ಕನ್ನಡ 'ವಚನ' ವಿದ್ವಾಂಸ ಡಾ. ಎಂ.ಎಂ ಕಲಬುರ್ಗಿ
ಬಿಜಾಪುರ ಮೂಲದ ಡಾ. ಎಂ.ಎಂ ಕಲಬುರ್ಗಿ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಖ್ಯಾತ ಸಂಶೋಧಕರಾಗಿದ್ದಾರೆ. ಕನ್ನಡದ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಶಾಸನ, ಜಾನಪದ, ವ್ಯಾಕರಣ, ಛಂದಸ್ಸು, ಹಸ್ತ ಪ್ರತಿಶಾಸ್ತ್ರ, ಗ್ರಂಥ ಸಂಪಾದನಾಶಾಸ್ತ್ರ, ನಾಮಶಾಸ್ತ್ರ, ಮುಂತಾದ ಹಲವಾರು ಸಂಶೋಧನಾ ಕ್ಷೇತ್ರಗಳಲ್ಲಿ ಎಂ.ಎಂ ಕಲಬುರ್ಗಿ ಅವರದ್ದು ದೊಡ್ಡ ಹೆಸರು. ಕಲಬುರ್ಗಿ ಅವರ ಪರಿಚಯಾತ್ಮಕ ಲೇಖನ ಇದಾಗಿದೆ.
ಬಿಜಾಪುರದ ಸಿಂಧಗಿ ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ 28/11/1938 ರಲ್ಲಿ ಕಲಬುರ್ಗಿ ಜನಿಸಿದರು. ತಂದೆ ಕಲಬುರ್ಗಿ ಮಡಿವಾಳಪ್ಪ ಸಂಗಪ್ಪ. ತಾಯಿ ಕಲಬುರ್ಗಿ ಗುರಮ್ಮ ಮಡಿವಾಳಪ್ಪ.
ಎಸ್ಸೆಸೆಲ್ಸಿಯಲ್ಲಿ ಪ್ರಥಮ ಸ್ಥಾನ: ಕಲಬುರ್ಗಿ ಅವರು ಯರಗಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದುಕೊಂಡರು. ಮುಲ್ಕಿ ಪರೀಕ್ಷೆ, ಎಸ್ಸೆಸೆಲ್ಸಿ ಪರೀಕ್ಷೆ(ಸಿಂಧಗಿ)ಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರತಿಭಾವಂತರು.
* ಬಿಜಾಪುರದ ವಿಜಯಾ ಕಾಲೇಜಿನಲ್ಲಿ ಬಿ.ಎ ಪದವಿ
* ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.
* 1970ರಲ್ಲಿ ಕವಿರಾಜ ಮಾರ್ಗ ಪರಿಸರದ ಕನ್ನಡ ಸಾಹಿತ್ಯ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿಯನ್ನು ಪಡೆದರು. ಡಾ. ಆರ್ ಸಿ. ಹಿರೇಮಠ ಅವರ ಮಾರ್ಗದರ್ಶನ ಅವರಿಗೆ ಸಿಕ್ಕಿತ್ತು.

* ಕನ್ನಡ ಪೀಠ ಬೆಳೆಸಿ ತಾವೂ ಬೆಳೆದರು, ಅಧ್ಯಾಪಕರಾಗಿ ಗ್ರಂಥ ಸಂಪಾದನಾ ಶಾಸ್ತ್ರವನ್ನು ಬೋಧಿಸುತ್ತಾ ಸಂಶೋಧನೆ ನಿರತರಾದರು.
* ಮುಂದೆ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಲ್ಲದೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದರು.
1988ರಲ್ಲಿ ಮಾರ್ಗ ಸಂಶೋಧನಾ ಲೇಖನಗಳ ಸಂಕಲನ ಕೃತಿಗೆ ವಿಶೇಷ ಪುರಸ್ಕಾರ ದೊರೆತಿದೆ. ಶಾಸನಗಳಲ್ಲಿ ಶಿವಶರಣರು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಶ್ರೀಚಾಮರಾಜ ಒಡೆಯರ ಪಾರಿತೋಷಕವನ್ನು ಪಡೆದಿದ್ದಾರೆ.
