ಆರೋಗ್ಯ ಕವಚ ಆಂಬುಲೆನ್ಸ್ ಚಾಲಕರಿಗೆ ಗುಡ್ ನ್ಯೂಸ್: ವೇತನ, ಬೋನಸ್ ಬಗ್ಗೆ ಬಂದಿದೆ ಸರ್ಕಾರಿ ಆದೇಶ
ಬೆಂಗಳೂರು: ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು, ಸೇವೆಯ ನಿಯಂತ್ರಣಕ್ಕಾಗಿ 'ಕಮಾಂಡ್ ಕಂಟ್ರೋಲ್' ಕೇಂದ್ರವನ್ನು ಆರೋಗ್ಯ ಇಲಾಖೆಗೆ ವ್ಯಾಪ್ತಿಗೆ ತಂದು 'ಆರೋಗ್ಯ ಕವಚ' ಬಲಪಡಿಸಲು ಸರ್ಕಾರ ಸಜ್ಜಾಗಿದೆ. ಇದರ ಬೆನ್ನಲ್ಲೆ ಆರೋಗ್ಯ ಕವಚ ಆಂಬುಲೆನ್ಸ್ ಚಾಲಕರ ವೇತನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಆದೇಶದ ಪ್ರಕಾರ, 108-ಆರೋಗ್ಯ ಕವಚ ಸೇವೆಯ ಇ.ಎಂ.ಟಿ (EMT) ಮತ್ತು ಪೈಲೆಟ್‌ಗಳ ವೇತನ ಪರಿಷ್ಕರಣೆಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಇನ್ನು ಮುಂದೆ ಇವರಿಗೆ ಚಾಲ್ತಿಯಲ್ಲಿರುವ ಕನಿಷ್ಠ ಮೂಲ ವೇತನದ ಜೊತೆಗೆ, ಪ್ರತಿ ವರ್ಷದ ಸೇವಾ ಅನುಭವಕ್ಕೆ ಶೇ.2 ರಂತೆ (ಗರಿಷ್ಠ 15 ವರ್ಷಕ್ಕೆ ಶೇ. 30 ರವರೆಗೆ) 'ಅನುಭವ ಬೋನಸ್' ಹಾಗೂ ಕಾರ್ಯಕ್ಷಮತೆ ಆಧರಿಸಿ ಶೇ. 10 ರಷ್ಟು ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ಸರ್ಕಾರ ಘೋಷಣೆ ಮಾಡಿದೆ.

ಸೇವಾ ಸುಧಾರಣೆಗಾಗಿ 3,691 ಹುದ್ದೆಗಳ ಸೃಜನೆ
ರಾಜ್ಯ ಸಚಿವ ಸಂಪುಟದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡು, ಅನುಮೋದನೆ ನೀಡಲಾಗಿದೆ. ಈ ಕುರಿತು ಕರ್ನಾಟಕ ಬಜೆಟ್ 2026ರಲ್ಲಿ ಮುಖ್ಯಮಂತ್ರಿಗಳು ಮತ್ತೊಮ್ಮೆ ಘೋಷಿಸಲಿದ್ದಾರೆ. 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು 108 ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ನಿರ್ವಹಿಸಲಾಗುತ್ತಿದೆ. ಜೊತೆಗೆ 1700 ಇಎಂಟಿಎಸ್ ಮತ್ತು 1700 ಪೈಲಟ್ಸ್ ಹುದ್ದೆ ಒಳಗೊಂಡಂತೆ ಒಟ್ಟಾರೆ 3691 ಹುದ್ದೆಗಳನ್ನು ಸೃಜಿಸಿ ಆದೇಶಿಸಲಾಗಿದೆ. ಇದರಲ್ಲಿ 04 ಆಡಳಿತಾತ್ಮಕ ಹುದ್ದೆಗಳ ಒಳಗೊಂಡಿವೆ.
ಕಮಾಂಡ್ ಕಂಟ್ರೋಲ್ ನಿರ್ವಹಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ವಹಿಸಲಿದೆ. ರಾಜ್ಯಮಟ್ಟದಲ್ಲಿ ವ್ಯವಸ್ಥಿತ ತಂತ್ರಾಂಶ ಬಳಸಿಕೊಂಡು ಕಮಾಂಡ್ ಆಂಡ್ ಕಂಟ್ರೋಲ್ ಕೇಂದ್ರಗಳನ್ನು ಜಿಲ್ಲಾಡಳಿತ ಮೂಲಕ ಸ್ಥಾಪಿಸಲು ಕೂಡ ಅನುಮೋದನೆ ನೀಡಲಾಗಿದೆ.
