Hosadurga Constituency: ಕಾಂಗ್ರೆಸ್ ಗೆಲುವಿನ ತಂತ್ರಕ್ಕೆ 'ಬಿಜೆಪಿ' ಟಫ್ ಫೈಟ್?, ಟಿಕೆಟ್‌ಗೆ ಕಮಲದಲ್ಲಿ ಹೆಚ್ಚಾದ ಪೈಪೋಟಿ
ಕಾಂಗ್ರೆಸ್‌ನಿಂದ ಕಸಿದುಕೊಂಡಿದ್ದ ಹೊಸದುರ್ಗ ಕ್ಷೇತ್ರವನ್ನು ಮತ್ತೆ ಗೆಲ್ಲಲ್ಲು ಕಾಂಗ್ರೆಸ್ ಸಜ್ಜಾಗಿದೆ. ಇತ್ತ ಬಿಜೆಪಿಯಲ್ಲಿ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಸ್ವಪಕ್ಷದಿಂದ ಪ್ರತಿಸ್ಪಧಿಗಳು ಹೆಚ್ಚುತ್ತಿದ್ದಾರೆ. ಮುಂದೆ ಏನು? ಎಂಬುದರ ವಿಶ್ಲೇಷಣೆ ಇಲ್ಲಿದೆ.
ಬೆಂಗಳೂರು, ಮಾರ್ಚ್ 16: ಕೋಟೆನಾಡು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯ ಪ್ರಮುಖ ತಾಲೂಕಾಗಿರುವ ಈ 'ಹೊಸದುರ್ಗ' ಕರ್ನಾಟಕದ ಅಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷವಾದದ್ದು. ಮದಕರಿನಾಯಕ ಕಾಲದಲ್ಲಿ ಹೊಸದುರ್ಗ ಸುತ್ತಲೂ ಕೋಟೆ ನಿರ್ಮಾಣವಾಗಿದೆ. ವಾಣಿವಿಲಾಸ ಸಾಗರ ಹಿನ್ನಿರಿನ ಪ್ರದೇಶ ವ್ಯಾಪ್ತಿಯಲ್ಲಿ ಹಬ್ಬಿರುವ ಕ್ಷೇತ್ರವಾಗಿದೆ. ಇಲ್ಲಿ ಸದ್ಯ ಬಿಜೆಪಿಯ ಗೂಳಿಹಟ್ಟಿ ಶೇಖರ್ ಇಲ್ಲಿನ ಹಾಲಿ ಶಾಕಸರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಕ್ಷೇತ್ರ ಜನರಿಗೆ ಕೃಷಿ ವಲಯದಲ್ಲಿ ಹೆಚ್ಚಿನ ಆಸಕ್ತಿ. ಇಲ್ಲಿನ ಭೂಮಿಯಲ್ಲಿ ಸುಣ್ಣದ ಕಲ್ಲಿನಿಂದ ಕೂಡಿದ್ದು, ಬಾಕ್ಸೈಟ್, ಕಬ್ಬಿಣದ ಅದುರು, ಮ್ಯಾಂಗನೀಸ್ ನಂತಹ ಅನೇಕ ಖನಿಜ ಸಂಪನ್ಮೂಲ ಇಲ್ಲಿದೆ.ಸಿಮೆಂಟ್ ಕಾರ್ಖಾನೆ ಸಹ ಇಲ್ಲಿದೆ. ಕಬ್ಬಿಣ ಉತ್ಪಾದನಾ ಘಟಕ ಇವೆ. ಅಲ್ಲದೇ ತೆಂಗಿನ ನಾರಿನಿಂದ ಹಗ್ಗ ಉತ್ಪಾದಿಸುವ ಸಣ್ಣ ಉದ್ಯಮಿಗಳು ಇಲ್ಲಿದ್ದಾರೆ. ಇಲ್ಲಿ ಜಾತಿ ರಾಜಕಾರಣವು ಕೆಲಸ ಮಾಡುತ್ತಿದೆ.

