ಸರ್ಕಾರಿ ನೌಕರರ Joining time ನಿಯಮಗಳು, ವಿವರ

ಬೆಂಗಳೂರು, ಏಪ್ರಿಲ್ 14; ಸರ್ಕಾರಿ ನೌಕರರು ಅಂದ ಮೇಲೆ ಕಾಲಕಾಲಕ್ಕೆ ನಿಯಮಾವಳಿಗಳ ಅನ್ವಯ ವರ್ಗಾವಣೆ ಸಹಜವಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯಾದ ಸರ್ಕಾರಿ ನೌಕರನಿಗೆ ಹೊಸ ಹುದ್ದೆಗೆ ಹಾಜರಾಗಲು ಸೇರಿಕೆ ಕಾಲ ಸಿಗುತ್ತದೆ. ವಿಶೇಷ ಕರ್ತವ್ಯಕ್ಕಾಗಿ ಸ್ವಲ್ಪ ಕಾಲದವರೆಗೆ ಮಾತ್ರ ಬೇರೆಡೆ ಕಳುಹಿಸಿದರೆ ಕೇವಲ ವಾಸ್ತವಿಕ ಪ್ರಯಾಣ ಸಮಯಕ್ಕೆ ಅನುಮತಿ ನೀಡಬಹುದು. ಈ ಕುರಿತು ನಿಯಮ 76 ರಿಂದ 90ರ ತನಕ ವಿವರ ನೀಡಲಾಗಿದೆ.

ಸರ್ಕಾರಿ ನೌಕರ Joining time ಬಗ್ಗೆ ನೌಕರರು ಮಾಹಿತಿ ತಿಳಿದಿರುವುದು ಉತ್ತಮ. ಕೋರಿಕೆ ಮೇರೆಗೆ ವರ್ಗಾವಣೆಯಾದಾಗ ಸೇರುವ ಕಾಲ ದೊರೆಯುವುದಿಲ್ಲ. ಪ್ರಯಾಣದ ದಿನಗಳನ್ನು ಬಳಸಲು ಬರುವುದಿಲ್ಲ. ಈ ದಿನಗಳಿಗಾಗಿ ರಜೆಯನ್ನು ಮಂಜೂರು ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ನಿಯಮ 85 ರಲ್ಲಿ ಹೇಳಿದಂತೆ ಚಾರ್ಜ್ ವಹಿಸಿಕೊಳ್ಳಲು ತಗಲುವ ದಿನಗಳನ್ನು ಮಾತ್ರ ಉಪಯೋಗಿಸಿಕೊಳ್ಳಬಹುದು ಎಂದು ನಿಮಯದಲ್ಲಿ ತಿಳಿಸಲಾಗಿದೆ.

Joining Time Rule For Government Employee After Transfer

ಕೇಂದ್ರ ಸರ್ಕಾರ/ ಇತರ ರಾಜ್ಯ ಸರ್ಕಾರ/ ಇತರ ಸಂಸ್ಥೆಗೆ ನಿಯೋಜನೆ ಮೇಲೆ ಹೋದ ರಾಜ್ಯ ಸರ್ಕಾರಿ ನೌಕರರಿಗೆ ಅವುಗಳು ರಚಿಸಿದ ನಿಯಮಗಳ ಪ್ರಕಾರ ಸೇರುವ ಕಾಲ ಸಿಗುತ್ತದೆ. ಆದರೆ ಒಪ್ಪಂದದಲ್ಲಿ ಬೇರೆ ನಿಯಮಗಳನ್ನು ಅನ್ವಯವಾಗುವಂತೆ ಕರಾರುಗಳಿದ್ದರೆ ಅದರ ಪ್ರಕಾರ ಸೇರುವ ಕಾಲ ಸಿಗುತ್ತದೆ. ಕೇಂದ್ರ ಸರ್ಕಾರ/ ಇತರ ರಾಜ್ಯ ಸರ್ಕಾರ ಇತರ ಸಂಸ್ಥೆಗಳಿಂದ ನಮ್ಮ ರಾಜ್ಯಕ್ಕೆ ನಿಯೋಜನೆ ಮೇಲೆ ಬಂದರೆ ಅವರಿಗೆ ಕ.ನಾ.ಸೇ.ನಿಯಮಾವಳಿಗಳು ಅನ್ವಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸಂದರ್ಶನದ ಸಲುವಾಗಿ ನೇಮಕಗೊಂಡ ಹುದ್ದೆಗೆ ಹಾಜರಾಗಲು ಸೇರುವ ಕಾಲ ಸಿಗುತ್ತದೆ.

