Kannada Vs Tulu Controversy: "ತುಳು" ಭಾಷೆಯ ಮೇಲೆ "ಕನ್ನಡ ಹೇರಿಕೆ" ನಿಲ್ಲಿಸಿ ಅಭಿಯಾನ!

Kannada Vs Tulu Controversy: ಕರ್ನಾಟಕದಲ್ಲಿ ಹಿಂದಿ ಹೇರಿಕೆ ಹಾಗೂ ಪರಭಾಷೆಗಳ ಹೇರಿಕೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕರ್ನಾಟಕದಲ್ಲಿ ಕನ್ನಡದ ಬಗ್ಗೆಯೇ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕರ್ನಾಟಕದಲ್ಲಿ ಕನ್ನಡಿಗರು ಎಲ್ಲಾ ಭಾಷೆಯ ಜನರೊಂದಿಗೆ ಶತಮಾನಗಳಿಂದ ಸೌಹಾರ್ದದಿಂದ ಇದ್ದಾರೆ. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಜನರೂ ಇದ್ದಾರೆ. ಮಾತೃಭಾಷೆ ಬೇರೆ ಇದ್ದರೂ ಕರ್ನಾಟಕದಲ್ಲಿ ಕನ್ನಡಕ್ಕೆ ಗೌರವ ಕೊಟ್ಟು, ಸಾರ್ವಜನಿಕ ಪ್ರದೇಶದಲ್ಲಿ ಕನ್ನಡ ಮಾತನಾಡುವ ಹಾಗೂ ಬಳಸುವ ಲಕ್ಷಾಂತರ ಜನರಿದ್ದಾರೆ. ಕನ್ನಡ ಎಂದಿಗೂ ಇನ್ನೊಂದು ಭಾಷೆಯ ಮೇಲೆ ಹೇರಿಕೆಯಂತಹ ಪ್ರಯೋಗಗಳನ್ನು ಮಾಡಿಲ್ಲ. ಆದರೆ ಕರ್ನಾಟಕದ ಮತ್ತೊಂದು ಭಾಷೆಯಾದ ತುಳು ಮೇಲೆ ಕನ್ನಡ ಹೇರಿಕೆ ನಡೆಯುತ್ತಿದೆ ಎಂದು ಕೆಲವರು ಆರೋಪಿಸಿದ್ದು. ಇದಕ್ಕೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.

ಕನ್ನಡ ಹಾಗೂ ತುಳು ಎರಡೂ ಕನ್ನಡ ನೆಲದ ಭಾಷೆಗಳು. ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಭಾಷೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇಂತಹ ಮಹತ್ವದ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ತುಳು ಭಾಷೆಯ ಮೇಲೆ ಕನ್ನಡವನ್ನು ಹೇರಿಕೆ ಮಾಡಲಾಗುತ್ತಿದೆ. ಅದನ್ನು ಮೊದಲು ನಿಲ್ಲಿಸಬೇಕು ಎಂದು ಕೆಲವರು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಸಹಜವಾಗಿಯೇ ಕನ್ನಡಿಗರಿಂದ ವಿರೋಧ ಹಾಗೂ ಅಸಮಾಧಾನ ವ್ಯಕ್ತವಾಗಿದೆ.

