SSLC Exam 2025: 2nd ಪಿಯುಸಿ & SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಜನವರಿ 10: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024-25ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಇಂದು(ಜನವರಿ 10) ಶುಕ್ರವಾರದಂದು ಪ್ರಕಟಿಸಿದೆ. 2025ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 21ರಿಂದ ಪ್ರಾರಂಭವಾಗಿ ಏಪ್ರಿಲ್ 04ರವರೆಗೆ ನಡೆಯಲಿದೆ. ಇನ್ನು 2025ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯು ಮಾರ್ಚ್ 1ರಿಂದ ಪ್ರಾರಂಭವಾಗಿ ಮಾರ್ಚ್ 20ರವರೆಗೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ವಿವರ
*21-03-2025 ಶುಕ್ರವಾರ- ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ಇಂಗ್ಲಿಷ್, ಸಂಸ್ಕೃತ, ತಮಿಳು, ಉರ್ದು
*24-03-2025 ಸೋಮವಾರ- ಗಣಿತ, ಸಮಾಜ ಶಾಸ್ತ್ರ,
*26-03-2025 ಬುಧವಾರ- ದ್ವಿತೀಯ ಭಾಷೆ-ಇಂಗ್ಲಿಷ್, ಕನ್ನಡ
*29-03-2025 ಶನಿವಾರ- ಸಮಾಜ ವಿಜ್ಞಾನ
*02-04-2025 ಬುಧವಾರ- ವಿಜ್ಞಾನ
*04-04-2025 ಶುಕ್ರವಾರ- ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ಉರ್ದು, ಸಂಸ್ಕೃತ, ಕೊಂಕಣಿ ಅರೇಬಿಕ್, ಪರ್ಷಿಯನ್, ತುಳು

2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ವಿವರ
*01-03-2025 ಶನಿವಾರ- ಕನ್ನಡ, ಅರೇಬಿಕ್
*03-03-2025 ಸೋಮವಾರ- ಗಣಿತ, ಶಿಕ್ಷಣ ಶಾಸ್ತ್ರ, ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ
*04-03-2025 ಮಂಗಳವಾರ- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
*05-03-2025 ಬುಧವಾರ- ರಾಜ್ಯಾ ಶಾಸ್ತ್ರ, ಸಂಖ್ಯಾ ಶಾಸ್ತ್ರ
*07-03-2025 ಶುಕ್ರವಾರ- ಇತಿಹಾಸ, ಭೌತ ಶಾಸ್ತ್ರ
*10-03-2025 ಸೋಮವಾರ- ಐಚ್ಛಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
*12-03-2025 ಬುಧವಾರ- ಮನಃ ಶಾಸ್ತ್ರ, ರಸಾಯನ ಶಾಸ್ತ್ರ, ಮೂಲ ಗಣಿತ
*13-03-2025 ಗುರುವಾರ- ಅರ್ಥ ಶಾಸ್ತ್ರ
*15-03-2025 ಶನಿವಾರ- ಇಂಗ್ಲೀಷ್
*17-03-2025 ಸೋಮವಾರ- ಭೂಗೋಳ ಶಾಸ್ತ್ರ
*18-03-2025 ಮಂಗಳವಾರ - ಜೀವ ಶಾಸ್ತ್ರ, ಸಮಾಜ ಶಾಸ್ತ್ರ, ಗಣಕ ವಿಜ್ಞಾನ
*19-03-2025 ಬುಧವಾರ- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಙಾನ, ರೀಟೈಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್ತ್‌ನೆಸ್
*20-03-2025 ಗುರುವಾರ- ಹಿಂದಿ ಪರೀಕ್ಷೆಗಳು ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.












Click it and Unblock the Notifications