ನೌಕರರು ರಾಜ್ಯದ ಒಳಗಡೆ ಅಥವಾ ಹೊರಗೆ ತರಬೇತಿಗಾಗಿ ನಿಯುಕ್ತಿಯಾದ ಅವಧಿ ಮತ್ತು ವಾಸ್ತವಿಕ ಪ್ರವಾಸದ ಅವಧಿಯನ್ನು ಸೇವಾ ಅವಧಿಯೆಂದು ಪರಿಗಣಿಸುವುದರಿಂದ ಸೇರುವ ಕಾಲ ಸಿಗುವುದಿಲ್ಲ. ಆದರೆ ತರಬೇತಿ ಮುಕ್ತಾಯವಾದ ನಂತರ ಬೇರೆ ಸ್ಥಳಕ್ಕೆ ವರ್ಗಾವಣೆಯಾದರೆ ಸೇರುವ ಕಾಲ ಸಿಗುತ್ತದೆ ಎಂದು ನಿಯಮ ಸ್ಪಷ್ಟಪಡಿಸಿದೆ.

ಸರ್ಕಾರಿ ನೌಕರನಿಗೆ ಪುನರ್ ನೇಮಕ ಆಜ್ಞೆ ದೊರೆತ ಮರು ದಿನದಿಂದ ಬೇರೆ ಸ್ಥಳಕ್ಕೆ ಹಾಜರಾಗಲು ಮಾತ್ರ ಸೇರುವ ಕಾಲ ಸಿಗುತ್ತದೆ. ಮೊದಲಿದ್ದ ಸ್ಥಳದಲ್ಲಿಯೇ ಮುಂದುವರಿಸಲ್ಪಟ್ಟರೆ ಸೇರಿಕೆ ಕಾಲ ಸಿಗುವುದಿಲ್ಲ. 2000 ಕಿ. ಮೀ. ಗೆ ಮೇಲ್ಪಟ್ಟು 15 ದಿನಗಳು, ಆದರೆ ವಿಮಾನದ ಮೂಲಕ ಪ್ರಯಾಣಿಸಿದಾಗ 12 ದಿನಗಳಿಗೆ ಸೀಮಿತ ರೂ. 20025 ಮತ್ತು ಅಧಿಕ ಮೂಲ ವೇತನ ಪಡೆಯುವ ನೌಕರರು ವರ್ಗಾವಣೆ ಕಾಲಕ್ಕೂ ವಿಮಾನದ ಮೂಲಕ ಪ್ರಯಾಣಿಸಬಹುದು.

