ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಪ್ರಕರಣದ ಹಿನ್ನೋಟ

ಕಲಬುರಗಿ, ಫೆ.6 : ಕಲಬುರಗಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರನ್ನು ಕೊಂದಿದ್ದು ಭೂಗತ ಪಾತಕಿ ಮುನ್ನಾ ಎಂಬುದು ಸಿಐಡಿ ವರದಿಯಿಂದ ಸಾಬೀತಾಗಿದೆ. ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ತನಿಖೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಇದರಿಂದಾಗಿ ಮಲ್ಲಿಕಾರ್ಜುನ ಬಂಡೆ ಅವರನ್ನು ಕೊಂದಿದ್ದು ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪೊಲೀಸರು ಮುನ್ನಾನನ್ನು ಹಿಡಿಯಲು ಹೋದಾಗ ಪಿಎಸ್‌ಐ ಮುರಳಿ ಅವರಿಂದ ಗನ್ ಕಿತ್ತುಕೊಂಡ ಮುನ್ನಾ, ಬಂಡೆ ಅವರತ್ತ ಗುಂಡು ಹಾರಿಸಿದ್ದಾನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. [ಮಲ್ಲಿಕಾರ್ಜುನ ಬಂಡೆ ಅಂತಿಯ ಯಾತ್ರೆಯ ಚಿತ್ರಗಳು]

ಈ ಪ್ರಕರಣದಲ್ಲಿ ಸಿಬ್ಬಂದಿಯು ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ವರದಿಯಿಂದ ಬಹಿರಂಗಗೊಂಡಿದ್ದು, ಕಲಬುರಗಿ ವಿಭಾಗದ ಡಿವೈಎಸ್‌ಪಿ ಉದಯಕುಮಾರ್‌ ಬೇವಿನಗಿಡದ್‌, ರೋಜಾ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ನಾರಾಯಣಪ್ಪ, ಹೆಡ್‌ ಕಾನ್‌ಸ್ಟೆಬಲ್‌ ಸಂಗಮನಾಥ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಜಾರ್ಜ್ ಮಾಹಿತಿ ನೀಡಿದ್ದಾರೆ.

2014ರ ಜನವರಿ 8ರ ಮಧ್ಯಾಹ್ನ ಕಲಬುರಗಿಯ ರೋಜಾ ಪೊಲೀಸ್ ಠಾಣೆ ಸಮೀಪ ಗುಂಡಿನ ದಾಳಿ ನಡೆದಿತ್ತು. ಭೂಗತ ಪಾತಕಿ ಮುನ್ನಾ ಕಾಳಗದಲ್ಲಿ ಮೃತಪಟ್ಟಿದ್ದ. ದಾಳಿಯಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಮತ್ತು ಎಎಸ್ಐ ಉದ್ದಂಡಪ್ಪ ಗಾಯಗೊಂಡಿದ್ದರು. ಮಲ್ಲಿಕಾರ್ಜುನ ಬಂಡೆ ಪ್ರಕರಣ ಒಂದು ನೆನಪು

ಪೊಲೀಸರ ಗುಂಡಿಗೆ ಬಲಿಯಾದ ಪಿಎಸ್‌ಐ ಬಂಡೆ

ಪೊಲೀಸರ ಗುಂಡಿಗೆ ಬಲಿಯಾದ ಪಿಎಸ್‌ಐ ಬಂಡೆ

ಕಲಬುರಗಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಮೃತಪಟ್ಟಿದ್ದರು. ಪೊಲೀಸರ ಗುಂಡಿನಿಂದಾಗಿ ಬಂಡೆ ಮೃತಪಟ್ಟಿದ್ದಾರೆ ಎಂಬುದು ಸಿಐಡಿ ವರದಿಯಿಂದ ಸಾಬೀತಾಗಿದೆ. ಪಿಎಸ್‌ಐ ಮುರಳಿ ಅವರಿಂದ ಗನ್ ಕಿತ್ತುಕೊಂಡ ಮುನ್ನಾ, ಬಂಡೆ ಅವರತ್ತ ಗುಂಡು ಹಾರಿಸಿದ್ದಾನೆ ಎಂದು ಗೃಹ ಸಚಿವರು ವಿಧಾನಪರಿಷತ್‌ಗೆ ತಿಳಿಸಿದ್ದಾರೆ.

ಸಿಬ್ಬಂದಿಯ ದೋಷದ ಬಗ್ಗೆ ತನಿಖೆ

ಸಿಬ್ಬಂದಿಯ ದೋಷದ ಬಗ್ಗೆ ತನಿಖೆ

ಶೂಟೌಟ್ ಪ್ರಕರಣದಲ್ಲಿ ಸಿಬ್ಬಂದಿಯು ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ವರದಿಯಿಂದ ಬಹಿರಂಗಗೊಂಡಿದ್ದು, ಕಲಬುರಗಿ ವಿಭಾಗದ ಡಿವೈಎಸ್‌ಪಿ ಉದಯಕುಮಾರ್‌ ಬೇವಿನಗಿಡದ್‌, ರೋಜಾ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ನಾರಾಯಣಪ್ಪ, ಹೆಡ್‌ ಕಾನ್‌ಸ್ಟೆಬಲ್‌ ಸಂಗಮನಾಥ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಜಾರ್ಜ್ ಹೇಳಿದ್ದಾರೆ.