ಆಂಬ್ಯುಲೆನ್ಸ್ ವಾಹನಗಳ ನಿರ್ವಹಣೆ, ಅವುಗಳಿಗೆ ಮಾನವ ಸಂಪನ್ಮೂಲ ಒದಗಿಸಲು ಹೊರಗುತ್ತಿಗೆಯಡಿ ನೇಮಕ ಮಾಡಲು ಜಿಲ್ಲಾ ಆರೋಗ್ಯ ಸೊಸೈಟಿ ಅಡಿ ನಡೆಸಲು ಟೆಂಡರ್ ಆಹ್ವಾನಿಸಲಾಗಿದೆ. ಈ ಟೆಂಡರ್‌ನಲ್ಲಿ ಅಂಶಗಳು ಈ ಕೆಳಗಿನಂತಿವೆ.
ಟೆಂಡರ್‌ನ ಪ್ರಮುಖಾಂಶಗಳು
1. ಟೆಂಡರ್ ಅವಧಿಯು ಒಂದು ವರ್ಷಗಳ ಅವಧಿಗೆ ಸೀಮಿತವಿದ್ದು, ಅಗತ್ಯವಿದ್ದಲ್ಲಿ ಇನ್ನೊಂದು ವರ್ಷದವರೆಗೆ ವಿಸ್ತರಿಸಬಹುದು.
2. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸೂಕ್ತವೆಂದು ಕಂಡುಬಂದಲ್ಲಿ ಅವರಿಗೆ ಆದ್ಯತೆ ನೀಡಬೇಕು.
3. ಚಾಲಕರಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ಮತ್ತು ಇಎಂಟಿ ತಂತ್ರಜ್ಞರಿಗೆ ಬಿಎಸ್‌ಸಿ ನರ್ಸಿಂಗ್ ಜೊತೆಗೆ ಇಎಂಟಿ ಕೋರ್ಸ್ ಲಭ್ಯವಿಲ್ಲದಿದ್ದಲ್ಲಿ ಬಿಎಸ್ಸಿ (ನರ್ಸಿಂಗ್) ಅಥವಾ ಅವರ ಅನುಪಸ್ಥಿತಿಯಲ್ಲಿ ಜಿಎನ್‌ಎಂ ಅಭ್ಯರ್ಥಿಗಳನ್ನು ಜಿಲ್ಲೆಗಳಲ್ಲಿ ರಜಾದಿನಗಳಲ್ಲಿ ತರಬೇತಿಯ ಮೂಲಕ 6 ತಿಂಗಳೊಳಗೆ ಇಎಂಟಿ ಪ್ರಮಾಣಪತ್ರ ಕೋರ್ಸ್‌ಗೆ ತರಬೇತಿ ಪಡೆಯಬೇಕು.
4. ಆಂಬ್ಯುಲೆನ್ಸ್ ಸಿಬ್ಬಂದಿಗೆ ಕನಿಷ್ಠ ವೇತನ ನಿಯಮದನ್ವಯ ವೇತನ ಪಾವತಿ ಜೊತೆಗೆ ವೇತನದ ಮೊತ್ತದ 20% ಕಾರ್ಯಕ್ಷಮತೆ ಆಧಾರದ ಮೇಲೆ ನೀಡಬೇಕು.
5. ಜಿಲ್ಲೆಗಳಲ್ಲಿನ ಕಾಲ್ ಸೆಂಟರ್‌ಗಳ ಸಿಬ್ಬಂದಿಗೆ ಕನಿಷ್ಠ ವೇತನದ ಪ್ರಕಾರ ಗುತ್ತಿಗೆ ಅಥವಾ ಹೊರಗುತ್ತಿಗೆ ಮುಖಾಂತರ ಪಾವತಿಸಬೇಕು.
6. ಮೇಲಿನ ಎಲ್ಲ ಕ್ರಮಗಳನ್ನು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದ ನಂತರವೇ ನಿಯಮಾನುಸಾರ ಅಂತಿಮಗೊಳಿಸುವಂತೆ ಟೆಂಡರ್ ಆಹ್ವಾನದಲ್ಲಿ ತಿಳಿಸಲಾಗಿದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications