ರಾಜಕೀಯ ಲೆಕ್ಕಾಚಾರ; JDS ಬಿಟ್ಟು ಕೈ ಹಿಡಿದಿದ್ದ ದತ್ತಾ, ಇದೀಗ ಮತ್ತೆ ದಳದತ್ತ: ಏನಿದು ದತ್ತಾ ಅವರ ಜಂಪಿಂಗ್‌ ಸ್ಟೋರಿ!

ಬೆಂಗಳೂರು,ಏಪ್ರಿಲ್13:‌ ರಾಜ್ಯ ವಿಧಾನಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣೆಗೆಗಳಿಗೆ ಸಾಕ್ಷಿಯಾಗುತ್ತಿದೆ. ಪ್ರಾದೇಶಿ ಪಕ್ಷ ಜೆಡಿಎಸ್‌ ಗೆ ತನ್ನದೇ ಆದ ಇತಿಹಾಸವನ್ನ ಹೊಂದಿದ್ದು, ಹಲವು ನಾಯಕರು ಜೆಡಿಎಸ್‌ ಗರಡಿಯವರಾಗಿದ್ದರು.

ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ನಲ್ಲಿ ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೆಡಿಎಸ್‌ ಪಕ್ಷದಲ್ಲಿಯೇ ತಮ್ಮ ರಾಜಕೀಯ ಜೀವನವನ್ನ ಆರಂಭಿಸಿ ಇದೀಗ ಉತ್ತಮ ಸ್ಥಾನದಲ್ಲಿದ್ದಾರೆ. ಇನ್ನು ರಾಜಕೀಯ ಲೆಕ್ಕಾಚಾರ ಹಾಗೂ ರಾಜಕೀಯ ಭವಿಷ್ಯದಿಂದಾಗಿ ಹಲವು ನಾಯಕರು ಪ್ರಾದೇಶಿಕ ಪಕ್ಷವನ್ನ ಬಿಟ್ಟು ರಾಷ್ಟ್ರೀಯ ಪಕ್ಷಕ್ಕೆ ಸೇರಿದ ಸಾಕಷ್ಟು ಉದಾಹರಣೆಳಿವೆ.

Karnataka Assembly Elections 2023: YSV Datta Back To JDS Will Contest From Kaduru

2023 ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಜೆಡಿಎಸ್‌ ನಿಂದ ಹಲವು ಹಾಲಿ ಶಾಸಕರಾದ ಎ.ಟಿ ರಾಮಸ್ವಾಮಿ, ಗುಬ್ಬಿ ಶ್ರೀನಿವಾಸ್‌, ಶಿವಲಿಂಗೇಗೌಡ, ಸೇರಿದಂತೆ ಹಲವು ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಳನ್ನ ಸೇರ್ಪಡೆಯಾಗಿದ್ದು, ಚುನಾವಣಾ ಕಣದಲ್ಲಿದ್ದಾರೆ.

ಒಂದು ಕಾಲದ ಜೆಡಿಎಸ್ ಮೇಷ್ಟ್ರು, ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರ ಅಂತಲೇ ಹೆಸರಾಗಿದ್ದ ವೈ ಎಸ್‌ ವಿ ದತ್ತ ‌ಅವರು ಕಳೆದ ಮೂರು ತಿಂಗಳ ಹಿಂದೆ ಜೆಡಿಎಸ್‌ ಪಕ್ಷವನ್ನ ತೊರೆದು ಕಾಂಗ್ರೆಸ್‌ ಪಕ್ಷವನ್ನ ಸೇರ್ಪಡೆಯಾಗಿದ್ದರು. ಇನ್ನು ವೈ ಎಸ್‌ ವಿ ದತ್ತ ಜೆಡಿಎಸ್‌ ಪಕ್ಷವನ್ನ ಬಿಟ್ಟ ಸಂದರ್ಭದಲ್ಲಿ ಜೆಡಿಎಸ್‌ ನ ಹಲವು ನಾಯಕರು ವೈ ಎಸ್‌ ವಿ ದತ್ತ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು.