ತನಿಖೆ ಮುಕ್ತಾಯಗೊಳಿಸಲಾಗಿದೆ

ತನಿಖೆ ಮುಕ್ತಾಯಗೊಳಿಸಲಾಗಿದೆ

ಕಲಬುರಗಿ ಶೂಟೌಟ್ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲಾಗಿದ್ದು, ಸಿಐಡಿ ವರದಿಯನ್ನು ಕಲಬುರಗಿಯ ಪ್ರಧಾನ ಸಿವಿಲ್‌ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿ, ಸ್ವೀಕೃತಿ ಪಡೆಯಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಕುಟುಂಬಕ್ಕೆ ಪರಿಹಾರ ವಿತರಣೆ

ಕುಟುಂಬಕ್ಕೆ ಪರಿಹಾರ ವಿತರಣೆ

ಮೃತ ಮಲ್ಲಿಕಾರ್ಜು ಬಂಡೆ ಅವರ ಕುಟುಂಬಕ್ಕೆ 55 ಲಕ್ಷ ಪರಿಹಾರ ಹಾಗೂ ನಿವೇಶನ ನೀಡಿದ್ದೇವೆ. ಬಂಡೆ ಅವರ ನಿವೃತ್ತಿ­ವರೆಗಿನ ವೇತನ ನೀಡಲಾಗುವುದು. ಅವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ ಎಂದು ಗೃಹ ಸಚಿವರು ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ.

ಗುಂಡಿನ ಕಾಳಗ ನಡೆದದ್ದು ಎಂದು?

ಗುಂಡಿನ ಕಾಳಗ ನಡೆದದ್ದು ಎಂದು?

2014ರ ಜನವರಿ 8ರ ಮಧ್ಯಾಹ್ನ ಕಲಬುರಗಿಯ ರೋಜಾ ಪೊಲೀಸ್ ಠಾಣೆ ಸಮೀಪ ಗುಂಡಿನ ದಾಳಿ ನಡೆದಿತ್ತು. ಮುನ್ನಾ ಜೊತೆಗಿನ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಪಿಎಸ್‌ಐ ಮಲ್ಲಿಕಾರ್ಜನ ಬಂಡೆ ಅವರು ಜ.15ರಂದು ಹೈದರಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಯಾರು ಈ ಭೂಗತ ಪಾತಕಿ ಮುನ್ನಾ?

ಯಾರು ಈ ಭೂಗತ ಪಾತಕಿ ಮುನ್ನಾ?

ಬ್ಯಾಂಕ್ ದರೋಡೆ, ಅಕ್ರಮವಾಗಿ ಶಸ್ತ್ರಾಸ್ತ ಹೊಂದಿದ್ದ ಆರೋಪ ಎದುರಿಸುತ್ತಿದ್ದ ಮುಂಬೈ ಮೂಲದ ಮುನ್ನಾ ರೋಜಾ ಪೊಲೀಸ್ ಠಾಣೆ ಸಮೀಪದ ಮನೆಯಲ್ಲಿ ಅಡಗಿದ್ದ. ಆತನನ್ನು ಬಂಧಿಸಲು ಪೊಲೀಸರು ಮುಂದಾದಾಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಪ್ರತಿದಾಳಿ ನಡೆಸಿದಾಗ ಮುನ್ನಾ ಮೃತಪಟ್ಟಿದ್ದ.

ಎಎಸ್ಐ ಉದ್ದಂಡಪ್ಪ ಹೇಳುವುದೇನು?

ಎಎಸ್ಐ ಉದ್ದಂಡಪ್ಪ ಹೇಳುವುದೇನು?

ಮುನ್ನಾನನ್ನು ಹಿಡಿಯುವ ಕಾರ್ಯಾಚರಣೆ ವೇಳೆ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಮತ್ತು ಎಎಸ್ಐ ಉದ್ದಂಡಪ್ಪ ಗಾಯಗೊಂಡಿದ್ದರು. ಕಾರ್ಯಾಚರಣೆ ಬಗ್ಗೆ ನಮಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಶಸ್ತ್ರಾಸ್ತ್ರ ತೆಗೆದುಕೊಂಡು ಘಟನಾ ಸ್ಥಳಕ್ಕೆ ಆಗಮಿಸುವಂತೆ ಮಾಹಿತಿ ಬಂದಿತ್ತು. ಅದರಂತೆ ನಾವು ಅಲ್ಲಿಗೆ ತೆರಳಿದ್ದೆವು. ಘಟನಾ ಸ್ಥಳಕ್ಕೆ ಹೋದಾಗ ಅಲ್ಲಿ ಹಿರಿಯ ಅಧಿಕಾರಿಗಳು ಇದ್ದರು. ಮನೆಯೊಂದಕ್ಕೆ ಹೋದೆವು ಕತ್ತಲು ತುಂಬಿತ್ತು. ಮನೆ ಬಾಗಿಲ ಬಳಿ ಹೋಗುತ್ತಿದ್ದಂತೆ ನಮ್ಮ ಮೇಲೆ ಗುಂಡಿನ ದಾಳಿ ನಡೆಯಿತು ಎಂದು ಉದ್ದಂಡಪ್ಪ ಘಟನೆ ಬಗ್ಗೆ ವಿವರಣೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+