Karnataka-government

ಸೇರಿಕೆ ಕಾಲದಲ್ಲಿದ್ದಾಗ ವರ್ಗಾವಣೆ; ಸೇರಿಕೆ ಕಾಲದಲ್ಲಿರುವಾಗ ಎರಡನೇ ವರ್ಗಾವಣಾ ಆಜ್ಞೆ ಮತ್ತೊಂದು ಸ್ಥಳಕ್ಕೆ ಆದರೆ ಉಪಯೋಗಿಸಿದ ಸೇರಿಕೆ ಕಾಲವು ಸೇರಿ ವರ್ಗಾವಣೆ ಆಜ್ಞೆ ದೊರೆತ ಮರುದಿನದಿಂದ ನಿಯಮ 78 ರಂತೆ ಪುನಃ ಸೇರಿಕೆ ಕಾಲ ಸಿಗುತ್ತದೆ. ಎರಡನೇ ಸೇರಿಕೆ ಕಾಲಕ್ಕೆ ಆಜ್ಞೆ ಕೈ ಸೇರುವ ಸ್ಥಳದಿಂದಲೇ ವರ್ಗಾವಣೆಯಾಗಿದೆ ಎಂದು ಲೆಕ್ಕ ಹಾಕಬೇಕು.

ಒಂದು ವೇಳೆ ಹೊರ ದೇಶಗಳಲ್ಲಿ ಉನ್ನತ ಶಿಕ್ಷಣ ಅಥವಾ ತರಬೇತಿ ಮುಗಿದ ನಂತರ ತಮ್ಮ ಸೇವಾ ಸ್ಥಳಕ್ಕೆ ಹಾಜರಾಗಲು ಗರಿಷ್ಠ 7 ದಿನಗಳು ಸೇರುವ ಕಾಲ ಲಭ್ಯವಿರುತ್ತದೆ. ಹೊರ ದೇಶಗಳಲ್ಲಿ ನಿಯೋಜನೆ ಮೇಲೆ ಇದ್ದವರಿಗೂ ಗರಿಷ್ಠ 7 ದಿನಗಳ ಕಾಲ ಸೇರಿಕೆ ಕಾಲ ಲಭ್ಯ. ಸಾರ್ವತ್ರಿಕ ರಜಾ ದಿನಗಳನ್ನು ಸೇರುವ ಕಾಲದ ಮಧ್ಯದಲ್ಲಿ ಬಳಸಲು ಬರುವುದಿಲ್ಲ. ಈ ರಜಾ ದಿನಗಳು ಸೇರುವ ಕಾಲವೆಂದು ಪರಿಗಣಿಸಲ್ಪಡುತ್ತದೆ. ಆದರೆ ಸೇರುವ ಕಾಲದ ನಂತರ ಬಂದ ಸಾರ್ವತ್ರಿಕ ರಜಾ ದಿನಗಳನ್ನು ಬಳಸಬಹುದು.

ಸಾಂದರ್ಭಿಕ ರಜೆಯನ್ನು ಸೇರುವ ಕಾಲದೊಂದಿಗೆ ತೆಗೆದುಕೊಳ್ಳಲು ಬರುವುದಿಲ್ಲ. ವರ್ಗಾವಣೆ ಆದಾಗ ಬೇರೆ ವಿವಿಧ ರಜೆಯನ್ನು ಕೇವಲ ವೈದ್ಯಕೀಯ ಮಂಡಳಿ ನೀಡಿದ ದೃಢೀಕರಣ ಪತ್ರದ ಮೇಲೆ ಮಾತ್ರ ಮಂಜೂರು ಮಾಡಬಹುದು. ರಜೆಯ ಅವಧಿ ಎಷ್ಟೇ ಇದ್ದರೂ ವೈದ್ಯಕೀಯ ಮಂಡಳಿ ನೀಡಿದ ದೃಢೀಕರಣ ಪತ್ರ ಬೇಕು.