ಕೃತಿಗಳು: ಶಾಸನ ಸಂಪದ, ಶಾಸನಗಳಲ್ಲಿ ಶಿವಶರಣರು, ಶ್ಯಾಸನ ವ್ಯಾಸಂಗ, ಐತಿಹಾಸಿಕ, ಮಾರ್ಗ(ಎರಡು ಸಂಪುಟಗಳು), ಕವಿರಾಜ ಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಮಲ್ಲಿನಾಥ್ ಪುರಾಣ ಸಂಗ್ರಹ, ಶಬ್ದಮಣಿ ದರ್ಪಣ ಸಂಗ್ರಹ. ನೀರು ನೀರಡಿಸಿತ್ತು ಎಂಬ ಕವನ ಸಂಕಲನ, ಕೆಟ್ಟಿತ್ತು ಕಲ್ಯಾಣ ಎಂಬ ನಾಟಕವನ್ನು ರಚಿಸಿದ್ದಾರೆ.
ಸಂಶೋಧನೆ: ಕೆಲವು ಸಂಶೋಧನ ಗ್ರಂಥಗಳು:ಮಾರ್ಗ (1,2,3,4)
ಕನ್ನಡ ಹಸ್ತಪ್ರತಿ ಶಾಸ್ತ್ರ
ಕನ್ನಡ ಗ್ರಂಥ ಸಂಪಾದನ ಶಾಸ್ತ್ರ
ಕನ್ನಡ ಸಂಶೋಧನ ಶಾಸ್ತ್ರ
ಕನ್ನಡ ನಾಮವಿಜ್ಞಾನ
ಧಾರವಾಡ ಜಿಲ್ಲೆಯ ಶಾಸನಸೂಚಿ
ಮಹಾರಾಷ್ಟ್ರದ ಕನ್ನಡ ಶಾಸನಗಳು
ಶಾಸನಗಳಲ್ಲಿ ಶಿವಶರಣರು
ಶಬ್ದಮಣಿದರ್ಪಣ ಸಂಗ್ರಹ
ಕನ್ನಡ ಕೈಫಿಯತ್ತುಗಳು
ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ
ಸ್ವಾದಿ ಅರಸು ಮನೆತನ
ಸಾರಂಗಶ್ರೀ[ಪೂರ್ಣ ಪಟ್ಟಿಗೆ ಈ ಕೊಂಡಿ ಕ್ಲಿಕ್ಕಿಸಿ]
ಟಿವಿ 9 ಸತ್ಯಕಥೆ ಕಾರ್ಯಕ್ರಮದಲ್ಲಿ ಕಲಬುರ್ಗಿ ಅವರು ಮಾತುಗಳು:
ಸ್ಥಾಪಿಸಿದ ಸಂಸ್ಥೆಗಳು: ಗದುಗಿನ ತೋಂಟದಾರ್ಯ ಮಠದ 'ಲಿಂಗಾಯತ ಅಧ್ಯಯನ ಸಂಸ್ಥೆ', ಬೆಳಗಾವಿಯ ನಾಗನೂರು ಮಠದ 'ಲಿಂಗಾಯತ ಅಧ್ಯಯನ ಅಕಾಡಮಿ', ಶಿವಮೊಗ್ಗದ ಆನಂದ ಪುರ ಮಠದ 'ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆ', ನಿಡುಸೋಸಿಯ 'ಶರಣ ಸಂಸ್ಕೃತಿ ಅಕಾಡಮಿ', ಮೈಸೂರಿನ ಸುತ್ತೂರು ಮಠದ ಸಮಗ್ರ 'ಸ್ವರ ವಚನ ಮಾಲೆ' ಜೊತೆಗೆ ಕರ್ನಾಟಕ ಸರಕಾರ ಪ್ರಕಟಿಸಿರುವ 'ಸಮಗ್ರ ವಚನ ಸಂಪುಟ' ಮತ್ತು 'ಸಮಗ್ರ ದಾಸ ಸಾಹಿತ್ಯ' ಯೋಜನೆಯ ರೂವಾರಿ.
ಪ್ರಶಸ್ತಿಗಳು: ಸಂದ ಪ್ರಶಸ್ತಿ ಗೌರವಗಳು ಹಲವಾರು. 2006ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದೆಹಲಿಯ ಕನ್ನಡ ವಿದ್ಯಾರಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು.












Click it and Unblock the Notifications