ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಸ್ತಾಪ.
4:55 PM, 22 Sep

ವಿಧಾನಸಭೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ-2022 ಅಂಗೀಕಾರ.
4:54 PM, 22 Sep

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ಹಿನ್ನೆಲೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮಂಡಳಿಗಳನ್ನು ಸರ್ಕಾರ ಒಟ್ಟಗೂಡಿಸಲಿದೆ. ಆದರೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಗೆ ಹಾಲಿ ಇರುವಂತೆಯೆ ಪರೀಕ್ಷೆ ನಡೆಯುತ್ತವೆ. ನೀತಿಯಿಂದ ಈಗಿರುವ ಪ್ರಾಥಮಿಕದಿಂದ ಪಿಯುಸಿವರೆಗಿನ ಕಲಿಕಾ ಹಂತದಲ್ಲಿ ಬದಲಾವಣೆ ಆಗಲಿದೆ. ಹೀಗಾಗಿ ಮಂಡಳಿ ಒಟ್ಟಗೂಡಿಸುತ್ತಿದ್ದೇವೆ ಎಂದು ಸದನದಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉತ್ತರ.
4:52 PM, 22 Sep

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ-2022 ಕುರಿತು ಸದನದಲ್ಲಿ ಚರ್ಚೆ.
4:46 PM, 22 Sep

2022-23ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ ಮೇಲೆ ಸದನದಲ್ಲಿ ಮುಂದುವರಿದ ಚರ್ಚೆ.
4:35 PM, 22 Sep

ಶಿಕ್ಷಕರ ವಿಚಾರದಲ್ಲಿ ವಲಯವಾರು ಮಕ್ಕಳ ಸಂಖ್ಯೆ ಆಧಾರದಲ್ಲಿ ಶಿಕ್ಷಕರಿರುವಂತೆ ನೋಡಿಕೊಳ್ಳಬೇಕು. ಆದರೆ ಶಿಕ್ಷಕರು ಎಲ್ಲಿದ್ದರು ಪಾಠ ಮಾಡುತ್ತಾರೆ. ಹೀಗಿದ್ದಾಗ ಮ್ಯೂಚುವಲ್ ವರ್ಗಾವಣೆಗೆ ಕನಿಷ್ಠ ಸೇವೆ ಸಲ್ಲಿಕೆ ಕಡ್ಡಾಯ ನಿಯಮ ಏಕೆ ಎಂದು ವಿಧಾನಸಭೆಯಲ್ಲಿ ಶಾಸಕ ಪಿ.ರಾಜೀವ್ ಹೇಳಿಕೆ.
2:40 PM, 22 Sep

ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 3.45ಕ್ಕೆ ಮುಂದೂಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.
2:38 PM, 22 Sep

ವಿಧಾನಸಭೆಯಲ್ಲಿ 2022-23ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ ಅಂಗೀಕಾರ.
2:35 PM, 22 Sep

2022-23ನೇ ಸಾಲಿನ ಪೂರಕ ಅಂದಾಜುಗಳ ಮೊದಲ ಕಂತು ಸೇರಿದಂತೆ ಹಣಕಾಸಿನ ಪ್ರಸ್ತಾವನೆಗಳನ್ನು ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
1:53 PM, 22 Sep

'ಪೇಸಿಎಂ ಪೊಸ್ಟರ್' ಚರ್ಚೆ ಕೊನೆಗೊಳಿಸಿ

ವಿಧಾನಸಭೆಯಲ್ಲಿ 'ಪೇಸಿಎಂ ಪೊಸ್ಟರ್' ಕುರಿತು ಬೇಸರ ವ್ಯಕ್ತಪಡಿಸಿ ಪ್ರಸ್ತಾಪಿಸಿ ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ. ಮುಖ್ಯಮಂತ್ರಿ ವಿರುದ್ಧ ಪೇಸಿಎಂ ಪೊಸ್ಟರ್‌ ಕುರಿತು ಸುದ್ದಿ ಬೇಸರ ತರಿಸಿದೆ. ಉನ್ನತ ಹುದ್ದೆಯಲ್ಲಿರುವ ಮುಖ್ಯಮಂತ್ರಿ ಅವರನ್ನು ಈ ಸ್ಥಿತಿಗೆ ತರುವುದು ಒಳಿತಲ್ಲ. ಇದರ ಹಿಂದಿನ ಉದ್ದೇಶ ಏನು ಎಂದು ಗೊತ್ತಾಗಬೇಕು. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆಡಿಯೋ ರೆಕಾರ್ಡ್, ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದು, ಈ ರೀತಿ ಪೋಸ್ಟರ್ ಹಾಕುವುದು ಸೇರಿದಂತೆ ಮುಂತಾದವುಗಳಿಂದ ನಾವು ಕೆಟ್ಟ ಪರಿಸ್ಥಿತಿ ತಲುಪುತ್ತಿದ್ದೇವೆ. ಜನಪ್ರತಿನಿಧಿಗಳಾದ ನಾವು ಜನರ ಮುಂದೆ ಬೆತ್ತಲಾಗುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು. ದಯವಿಟ್ಟು ಈ ಬಗ್ಗೆ ಚರ್ಚೆ ಮಾಡದಂತೆ ಸ್ಪೀಕರ್ ಬಳಿ ಸಚಿವರು ಮನವಿ ಮಾಡಿದರು.
1:45 PM, 22 Sep

ರಾಜ್ಯದ ಉನ್ನತ ಹುದ್ದೆ ಗೆ ಕಾಂಗ್ರೆಸ್‌ನಿಂದ ಅಪಮಾನ ಎಂದು ಶಾಸಕ ಪಿ.ರಾಜೀವ್ ಹೇಳಿಕೆ. ಪ್ರಕರಣ ಸಂಬಂಧ ಎಂಟು ಜನರನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಲು ಕಾಂಗ್ರೆಸ್‌ ಅಡ್ಡಿಪಡಿಸಲ್ಲ. ಆದರೆ ಸದನದಲ್ಲಿ ರಾಜಕೀಯ ಮಾತನಾಡುವುದು ಬೇಡ ಎಂದು ಶಾಸಕ ಕೃಷ್ಣಬೈರೇಗೌಡ.
1:45 PM, 22 Sep

ವಿಧಾನಸಭೆಯ ಶೂನ್ಯವೇಳೆಯಲ್ಲಿ ಶಾಸಕ ಪಿ.ರಾಜೀವ್ ಅವರಿಂದ ಪೇಸಿಎಂ ಪೋಸ್ಟರ್ ಪ್ರಸ್ತಾಪ. ಇದು ಕಾಂಗ್ರೆಸ್‌ಪಕ್ಷದಿಂದ ಪ್ರಯೋಜಿತವಾದ ಆಂದೋಲನ ಎಂದು ಪಿ.ರಾಜೀವ್ ಹೇಳಿಕೆ.
READ MORE

English summary
Karnataka Monsoon Session Live Updates : Know New bills tabled, Latest news, highlights of Karnataka Legislative Assembly Monsoon session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X