Karnataka Elections 2023 Pre Poll Survey: ಇಲ್ಲಿದೆ ಸಮೀಕ್ಷೆ- ಯಾವ ಪಕ್ಷಕ್ಕೆ ಅಧಿಕಾರ? ಅಂಕಿಅಂಶ, ವಿವರ ಪಡೆಯಿರಿ

ಕುತೂಹಲ ಕೆರಳಿಸಿರುವ ಕರ್ನಾಟಕ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಲಿದೆ, ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಪ್ರಶ್ನೆಗಳು ಮೂಡಿರುವುದು ಸಹಜ. 'Popular Polls' ಎಂಬ ಸಂಸ್ಥೆ ಈ ಪ್ರಶ್ನೆಗಳಿಗೆ ಸಮೀಕ್ಷೆಗಳ ಮೂಲಕ ಉತ್ತರಿಸುವ ಯತ್ನ ಮಾಡಿದೆ.

ಬೆಂಗಳೂರು, ಮಾರ್ಚ್‌ 03: ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಕಳೆದ ಚುನಾವಣೆಯಂತೆ ಈ ಬಾರಿಯೂ ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ. ಕುತೂಹಲ ಕೆರಳಿಸಿರುವ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಲಿದೆ, ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿರುವುದು ಸಹಜ. 'Popular Polls' ಎಂಬ ಸಂಸ್ಥೆ ಈ ಪ್ರಶ್ನೆಗಳಿಗೆ ಸಮೀಕ್ಷೆಗಳ ಮೂಲಕ ಉತ್ತರಿಸುವ ಯತ್ನ ಮಾಡಿದೆ.

 1,12,000 ಜನರ ಸರ್ವೆ

1,12,000 ಜನರ ಸರ್ವೆ

ಪಾಪ್ಯುಲರ್‌ ಪೋಲ್ಸ್‌ ಸಂಸ್ಥೆಯು ರಾಜ್ಯದಲ್ಲಿ ಒಟ್ಟು 1,12,000 ಜನರ ಸರ್ವೆ ಮಾಡಿದೆ. ಕಳೆದ ನವೆಂಬರ್‌ 10ರಿಂದ 2023ರ ಜನವರಿ 30ರ ವರೆಗೂ ರಾಜ್ಯದ ಪ್ರತಿ ತಾಲ್ಲೂಕುಗಳಲ್ಲಿ ಸಮೀಕ್ಷೆ ಪ್ರಕ್ರಿಯೆಯನ್ನು ಕೈಗೊಂಡಿದೆ. ಈ ಸರ್ವೆ ಮೂಲಕ, ಕರ್ನಾಟಕ ಚುನಾವಣೆಯಲ್ಲಿ ಯಾವ ಅಂಶಗಳು ಪ್ರಮುಖವಾಗಲಿವೆ ಎಂಬ ಬಗ್ಗೆಯೂ ತಿಳಿದುಕೊಳ್ಳಲಾಗಿದೆ. ರಾಜಕೀಯ ಪಕ್ಷಗಳು, ನಾಯಕರ ವರ್ಚಸ್ಸು, ಹಣಬಲ, ಜಾತಿ ಮತ್ತು ಧರ್ಮಗಳು ಎಷ್ಟರ ಮಟ್ಟಿಗೆ ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬುದನ್ನು ಪರೀಕ್ಷಿಸಲಾಗಿದೆ.

 ಶೇಕಡಾವಾರು ಸರ್ವೆ

ಶೇಕಡಾವಾರು ಸರ್ವೆ

ಸರ್ವೆ ಮಾಡಿದ ಒಟ್ಟು 1,12,000 ಜನರಲ್ಲಿ ಶೇ 62ರಷ್ಟು ಜನರು ಗಂಡಸರು ಹಾಗೂ ಶೇ 38ರಷ್ಟು ಜನರು ಮಹಿಳೆಯರು. ಅದರಲ್ಲಿ ಶೇ 60 ಜನರು 18ರಿಂದ 40 ವರ್ಷ ಒಳಗಿನವರು. ಶೇ 56ರಷ್ಟು ಜನರು ಗ್ರಾಮೀಣ ಭಾಗದವರು ಹಾಗೂ ಶೇ 44ರಷ್ಟು ಜನರು ನಗರ ಭಾಗದವರು.

 ಯಾರಾಗಬಹುದು ಮುಖ್ಯಮಂತ್ರಿ?

ಯಾರಾಗಬಹುದು ಮುಖ್ಯಮಂತ್ರಿ?

ಬಿಜೆಪಿ ಅಧಿಕಾರಕ್ಕೆ ಬಂದರೆ ಬಸವರಾಜ ಬೊಮ್ಮಾಯಿ, ಪ್ರಲ್ಹಾದ್‌ ಜೋಶಿ, ಬಿಎಲ್‌ ಸಂತೋಷ್‌ ಹಾಗೂ ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿ ಆಗಬಹುದೆಂದು ಜನರು ಊಹಿಸಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌, ಜಿ ಪರಮೇಶ್ವರ ಹಾಗೂ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬಹುದೆಂದು ಜನರು ಊಹಿಸಿದ್ದಾರೆ. ಒಂದು ವೇಳೆ, ಜೆಡಿಎಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬಹುದೆಂದು ಜನರು ಊಹಿಸಿದ್ದಾರೆ.