Kannada Vs Tulu Controversy Campaign to Stop Kannada Imposition on Tulu language

ಕನ್ನಡ ಮತ್ತು ತುಳು ಸಹೋದರ ಭಾಷೆಗಳು ಕನ್ನಡದ ನೆಲದಲ್ಲಿ ನೂರಾರು ಉಪಭಾಷೆಗಳಿವೆ. ಕನ್ನಡಿಗರು ತುಳು ಭಾಷೆಯನ್ನು ಎಂದಿಗೂ ಹೊರಗಿನ ಭಾಷೆಯಂತೆ ಕಂಡಿಲ್ಲ. ತುಳು ಭಾಷೆ ಮಾತನಾಡುವವರು ಸಹ ಕನ್ನಡ ಭಾಷೆಯ ಬಗ್ಗೆ ಅಭಿಮಾನವೊಂದಿದ್ದಾರೆ. ಆದರೆ ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಮಾಡುವ ಪೋಸ್ಟ್‌ ಹಾಗೂ ಟ್ವೀಟ್‌ಗಳಿಂದ ಕನ್ನಡ ಹಾಗೂ ತುಳು ಭಾಷೆಯ ನಡುವೆ ಅನವಶ್ಯಕವಾದ ಸಂಘರ್ಷ ಏರ್ಪಡುತ್ತಿದೆ. ಇದೀಗ Everyday Tulu ಎನ್ನುವ ಸೋಷಿಯಲ್‌ ಮೀಡಿಯಾ ಖಾತೆಯಿಂದ ಮಾಡಲಾಗಿರುವ ಪೋಸ್ಟ್‌ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಚರ್ಚೆಗೆ ಗ್ರಾಸವಾದ ಪೋಸ್ಟ್‌: ಎವ್ರಿಡೇ ತುಳು ಎನ್ನುವ ಖಾತೆಯಿಂದ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಖಾತೆಯಲ್ಲಿ ಭಾಷೆ ಎನ್ನುವುದು ಶ್ರೇಣಿ (ಮೇಲು - ಕೀಳು) ವ್ಯವಸ್ಥೆ ಅಲ್ಲ. ತುಳು ಸಹ ಶ್ರೀಮಂತ ಹಾಗೂ ಪ್ರಾಚೀನ ಭಾಷೆಯಾಗಿದೆ. ತುಳು ಭಾಷೆಗೆ ಮನ್ನಣೆ ಬೇಕಿದೆ ದಮನ ನೀತಿಯಲ್ಲ. ತುಳುನಾಡಿನಲ್ಲಿ ಕನ್ನಡ ಹೇರಿಕೆ ಮಾಡುವುದು ಬೇಡ ಎಂದು ಬರೆದುಕೊಳ್ಳಲಾಗಿದೆ.

ಕನ್ನಡಿಗರ ವಿರೋಧ: ಇದಕ್ಕೆ ಕನ್ನಡಿಗರು ತೀವ್ರವಾಗಿ ವಿರೋಧಿಸಿದ್ದಾರೆ. ಅಲ್ಲದೆ ಈ ಪೋಸ್ಟ್‌ ಎಐ ಚಿತ್ರವನ್ನು ಬಳಸಲಾಗಿದೆ. #StopKannadaImposition ಎಂದು ಆ ಚಿತ್ರದಲ್ಲಿ ಬರೆಯಲಾಗಿದೆ. ಈ ರೀತಿಯ ಬೆಳವಣಿಗೆ ಒಳ್ಳೆಯದಲ್ಲ ಎಂದು ಕನ್ನಡಿಗರು ಹೇಳಿದ್ದಾರೆ. ನಾವು ಕರ್ನಾಟಕದ ಮೇಲೆ ಪರಭಾಷಿಕರು ಮಾಡುವ ದಬ್ಬಾಳಿಕೆಯನ್ನು ನಿಲ್ಲಿಸಬೇಕಿದೆ ಎಂದಿದ್ದಾರೆ. ಇನ್ನು ಹಲವರು ಈ ಪೋಸ್ಟ್‌ ಸರಿ ಇದೆ ಎಂದೂ ಹೇಳಿದ್ದಾರೆ. ಕನ್ನಡದ ಮೇಲೆ ಹಿಂದಿ ಹೇರಿಕೆಯಾಗುವುದು ನಿಲ್ಲಬೇಕು ಎಂದಾದರೆ, ತುಳು ಭಾಷೆಯ ಮೇಲೆ ಕನ್ನಡ ಹೇರಿಕೆ ಆಗುವುದು ಸಹ ನಿಲ್ಲಬೇಕು ಎಂದಿದ್ದಾರೆ. ಒಟ್ಟಾರೆ ಈ ಪೋಸ್ಟ್‌ಗೆ ಪರ - ವಿರೋಧ ಚರ್ಚೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+