ಸೇರಿಕೆ ಕಾಲದ ಜೊತೆಗೆ ಬಿಡುವನ್ನು ಸಂಯೋಜಿಸಬಹುದು. ಆಡಳಿತ ಹಿತದೃಷ್ಟಿಯಿಂದ ಮತ್ತು ಅವಶ್ಯ ಕಾರ್ಯ ನಿಮಿತ್ತವಾಗಿ ಸೇರಿಕೆ ಕಾಲದಲ್ಲಿ ಕಡಿತಗೊಳಿಸಬಹುದು. ಕೇವಲ ವಾಸ್ತವಿಕ ಪ್ರಯಾಣ ಕಾಲಕ್ಕೆ ಸೀಮಿತಗೊಳಿಸಬಹುದು. ಪ್ರಭಾರ ವಹಿಸಿಕೊಳ್ಳಲು ಅಧಿಕ ಸೇರುವ ಕಾಲವಿದೆ. ಈ ನಿಯಮದ ಅಡಿ ಕೊಟ್ಟಿರುವ ಪ್ರಕಾರ ಪದ ಮುಕ್ತ ಅಧಿಕಾರಿಗೆ (Relieving officer) ಮಾತ್ರ ಅಧಿಕ ಸೇರಿಕೆ ಕಾಲ ಸಿಗುತ್ತದೆ.

ಅತಿವೃಷ್ಟಿ, ನೆರೆ ಹಾವಳಿ, ಅಪಘಾತ, ಮುಷ್ಕರ ಇಂತಹ ಕಾರಣಗಳಿಂದ ಇಲಾಖೆ ಮುಖ್ಯಸ್ಥರು ಗರಿಷ್ಠ 15 ದಿನಗಳವರೆಗೆ ವಿಸ್ತರಿಸಬಹುದು. ಇದಕ್ಕೂ ಹೆಚ್ಚಿಗೆ ವಿಸ್ತರಿಸಲು ಸರಕಾರದ ಮಂಜೂರಾತಿಬೇಕು.
ಬಳಸದ ಸೇರಿಕೆ ಕಾಲವನ್ನು ಗಳಿಕೆ ರಜೆ ಖಾತೆಗೆ ಜಮೆ ಮಾಡಬೇಕು ಮತ್ತು ಅದನ್ನು ಗಳಿಕೆ ರಜೆ ಎಂದು ಪರಿಗಣಿಸಬೇಕು. ಸೇರಿಕೆ ಕಾಲದ ನಂತರ ನಂತರವೂ ಸರ್ಕಾರಿ ನೌಕರನು ಹುದ್ದೆಗೆ ಹಾಜರಾಗದಿದ್ದಲ್ಲಿ ನಿಯಮ 106ಎ ಪ್ರಕಾರ ಅನಧಿಕೃತ ಗೈರುಹಾಜರಿ ಎಂದು ಪರಿಗಣಿಸತಕ್ಕದ್ದು ಹಾಗೂ ಆ ಅವಧಿಯ ದಿನಗಳನ್ನು ಅರ್ಧವೇತನ ರಜೆಯ ಲೆಕ್ಕದಿಂದ ಕಡಿಮೆ ಮಾಡತಕ್ಕದ್ದು.

ಹಿಂದಿನ ಹುದ್ದೆಯಲ್ಲಿ ಅವನು ಪಡೆಯುತ್ತಿದ್ದ ವೇತನದ ದರದಲ್ಲಿ ಸೇರಿಕೆ ಕಾಲದ ಅವಧಿಗೆ ವೇತನ ಸಿಗುವುದು, ಆದರೆ ಸೇರಿಕೆ ಕಾಲದ ಅವಧಿಗೆ ವಾಹನ ಭತ್ಯೆ, ವಿಶೇಷ ಭತ್ಯೆ, ಯೋಜನಾ ಭತ್ಯೆ, ಖಾಯಂ ಪ್ರವಾಸ ಭತ್ಯೆ ಇವು ಸಿಗುವುದಿಲ್ಲ. ಸರ್ಕಾರಿ ನೌಕರನಿಗೆ ಸಿಗುವ ಎಲ್ಲ ಸೇವಾ ಸೌಲಭ್ಯಗಳಿಗೆ ಸೇರಿಕೆ ಕಾಲವು ಕರ್ತವ್ಯದ ಅವಧಿ ಎಂದು ಪರಿಗಣಿಸಲ್ಪಡುತ್ತದೆ ಎಂದು ನಿಯಮ ಹೇಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+