ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ: ಸಮೀಕ್ಷೆ ಹೇಳಿದ್ದೇನು? ಗೆಲುವು ಯಾರಿಗೆ? ಪ್ರತಿ ಪ್ರದೇಶದ ಅಂಕಿಅಂಶ, ಮಾಹಿತಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ಜನವರಿ 21: ಕರ್ನಾಟಕ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಉಳಿದಿದೆ. ಮತದಾರರನ್ನು ಸೆಳೆಯುವಲ್ಲಿ ಮೂರು ಪಕ್ಷಗಳು ಹಲವಾರು ಕಸರತ್ತು ನಡೆಸಿವೆ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಂಚರತ್ನ ಯಾತ್ರೆ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಿರತವಾಗಿದೆ. ಕಾಂಗ್ರೆಸ್‌ ಪಕ್ಷವು ಪ್ರಜಾಧ್ವನಿ ಯಾತ್ರೆಯನ್ನು ಕೈಗೊಂಡಿದೆ. ಈ ಬಾರಿಯ ಚುನಾವಣೆ ಮೂರು ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಲಿದೆ. ಈಗಾಗಲೇ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ. ಇತ್ತ ಕಾಂಗ್ರೆಸ್‌ನಿಂದಲೂ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಜೆಡಿಎಸ್‌ ಪಕ್ಷವು ಹಲವು ಸಾರ್ವಜನಿಕ ಸಭೆಗಳನ್ನು ನಡೆಸಿದೆ. ಈ ಬಾರಿ ಆಮ್‌ ಆದ್ಮಿ ಪಕ್ಷವು ತನ್ನ ಬಲವನ್ನು ಪ್ರದರ್ಶನ ಮಾಡಲಿದೆ. ಜನಾರ್ಧನ ರೆಡ್ಡಿ ನೇತೃತ್ವದ ಪಕ್ಷವು ಈ ಸಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.

 ಕರ್ನಾಟಕ ಚುನಾವಣೆ: ಸಮೀಕ್ಷೆ ಹೇಳಿದ್ದೇನು?

ಕರ್ನಾಟಕ ಚುನಾವಣೆ: ಸಮೀಕ್ಷೆ ಹೇಳಿದ್ದೇನು?

ಸ್ವತಂತ್ರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ 108 ರಿಂದ 114 ಸೀಟುಗಳನ್ನು ಗೆಲ್ಲಲಿದೆ. ಆಡಳಿತಾರೂಢ ಬಿಜೆಪಿ 65 ರಿಂದ 75 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಜೆಡಿಎಸ್ 24-34 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಆಮ್‌ ಆದ್ಮಿ ಪಕ್ಷಕ್ಕೆ ಯಾವುದೇ ಸ್ಥಾನ ಬರುವುದಿಲ್ಲವೆಂದು ಹೇಳಿದೆ.

 ಹೈದರಾಬಾದ್‌ ಮೂಲದ ಸಂಸ್ಥೆಯಿಂದ ಸಮೀಕ್ಷೆ

ಹೈದರಾಬಾದ್‌ ಮೂಲದ ಸಂಸ್ಥೆಯಿಂದ ಸಮೀಕ್ಷೆ

ನವೆಂಬರ್ 20 ರಿಂದ ಜನವರಿ 15 ರ ವರೆಗೆ ಕರ್ನಾಟಕದಲ್ಲಿ IPSS ತಂಡದ ಸಹಯೋಗದೊಂದಿಗೆ ಹೈದರಾಬಾದ್‌ನ SAS ಗುಂಪು ನಡೆಸಿದ ಸಮೀಕ್ಷೆಯು ಕಾಂಗ್ರೆಸ್ ತನ್ನ ಮತಗಳನ್ನು ಶೇಕಡಾ 38.14 ರಿಂದ ಶೇಕಡಾ 40 ಕ್ಕೆ (+1.86%) ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದೆ. 36.35 ಪ್ರತಿಶತದಿಂದ 34 ಪ್ರತಿಶತಕ್ಕೆ (- 2.35%) ಕುಸಿತವನ್ನು ಬಿಜೆಪಿ ಕಾಣಲಿದೆ. ಜೆಡಿಎಸ್ ಕೂಡ 1.3 ಪರ್ಸೆಂಟ್ ಇಳಿಕೆಯೊಂದಿಗೆ 18.3 ಪರ್ಸೆಂಟ್‌ನಿಂದ 17 ಪರ್ಸೆಂಟ್‌ಗೆ ಕುಸಿಯಬಹುದು ಎಂದು ಅದು ಹೇಳಿದೆ. ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರರು ಶೇಕಡಾ 6 ರಷ್ಟು ಗಳಿಸಬಹುದು. ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಏಳು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