 ಪರಿಣಾಮ ಬೀರುವ ಅಂಶಗಳು

ಪರಿಣಾಮ ಬೀರುವ ಅಂಶಗಳು

ಈ ಚುನಾವಣೆಯಲ್ಲಿ ಪ್ರಮುಖವಾಗಿ ಪರಿಣಾಮ ಬೀರುವ ಅಂಶಗಳನ್ನು ಸರ್ವೆ ಮೂಲಕ ಪಟ್ಟಿ ಮಾಡಲಾಗಿದೆ. ನೀರಿನ ಸಮಸ್ಯೆ, ಕೃಷಿ ಸಮಸ್ಯೆ, ನಿರುದ್ಯೋಗ ಸಮಸ್ಯೆ, ರಸ್ತೆ, ಶಾಲೆ, ಆಸ್ಪತ್ರೆಗಳ ಸಮಸ್ಯೆ, ಕೃಷಿ ಸಾಲ, ಬೀಜ, ಗೊಬ್ಬರದ ಸಮಸ್ಯೆ, ಭ್ರಷ್ಟಾಚಾರ, ನೀರಾವರಿ, ಚರಂಡಿ ಸಮಸ್ಯೆಗಳು ಈ ಚುನಾವಣೆಯಲ್ಲಿ ಪ್ರಮುಖವಾಗಿ ಪರಿಣಾಮಗಳನ್ನು ಬೀರಲಿವೆ. ಇದಲ್ಲದೇ, ಕಾನೂನು-ಸುವ್ಯವಸ್ಥೆ, ಮಹಿಳಾ ಭದ್ರತೆ, ಆಹಾರ ಭದ್ರತೆ, ಸ್ಥಳೀಯ ಸಮಸ್ಯೆಗಳು ಈ ಚುನಾವಣೆ ಮೇಲೆ ಪರಿಣಾಮ ಬೀರಲಿವೆ.

 ಯಾವ ಭಾಗದಲ್ಲಿ ಎಷ್ಟೆಷ್ಟು?

ಯಾವ ಭಾಗದಲ್ಲಿ ಎಷ್ಟೆಷ್ಟು?

ಪಾಪ್ಯೂಲರ್‌ ಪೋಲ್ಸ್‌ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಹೈದರಾಬಾದ್‌ ಕರ್ನಾಟಕ ಭಾಗದ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 20 ರಿಂದ 22 ಸ್ಥಾನಗಳು ದೊರೆಯಲಿವೆ. ಬಿಜೆಪಿಗೆ 12-15 ಸ್ಥಾನಗಳು ಹಾಗೂ ಜೆಡಿಎಸ್‌ಗೆ 5-7 ಸ್ಥಾನಗಳು ದೊರೆಯಲಿವೆ.

ಮುಂಬೈ ಕರ್ನಾಟಕ ಭಾಗದ 44 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 16-18, ಬಿಜೆಪಿಗೆ 22-24, ಜೆಡಿಎಸ್‌ಗೆ 4-6 ಸ್ಥಾನಗಳು ದೊರೆಯಲಿವೆ.

ಮಧ್ಯ ಕರ್ನಾಟಕದ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 7-9, ಬಿಜೆಪಿಗೆ 17-19, ಜೆಡಿಎಸ್‌ಗೆ 8-9 ಸ್ಥಾನಗಳು ಸಿಗಲಿವೆ.

ಕರಾವಳಿ ಕರ್ನಾಟಕದ 19 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 5-7, ಬಿಜೆಪಿಗೆ 12-14, ಜೆಡಿಎಸ್‌ಗೆ ಸೊನ್ನೆ ಸ್ಥಾನಗಳು ದೊರೆಯಲಿವೆ.

ಮೈಸೂರು ಕರ್ನಾಟಕ ಭಾಗದ 66 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 21-23, ಬಿಜೆಪಿಗೆ 11-13, ಜೆಡಿಎಸ್‌ಗೆ 25-30 ಸ್ಥಾನಗಳು ದೊರೆಯಲಿವೆ.

ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 14-16, ಬಿಜೆಪಿಗೆ 12-14, ಜೆಡಿಎಸ್‌ಗೆ 1-2 ಸ್ಥಾನಗಳು ಸಿಗಲಿವೆ.

ಒಟ್ಟಾರೆ ಕರ್ನಾಟಕದ 224 ಕಾಂಗ್ರೆಸ್‌ಗೆ 80-84, ಬಿಜೆಪಿಗೆ 82-87, ಜೆಡಿಎಸ್‌ಗೆ 42-45 ಸ್ಥಾನಗಳು ದೊರೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+