ಇನ್ನೂ ರಾಜಕೀಯ ಇತಿಹಾಸ ನೋಡುವುದಾದರೆ ಇಲ್ಲಿ ಕಾಂಗ್ರೆಸ್‌ನವರು ಹಾಗೂ ಜೆಡಿಎಸ್ ಮುಖ್ಯವಾಗಿ ಪಕ್ಷೇತರ ಅಭ್ಯರ್ಥಿಗಳು ಹೆಚ್ಚು ಬಾರಿ ಗೆಲುವು ಸಾಧಿಸಿದ್ದಾರೆ. ಇತ್ತೀಚಿನ ಚುನಾವಣೆಗಳ ವರ್ಷದಲ್ಲಿ ಕ್ರಮೇಣ ಕಾಂಗ್ರೆಸ್ ಗೆದ್ದು ಬೀಗುತ್ತಿತ್ತು. ಆದರೆ ಕಾಂಗ್ರೆಸ್‌ನ ಗೆಲುವಿನ ಕುದುರೆಗೆ ಬ್ರೇಕ್ ನೀಡಿದ್ದು ಬಿಜೆಪಿಯ ಗೂಳಿಹಳ್ಳಿ ಶೇಖರ್. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬರೊಬ್ಬರಿ 90,000ಕ್ಕೂ ಹೆಚ್ಚು ಮತಗಳಿಂದ ಜಯಭೇರಿ ಬಾರಿಸಿದ್ದರು. ಇದರಿಂದ ಇನ್ನೇನು ಹೊಸದುರ್ಗ ಕಾಂಗ್ರೆಸ್ ತೆಕ್ಕೆಗೆ ಸಂಪೂರ್ಣ ಬಂದೇ ಬಿಟ್ಟಿತು, ಈ ಬಾರಿಯು ಗೆಲುವು ನಮ್ಮದಾಯಿತು ಎಂದುಕೊಳ್ಳುತ್ತಿದ್ದ ಕಾಂಗ್ರೆಸ್ಸಿಗರಿಗೆ ಕ್ಷೇತ್ರ ಕೈ ತಪ್ಪಿತು. ಇದರಿಂದ ನಿರಾಶೆಗೊಂಡ ರಾಜ್ಯ ಕಾಂಗ್ರೆಸ್ ಈ ಬಾರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಹೊಸದುರ್ಗದಲ್ಲಿ ಆರ್ಭಟಿಸಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ.
ಹಾಲಿ ಶಾಸಕರಿಗೆ ಪ್ರತಿಸ್ಪರ್ಧಿಗಳು ಅಧಿಕ
ಬಿಜೆಪಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದ ಹೊಸದುರ್ಗ ಕ್ಷೇತ್ರವು ಬಣ ರಾಜಕೀಯ ಬಿಸಿತುಪ್ಪವಾಗಿದೆ. ಹಾಲಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರಿಗೆ ಪ್ರತಿಸ್ಪರ್ಧಿಗಳು ಹೆಚ್ಚಾಗಿದ್ದಾರೆ. ಇನ್ನೇನು ಚುನಾವಣೆ ಆಗಮಿಸುತ್ತಿದೆ. ಟಿಕೆಟ್ ಆಕಾಂಕ್ಷಿಗಳ ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಧಾರವನ್ನು ಟಿಕೆಟ್ ಆಕಾಂಕ್ಷಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈಗಾಗಲೇ ಗುರುವಾರ ( ಮಾರ್ಚ್ 16) ಒಂದಷ್ಟು ಕ್ಷೇತ್ರಗಳ ಟಿಕೆಟ್ ನೀಡಿದವರ ಪಟ್ಟಿ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಇದರಲ್ಲಿ ಹೊಸದುರ್ಗ ಯಾರೆಂದು ತಿಳಿಸಲಾಗಿಲ್ಲ. ಇನ್ನೊಂದು ಹಂತ ಪಟ್ಟಿಯಲ್ಲಿ ನಿರೀಕ್ಷೆಯಲ್ಲಿ ಕೈ ನಾಯಕರಿದ್ದಾರೆ.

