Karnataka Weather: ನವೆಂಬರ್ ತಿಂಗಳಲ್ಲಿ ಭಾರೀ ವರ್ಷಧಾರೆ, ನಿಮ್ಮ ಜಿಲ್ಲೆಗಳ ಮಳೆ ರಿಪೋರ್ಟ್ ಇಲ್ಲಿದೆ

ಬೆಂಗಳೂರು, ನವೆಂಬರ್ 25: ಕರ್ನಾಟಕದ ರಾಜ್ಯದಲ್ಲಿ ಹಿಂಗಾರು ಮಳೆ ಆರಂಭದಿಂದಲೂ ಅಬ್ಬರಿಸಲು ಶುರು ಮಾಡಿತ್ತು. ನವೆಂಬರ್ ತಿಂಗಳಲ್ಲಿ ಸಹ ಕರಾವಳಿ, ಮಲೆನಾಡು, ದಕ್ಷಿಣ ಮತ್ತು ಉತ್ತರ ಒಳನಾಡು ಭಾಗದ ಜಿಲ್ಲೆಗಳ ರೈತರ ಮೇಲೆ ಕರುಣೆ ತೋರಿದೆ. ಮುಂಗಾರು ಅತೀವ ಮಳೆಯಿಂದ ಬೆಳೆ ಕಳೆದುಕೊಂಡಿದ್ದ ರೈತರಿಗೆ ಹಿಂಗಾರು ಮಳೆ ಧೈರ್ಯ ತುಂಬಿಸಿದೆ. ಏಕೆಂದರೆ ನವೆಂಬರ್ 25ದಿನ ಉತ್ತಮ ಮಳೆ ಆಗಿದೆ. ಹಾಗಾದರೆ ನಿಮ್ಮ ಜಿಲ್ಲೆಗಳಿಗೆ ಎಷ್ಟಾಗಿದೆ? ಮಳೆ ಕೊರತೆ ಮಾಹಿತಿ ಇಲ್ಲಿದೆ.

ಸೆಪ್ಟಂಬರ್ ಅಂತ್ಯಕ್ಕೆ ಮುಂಗಾರು ಕೊನೆಗೊಳ್ಳುತ್ತಿದ್ದಂತೆ ಹಿಂಗಾರು ಮಳೆ ಸುರಿಸುವ ಮೋಡಗಳು ಸಕ್ರಿಯವಾದವು. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಉಂಟಾದ ಒಂದಷ್ಟು ಬದಲಾವಣೆಗಳ ಸಹ ಉತ್ತಮ ಹಿಂಗಾರಿಗೆ ಪೂರಕವಾಯಿತು. ಒಟ್ಟಾರೆ ನವೆಂಬರ್ 1ರಿಂದ 25ರವರೆಗೆ ರಾಜ್ಯಾದ್ಯಂತ ವಾಡಿಕೆಗಿಂತ ಶೇಕಡಾ 24ರಷ್ಟು ಅಧಿಕ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

Karnataka All Districts Received More Rainfall then Normal in Nov 1 to 25th

ಹವಾಮಾನ ಕೇಂದ್ರದ ಪ್ರಕಾರ, ದಕ್ಷಿಣ ಒಳನಾಡಿನಲ್ಲಿ ವಾಡಿಕೆ (186 ಮಿ.ಮೀ.) ಮಳೆಗಿಂತ ಶೇಕಡಾ 34ರಷ್ಟು ಅಧಿಕ ಮಳೆ (248 ಮಿ.ಮೀ.) ದಾಖಲಾಗಿದೆ. ಬೆಳಗಾವಿ, ವಿಜಯಪುರ, ಹಾವೇರಿ, ಗದಗ, ಧಾರವಾಡ, ಬೀದರ್, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಲ ಉತ್ತರ ಕರ್ನಾಟಕದ ಒಳನಾಡು ಭಾಗಕ್ಕೆ ವಾಡಿಕೆ (131 ಮಿ.ಮೀ.) ಮಳೆಗಿಂತ ಶೇಕಡಾ 04ರಷ್ಟು ಹೆಚ್ಚಿನ ಮಳೆ (137ಮಿ.ಮೀ.) ಬಿದ್ದಿದೆ.

ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡ ಕರಾವಳಿ ಭಾಗಕ್ಕೆ ನವೆಂಬರ್‌ನಲ್ಲಿ ವಾಡಿಕೆಗಿಂತ (244 ಮಿ.ಮೀ.) ಶೇಕಡಾ 34ರಷ್ಟು ಅಧಿಕ (328 ಮಿ.ಮೀ.) ಭಾರೀ ಮಳೆ ಸುರಿದಿದೆ. ಅದೇ ರೀತಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳನ್ನು ಒಳಗೊಂಡ ಮಲೆನಾಡು ಭಾಗಕ್ಕೆ ವಾಡಿಕೆಗಿಂತ (210 ಮಿ.ಮೀ.) ಶೇಕಡಾ 36ರಷ್ಟು ಹೆಚ್ಚು ಮಳೆ (284 ಮಿ.ಮೀ.) ದಾಲಾಗಿದೆ.

ಈ ಮೂಲಕ ನೆಂವೆಂಬರ್ 25 ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಿಯೂ ಮಳೆ ಕೊರತೆ ಎದುರಾಗಿಲ್ಲ. ನಿರೀಕ್ಷಿತ ಮಳೆ ದಾಖಲಾಗುವ ಮೂಲಕ ಹಿಂಗಾರು ಬಿತ್ತನೆಗೆ ಅನುಕೂಲಕರ ವಾತಾವರಣ ಒದಗಿಸಿದೆ.

ಕರ್ನಾಟಕದಲ್ಲಿ ಸದ್ಯದ ಹವಾಮಾನ ಸ್ಥಿತಿ ಹೇಗಿದೆ?

ಕರ್ನಾಟಕದ ಯಾವ ಭಾಗದಲ್ಲೂ ಭಾರೀ ಮಳೆಯ ಎಚ್ಚರಿಕೆ ಇಲ್ಲ. ಬದಲಾಗಿ ತೀರಾ ಅತ್ಯಲ್ಪ ಮಳೆ ಈ ಜಿಲ್ಲೆಗಳಲ್ಲಿ ಬರಬಹುದು ಇಲ್ಲವೇ ಒಣಹವೇ ಮುಂದುವರಿಯಲೂ ಬಹುದು. ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಒಣಹವೆ ಕಂಡು ಬರಲಿದೆ ಎಂದು KSNDMC ಮಾಹಿತಿ ನೀಡಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು, ಹಾಸನ, ತುಮಕೂರು, ವಿಜಯಪುರ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಬಾಗಲಕೋಟೆ, ಬಳ್ಳಾರಿ, ಶಿವಮೊಗ್ಗ, ರಾಯಚೂರು, ಕೊಪ್ಪಳ, ಬೀದರ್, ದಾವಣಗೆರೆ, ಗದಗ ಮತ್ತು ಹಾವೇರಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಲ್ಪ ಮಳೆ ಜೊತೆಗೆ ಜೋರು ಬಿಸಲು (ಒಣಹವೆ) ಕಂಡು ಬರಲಿದೆ ಎಂದು ಹವಾಮಾನ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+