New Highway Project: ಚಾಮರಾಜನಗರ-ಬೀದರ್ ಹೆದ್ದಾರಿ ಕಲ್ಯಾಣ ಪಥ ಯೋಜನೆ, ಬಿಗ್ ಅಪ್ಡೇಟ್
Bidar-Chamarajangara Highway Line Project: ಕರ್ನಾಟಕದ ದಕ್ಷಿಣ ಭಾಗದಿಂದ ಕಲ್ಯಾಣ ಕರ್ನಾಟಕದ ಕೊನೆಯ ಜಿಲ್ಲೆವರೆಗೆ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 'ಕಲ್ಯಾಣ ಪಥ' ಯೋಜನೆ ಎಂದು ಹೆಸರಿಡಲಾಗಿದೆ. ಇವೇ ಎರಡು ಜಿಲ್ಲೆಗಳ ಮಧ್ಯ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ವರ್ಷದಿಂದಲೂ ಒತ್ತಾಯವಿದೆ. ಇದೀಗ ಈ ಹೆದ್ದಾರಿ ಯೋಜನೆ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪವಾಗಿದ್ದು, ಸಚಿವರು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಹೆದ್ದಾರಿ ಯೋಜನೆಯಿಂದ ಏನೆಲ್ಲ ಪ್ರಯೋಜನ, ಎಲ್ಲೆಲ್ಲಿ ಕೆಲಸ ಆರಂಭವಾಗಿದೆ?, ಉದ್ದ, ವೆಚ್ಚ ಇತರ ಮಾಹಿತಿ ಇಲ್ಲಿದೆ.
ಗ್ರಾಮೀಣ ಭಾಗಗಳು ಒಳಗೊಂಡಂತೆ ತಾಲೂಕು, ಜಿಲ್ಲೆಗಳ ಮಾರ್ಗವಾಗಿ ಹಾದು ಹೋಗುವ ಈ ಬೀದರ್-ಚಾಮರಾಜನಗರ ನಾಲ್ಕು ಪಥಗಳ ಪ್ರಮುಖ ರಸ್ತೆ ಯೋಜನೆಗೆ ಸದ್ಯಕ್ಕೆ ಅಂದಾಜು ಸುಮಾರು 1000 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. 1100 ಕಿಲೋ ಮೀಟರ್ ಗೂ ಅಧಿಕ ಉದ್ದದ ಈ ಹೆದ್ದಾರಿ ಯೋಜನೆಯು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದು ಬೆಳಗಾವಿ ಅಧಿವೇಶನದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಯಾವೆಲ್ಲ ಜಿಲ್ಲೆಗಳಲ್ಲಿ ಹಾದು ಹೋಗುತ್ತೆ?
ವಿಧಾನಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ ಅವರು ಕೇಳಿದ ಪ್ರಶ್ನೆ ಸಚಿವರು ಉತ್ತರಿಸಿದರು. ಕರ್ನಾಟಕ ಎರಡು ಗಡಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಇದಾಗಿದೆ. ಹೆದ್ದಾರಿ ನಿರ್ಮಾಣ ಕೆಲಸಗಳು ಬೀದರ್, ಚಾಮರಾಜನಗರ, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಭಾಗಗಳಲ್ಲಿ ನಡೆಯುತ್ತಿವೆ. ಇವು ಸೇರಿದಂತೆ ದಕ್ಷಿಣ, ಉತ್ತರ ಮತ್ತು ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ಮೂಲಕ ಹೆದ್ದಾರಿ ಹಾದು ಹೋಗುತ್ತದೆ ಎಂದು ಮಾಹಿತಿ ನೀಡಿದರು.