ಟಿಕೆಟ್ ಆಕಾಂಕ್ಷಿಗಳು ಯಾರು?: ಬಿಗ್ ಫೈಟ್ ನಿರೀಕ್ಷೆ
ಈ ಬಾರಿಯು ವಿಧಾನಸಭಾ ಚುನಾವಣೆ 2023ರಲ್ಲಿ ಬಿಜೆಪಿಯಿಂದ ಗೂಳಿಹಟ್ಟಿ ಶೇಖರ್ ಅವರು ಟಿಕೆಟ್ ಬಯಸಿದ್ದಾರೆ. ಆದರೆ ಕಳೆದ ಬಾರಿಯಂತೆ ಅವರೊಬ್ಬರೆ ಟಿಕೆಟ್ ಬಯಸಿಲ್ಲ. ಈ ಸಲ ಬಿಜೆಪಿ ಮುಖಂಡರಾದ ಎಸ್ ಲಿಂಗಮೂರ್ತಿ ಮತ್ತು ಹೆಬ್ಬಳ್ಳಿ ಓಂಕಾರಪ್ಪ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಆಡಳಿತಾರೂಢ ಬಿಜೆಪಿಗೆ ಇದು ಬಿಸಿ ತುಪ್ಪವಾಗಿದೆ. ಬಿಜೆಪಿ ನಿರ್ಧಾರದ ಮೇಲೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ.
ಇನ್ನೂ ಕಾಂಗ್ರೆಸ್‌ನಿಂದ ಹಲವು ಬಾರಿ ಗೆದ್ದು, 2018ರಲ್ಲಿ ಸೋತಿದ್ದ ಬಿ.ಜಿ.ಗೋವಿಂದಪ್ಪ, ಜೊತೆಗೆ ಜಿ.ಆರ್.ಉಲ್ಲಾಸ್, ಎಂ.ಎಚ್.ಕೃಷ್ಣಮೂರ್ತಿ, ಕೆ.ಆನಂತ್ ಹಾಗೂ ಜೆಡಿಎಸ್ ನಿಂದ ಎಂ.ತಿಪ್ಪೇಸ್ವಾಮಿ ಅವರು ಟಿಕೆಟ್ ಬಯಸಿದ್ದಾರೆ. ಹಾಗೆಯೇ ಪಕ್ಷೇತರರಾಗಿ ಪಾಂಡುರಂಗ ಗರಗ, ಟಿ.ಮಂಜುನಾಥ್ ಅವರು ಚುನಾವಣಾ ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಮತದಾರರ ನಿರ್ಧಾರವೇ ಅಂತಿಮ
ಕ್ಷೇತ್ರದಲ್ಲಿ ಒಟ್ಟು 1,95 ಲಕ್ಷ ಮತದಾರರು ಇದ್ದಾರೆ. ಅದರಲ್ಲಿ 98 ಸಾವಿರ ಪುರುಷ ಮತದಾರರು, 96 ಸಾವಿರ ಮಹಿಳಾ ಮತದಾರರು ಹಾಗೂ ಇತರ ಒಬ್ಬರು ಇದ್ದಾರೆ. ಇಲ್ಲಿ ಸಹ ಜಾತಿ ರಾಜಕಾರಣ ಮಾಡಲಿದೆ. ಇಲ್ಲವೇ ಈಗಾಗಲೇ ಅಧಿಕಾರದಲ್ಲಿದ್ದ ಶಾಸಕ ಅಭಿವೃದ್ಧಿ ಕಾರ್ಯಗಳಿಂದಾಗಿ ಬಿಜೆಪಿ ಜನ ಮಣೆ ಹಾಕಬಹುದು ಎಂದು ವಿಶ್ಲೇಷಿಸಲಾಗಿದೆ. ಆದರೆ ಈ ಭಾರಿ ಶತಾಯಗತಾಯ ಹೊಸದುರ್ಗ ಕ್ಷೇತ್ರದಲ್ಲಿ ಬಿಜೆಪಿಗೆ ಬಿಗ್ ಫೈಟ್ ನೀಡುವ ಮೂಲಕ ತಮ್ಮ ತನ್ನ ಆಳ್ವಿಕೆ ನಡೆಸುವ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ. ಜೆಡಿಎಸ್ ಸಹ ಪಂಚರತ್ನ ಯಾತ್ರೆ ಮೂಲಕ ನಾಡಿನ ಜನರ ಗಮನಸೆಳೆದಿದೆ. ಆದರೆ ಮತದಾರರ ಪ್ರಭು ಯಾರಿಗೆ ಮಣೆ ಹಾಕುತ್ತಾನೆ ಎಂಬುದೇ ಅಂತಿಮ. ಆ ಕ್ಲೈಮಾಕ್ಸ್ ಬರುವು ಮೇ ತಿಂಗಳಾಂತ್ಯಕ್ಕೆ, ಅಲ್ಲಿಯವರೆ ಕಾಯಬೇಕಿದೆ.












Click it and Unblock the Notifications