 ಬೆಂಗಳೂರು ನಗರದ ಸಮೀಕ್ಷೆ

ಬೆಂಗಳೂರು ನಗರದ ಸಮೀಕ್ಷೆ

ಬೆಂಗಳೂರು ನಗರದಲ್ಲಿ 13ರಿಂದ 14 ಕಾಂಗ್ರೆಸ್ ಶಾಸಕರು ಆಯ್ಕೆಯಾಗಲಿದ್ದಾರೆ. ಬಿಜೆಪಿಯಿಂದ ಕೇವಲ 9ರಿಂದ 10 ಸದಸ್ಯರು ಆಯ್ಕೆಯಾಗಬಹುದು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದ್ದು, ಕೇವಲ 10ರಿಂದ 14 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ 24 ರಿಂದ 25 ಸ್ಥಾನಗಳನ್ನು ಗಳಿಸಬಹುದು, ಜೆಡಿಎಸ್ 21 ರಿಂದ 22 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

 ಕಿತ್ತೂರು ಕರ್ನಾಟಕದ ಸಮೀಕ್ಷೆ

ಕಿತ್ತೂರು ಕರ್ನಾಟಕದ ಸಮೀಕ್ಷೆ

ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 27 ರಿಂದ 28 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಬಹುದು. ಬಿಜೆಪಿ 14 ರಿಂದ 16 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ತನ್ನ ಭದ್ರಕೋಟೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ 12 ರಿಂದ 13 ಸ್ಥಾನಗಳಲ್ಲಿ ಗೆಲ್ಲಬಹುದು. ಆದರೆ ಕಾಂಗ್ರೆಸ್ ಏಳರಿಂದ ಎಂಟು ಸ್ಥಾನಗಳನ್ನು ಮಾತ್ರ ಪಡೆಯಬಹುದು.

 ಹೈದರಾಬಾದ್‌ ಕರ್ನಾಟಕದ ಸಮೀಕ್ಷೆ

ಹೈದರಾಬಾದ್‌ ಕರ್ನಾಟಕದ ಸಮೀಕ್ಷೆ

ಹೈದರಾಬಾದ್-ಕರ್ನಾಟಕದಲ್ಲಿ ಬಿಜೆಪಿ 12 ರಿಂದ 14 ಸ್ಥಾನಗಳನ್ನು ಪಡೆಯಬಹುದು. ಕಾಂಗ್ರೆಸ್ 21 ರಿಂದ 22 ಸ್ಥಾನಗಳನ್ನು ಗೆಲ್ಲಬಹುದು. ಕೊಪ್ಪಳ, ಗಂಗಾವತಿ, ಬಳ್ಳಾರಿ, ಕೋಲಾರ, ದಾವಣಗೆರೆ ಮತ್ತು ರಾಯಚೂರಿನಲ್ಲಿ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ನಿರ್ಣಾಯಕ ಅಂಶವಾಗಬಹುದು ಮತ್ತು ಹೊಸ ಪಕ್ಷವು ಕೆಲವು ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. ಎಐಎಂಐಎಂ ಸ್ಪರ್ಧಿಸಿದರೆ, ಅದು ಕೇವಲ ಆರರಿಂದ ಏಳು ಸ್ಥಾನಗಳಲ್ಲಿ ಮತದಾನದ ಮಾದರಿಯ ಮೇಲೆ ಪರಿಣಾಮ ಬೀರಬಹುದು ಎಂದು ಅದು ಹೇಳಿದೆ.

 ಮಧ್ಯ ಕರ್ನಾಟಕ ಸಮೀಕ್ಷೆ

ಮಧ್ಯ ಕರ್ನಾಟಕ ಸಮೀಕ್ಷೆ

ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ 16 ರಿಂದ 17 ಸ್ಥಾನಗಳನ್ನು ಪಡೆಯಲಿದ್ದು, ಬಿಜೆಪಿ ಕೇವಲ 8 ರಿಂದ 9 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ ಹೇಳಿದ್ದಕ್ಕೆ ಮತದಾರರಲ್ಲಿ ಕೋಪವಿದ್ದು, ಹಲವು ಸ್ಥಾನಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಸಮೀಕ್ಷೆ ತೋರಿಸಿದೆ.

 ಕಾಂಗ್ರೆಸ್‌ಗೆ ಗರಿಷ್ಠ ಬೆಂಬಲ

ಕಾಂಗ್ರೆಸ್‌ಗೆ ಗರಿಷ್ಠ ಬೆಂಬಲ

ಹಿಂದುಳಿದ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಕಾಂಗ್ರೆಸ್‌ಗೆ ಗರಿಷ್ಠ ಬೆಂಬಲ ಸಿಗಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಒಕ್ಕಲಿಗರು ಯಾರನ್ನು ಬೆಂಬಲಿಸುತ್ತಾರೆ ಎಂಬುದರ ಕುರಿತು ಸಮೀಕ್ಷೆಯು ಶೇ 50 ರಷ್ಟು ಜೆಡಿಎಸ್, 38 ಪ್ರತಿಶತ ಕಾಂಗ್ರೆಸ್ ಮತ್ತು 10 ಪ್ರತಿಶತ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಹೇಳಿದೆ.

English summary
According to an independent survey, the opposition Congress will win 108 to 114 seats. The ruling BJP will win 65 to 75 constituencies. JD(S) is predicted to win 24-34 seats
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X