'ಕಲ್ಯಾಣ ಪಥ' ಹೆದ್ದಾರಿ ಯೋಜನೆ ಕಾಮಗಾರಿ
ಅತೀ ಉದ್ದದ ಹೆದ್ದಾರಿ ಕಾಮಗಾರಿ ಇದಾಗಿರುವ ಕಾರಣ ಉದ್ದೇಶಿತ ಒಟ್ಟು 286 ಕಾಮಗಾರಿಗಳ ಪೈಕಿ 281 ಕಾಮಗಾರಿ ಚಾಲ್ತಿಯಲ್ಲಿವೆ. ಇತರ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 75ಕಿಲೋ ಮೀಟರ್ ಪೂರ್ಣಗೊಂಡಿದೆ. ಸದ್ಯ ಉದ್ದೇಶಿತ ಅಂದಾಜು ವೆಚ್ಚದಲ್ಲಿ 150 ಕೋಟಿ ರೂಪಾಯಿ ಬಳಕೆ ಆಗಿದೆ. ಉಳಿದ ಕೆಲಸಗಳಿಗೆ ಚುರುಕು ನೀಡುವಂತೆ ಸೂಚಿಸಲಾಗಿದೆ. ಆದಷ್ಟು ಶೀಘ್ರವೇ ಯೋಜನೆ ಪೂರ್ಣಗೊಳಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಈ ಯೋಜನೆಯಿಂದ ಆಗುವ ಪ್ರಯೋಜನಗಳು
ಈ ಹೆದ್ದಾರಿ ಹಾದು ಹೋಗುವ ಹಳ್ಳಿ, ತಾಲೂಕು, ಜಿಲ್ಲೆಗಳ ವ್ಯಾಪ್ತಿಯಲ್ಲಿ ಭವಿಷ್ಯದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಶೈಕ್ಷಣಿಕವಾಗಿ, ಕೈಗಾರಿಕೆ, ಪ್ರವಾಸೋದ್ಯಮ ವಿಚಾರದಲ್ಲಿ ಸಾಕಷ್ಟು ಅಭವೃದ್ಧಿ ಆಗಲಿದೆ. ರೈತರು, ವ್ಯಾಪಾರಿಗಳ ಸರಕು ಸಾಗಾಣೆಗೆ ಉತ್ತಮ ರಸ್ತೆ ಸಿಕ್ಕಂತಾಗುತ್ತದೆ.
ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಈ ಯೋಜನೆ ರಹದಾರಿ ಕಲ್ಪಿಸಲಿದೆ. ಈಗಾಗಲೇ ಇದ್ದ ರಸ್ತೆಗಳು ಒಂದಷ್ಟು ಅಭಿವೃದ್ಧಿ ಕಾಣಲಿವೆ. ಆರ್ಥಿಕ ಸಾಮಾಜಿಕ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಸಚಿವರು ತಿಳಿಸಿದರು. ಇಷ್ಟು ಮಾತ್ರವಲ್ಲದೇ ಬೀದರ್‌ನಿಂದ ಚಾಮರಾಜಗರ ಜಿಲ್ಲೆ ಹಾಗೂ ಹೆದ್ದಾರಿ ರಸ್ತೆಯುದ್ದಕ್ಕೂ ಆಸುಪಾಸು ಆಸ್ತಿಗಳ ಮೌಲ್ಯ ಹೆಚ್ಚುತ್ತದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ವ್ಯಾಪಾರ ಸುಧಾರಣೆಗೊಂಡು ಒಂದಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ಭವಿಷ್ಯದಲ್ಲಿ ಸಣ್ಣ ಮತ್ತು ದೊಡ್ಡ ಕೈಗಾರಿಗಳ ಉಗಮಕ್ಕೆ ಕಾರಣವಾಗಲು ಪೂರಕ ವಾತಾವರಣ ನಿರ್ಮಾಣವಾಗುತ್ತದೆ.
ಒಟ್ಟಿನಲ್ಲಿ ದಕ್ಷಿಣದಿಂದ ಉತ್ತರ/ಕಲ್ಯಾಣ ಕರ್ನಾಟಕಕ್ಕೆ ನೇರ ಹೆದ್ದಾರಿ ಮಾರ್ಗ ನಿರ್ಮಾಣ ಮೂಲಕ ಈ ಭಾಗದ ಜನರ ಕನಸು ನನಸಾಗಲಿದೆ. ರಾಜ್ಯದ ಸಾರಿಗೆ ಮೂಲಸೌಕರ್ಯ ಮತ್ತಷ್ಟು ಸುಧಾರಿಸಲಿದೆ. ಇದರಿಂದ ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾಕಷ್ಟು ಸಹಕಾರಿಯಾಗಲಿದೆ.












Click it and Unblock the Notifications