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಹಾಗೂ ವೈ ಎಸ್‌ ವಿ ದತ್ತ ಅವರ ನಡುವೆ ಉತ್ತಮ ಸಂಬಂಧವಿದ್ದು, ಪಕ್ಷ ಬಿಟ್ಟ ವಿಚಾರದಲ್ಲಿ ವೈ ಎಸ್‌ ವಿ ದತ್ತ ವಿರುದ್ದ ದೇವೇಗೌಡರು ಸಹ ಬೇಸರವನ್ನ ವ್ಯಕ್ತಪಡಿಸಿದ್ದರೂ, ಪಕ್ಷ ನೆಲೆ ಇಲ್ಲ ಎಂಬ ಹಲವು ಲೆಕ್ಕಾಚಾರದಿಂದ ಜೆಡಿಎಸ್‌ ಹಲವು ಹಾಲಿ ಶಾಸಕರು ಜೆಡಿಎಸ್‌ ತೊರೆದಿದ್ದರು, ಆದರೆ ವೈ ಎಸ್‌ ವಿ ದತ್ತಾ ಅವರು ಜೆಡಿಎಸ್‌ ಪಕ್ಷವನ್ನ ತೊರೆದಾಗ ಸಾಕಷ್ಟು ವಿಚಾರಗಳು ಚರ್ಚೆಯಾದರೂ ದೇವೇಗೌಡ ಅವರ ಬಗ್ಗೆಯಾಗಲಿ ಹಾಗೂ ಜೆಡಿಎಸ್‌ ಪಕ್ಷದ ವಿರುದ್ದವಾಗಲಿ ಒಂದೇ ಒಂದು ಮಾತನ್ನ ವೈ ಎಸ್‌ ವಿ ದತ್ತಾ ಅವರು ಹೇಳಿರಲಿಲ್ಲ.

Karnataka Assembly Elections 2023: YSV Datta Back To JDS Will Contest From Kaduru

ಇನ್ನೂ ಮುಂದಿನ ರಾಜಕೀಯ ಪಕ್ಷಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನ ಸೇರ್ಪಡೆಯಾಗಿದ್ದ ವೈ ಎಸ್‌ ವಿ ದತ್ತ ಅವರು ಜನವರಿ 15 ರಂದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ದತ್ತ ಅವರು ಕ್ಷೇತ್ರದಲ್ಲಿ ಚುನಾವಣೆಗಾಗಿ ಪಕ್ಷವನ್ನ ಹಾಗೂ ಬೆಂಬಲಿಗರನ್ನ ಸಜ್ಜುಗೊಳಿಸಿದದರು. ಕಡೂರು ಕ್ಷೇತ್ರದಿಂದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿದ ದತ್ತ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಶಾಕ್‌ ನೀಡಿದೆ.

‌ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕುರಿತು ದತ್ತ ಅವರು ವಿವಾದಿತ ಹೇಳಿಕೆ ನೀಡಿದ್ದೆ ಟಿಕೆಟ್‌ ತಪ್ಪಲು ಕಾರಣವಾಗಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬಂದಿವೆ. ಕಡೂರು ಕ್ಷೇತ್ರಕ್ಕೆ ಕೆ ಎಸ್‌ ಆನಂದ್‌ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಇದರಿಂದ ಮುನಿಸಿಕೊಂಡ ದತ್ತ ತನ್ನ ಬೆಂಬಲಿಗರೊಂದಿಗೆ ಸಭೆ ಕರೆದು ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಿದ್ದರು. ಈ ನಡುವೆ ಮತ್ತೆ ಮರಳಿ ಗೂಡಿಗೆ ದತ್ತ ಬರ್ತಾರೆ ಎನ್ನುವ ಚರ್ಚೆಯ ನಡುವೆ ದೇವೇಗೌಡರೊಂದಿಗಿನ ಮಾತುಕತೆ ಬಳಿಕ ಎಚ್‌ ಡಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್‌ ರೇವಣ್ಣ ಅವರು ಗುರುವಾರ ವೈ ಎಸ್‌ ವಿ ದತ್ತ ಅವರ ಮನೆಗೆ ಭೇಟಿ ನೀಡಿ, ಅಧಿಕೃತವಾಗಿ ಅವರನ್ನು ಮರಳಿ ಜೆಡಿಎಸ್‌ಗೆ ಬರಮಾಡಿಕೊಂಡಿದ್ದಾರೆ.

ಕಾಂಗ್ರೆಸ್‌ ಸೇರಿದ್ದ ದತ್ತ ಈಗ ಮೂರು ತಿಂಗಳು ಕಳೆಯುವ ಮುನ್ನವೇ ಕಾಂಗ್ರೆಸ್ಸಿಗೂ ಗುಡ್‌ ಬೈ ಹೇಳಿದ್ದಾರೆ. ಮತ್ತೆ ಕಾಂಗ್ರೆಸ್‌ ನಿಂದ ಜೆಡಿಎಸ್‌ ಪಕ್ಷಕ್ಕೆ ಜಂಪ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+